ಉಚ್ಚಮಟ್ಟದ ಫಿನಿಶಿಂಗ್ ಮಾಡುವ ಹೋನಿಂಗ್ ಮಶಿನ್

@@NEWS_SUBHEADLINE_BLOCK@@

Udyam Prakashan Kannad    08-Oct-2020   
Total Views |

1_1  H x W: 0 x
ಅತ್ಯಾಧುನಿಕ ಇಂಜಿನಿಯರಿಂಗ್ ಪ್ರಕ್ರಿಯೆಯು ಉಚ್ಚ ಗುಣಮಟ್ಟದ ಮತ್ತು ನಿರಂತರತೆಯುಳ್ಳ ಕೆಲಸವನ್ನು ಅಪೇಕ್ಷಿಸುತ್ತದೆ. ಸ್ವಾಭಾವಿಕವಾಗಿಯೇ ಯಂತ್ರಣೆಯ ಪ್ರಕ್ರಿಯೆಯನ್ನು ನಿರ್ದೋಷವಾಗಿ ಹೆಚ್ಚು ನಿಖರವಾಗಿ ಮಾಡುವುದು ಮತ್ತು ಸರಳೀಕರಿಸುವುದು ಕಠಿಣವಾಗಿರುತ್ತದೆ. ಹೋನಿಂಗ್ ಇದೊಂದು ಇದೇ ರೀತಿಯ ನಿರ್ದೋಷವಾದ ನಿಖರತೆಯ ಆಪರೇಶನ್ ಆಗಿದೆ.
ಹೋನಿಂಗ್ ಇದು ರಂಧ್ರಗಳ (ಬೋರ್) ಸರ್ಫೇಸ್ ನಿರ್ದೋಷವಾಗಿ ತಯಾರಿಸುವ ಒಂದು ಅಬ್ರೆಸಿವ್ ಯಂತ್ರಣೆಯ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಒಂದು ಅಬ್ರೆಸಿವ್ ಗ್ರೈಂಡಿಂಗ್ ಸ್ಟೋನ್ ರಂಧ್ರದ ಸರ್ಫೇಸ್ ನಲ್ಲಿ ನಿಯಂತ್ರಿಸಲ್ಪಟ್ಟ ಒತ್ತಡ ನೀಡಿ ಉರುಟಾಗಿ ಮತ್ತು ಹಿಂದೆ-ಮುಂದೆ ತಿರುಗಿಸಲಾಗುತ್ತದೆ. ಅಪೇಕ್ಷಿಸಿರುವ ಪರಿಣಾಮಗಳನ್ನು ಪಡೆಯುವಲ್ಲಿ ಸ್ಪಿಂಡಲ್ ನ ರೊಟೇಶನ್ ಮತ್ತು ಹಿಂದೆ-ಮುಂದೆ ಆಗುವ ಚಟುವಟಿಕೆ ಈ ಕ್ರಿಯೆಯನ್ನು ತುಂಬಾ ಸೂಕ್ಷ್ಮವಾಗಿ ನಿಯಂತ್ರಿಸಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹೋನಿಂಗ್ ಇದು ಒಂದು ರೀತಿಯಲ್ಲಿ ಕಡಿಮೆ ಮಟೀರಿಯಲ್ ತೆಗೆದು ರಂಧ್ರಗಳ ಫಿನಿಶಿಂಗ್ ಮಾಡುವ ಪ್ರಕ್ರಿಯೆಯಾಗಿದೆ. ಉಚ್ಚಮಟ್ಟದ ಡೈಮೆನ್ಶನಲ್ ಮತ್ತು ಜಾಮೆಟ್ರಿಕಲ್ ನಿಖರತೆ ಮತ್ತು ನಿರ್ದೋಷವಾದ ಸರ್ಫೇಸ್ ಫಿನಿಶ್ ನ ಆವಶ್ಯಕತೆ ಇರುವ ಯಂತ್ರಭಾಗಗಳಿಗೆ ಇದನ್ನು ಬಳಸಲಾಗುತ್ತದೆ.
ಇದನ್ನು ಬಳಸಲಾಗುವ ಪ್ರಾತಿನಿಧಿಕವಾದ ಕೆಲವು ಉದಾಹರಣೆಗಳನ್ನು ಈ ಮುಂದೆ ನೀಡಲಾಗಿದೆ. ವಾಲ್ವ್ ಗೈಡ್, ಸಿಲಿಂಡರ್ ಲೈನರ್, ಕನೆಕ್ಟಿಂಗ್ ರಾಡ್, ರೇಕರ್ ಆರ್ಮ್, ಗೇರ್ ಶಿಫ್ಟರ್ ಫೋರ್ಕ್, ಗೇರ್, ಯೋಕ್, ಸ್ಪ್ರಾಕೇಟ್, ಸ್ಲೈಡರ್ ಬ್ಲಾಕ್ ಇತ್ಯಾದಿ ಇಂಜಿನ್ ನ ಭಾಗಗಳು, ಹೈಡ್ರಾಲಿಕ್ ಡೈರೆಕ್ಷನ್ ಕಂಟ್ರೋಲ್ ವಾಲ್ವ್, ಸ್ಪೂಲ್, ಹೈಡ್ರಾಲಿಕ್ ಮೋಟರ್ ಪಾರ್ಟ್ ಇತ್ಯಾದಿ. ಹಾಗೆಯೇ ಏರೋಸ್ಪೇಸ್ ಯಂತ್ರಗಳ ಘಟಕಗಳು, ಟರ್ಬೊ ಚಾರ್ಜರ್ ಯಂತ್ರಭಾಗಗಳು, ಫ್ಯುಯೇಲ್ ಇಂಜೆಕ್ಷನ್ ಯಂತ್ರಭಾಗಗಳು, ರೆಫ್ರಿಜರೇಶನ್ ಯಂತ್ರಗಳ ಘಟಕಗಳು ಇತ್ಯಾದಿಗಳಲ್ಲಿ ಹೋನಿಂಗ್ ಪ್ರಕ್ರಿಯೆಯನ್ನು ಬಳಸಲಾಗುತ್ತದೆ.

ಮಶಿನ್

2_1  H x W: 0 x 
ಖುಷಬೂ ಇಂಜಿನಿಯರಿಂಗ್ ಇವರು ಪ್ರಾರಂಭದಲ್ಲಿ ಪಾರಂಪರಿಕವಾದ ಮ್ಯಾನ್ಯುವಲ್ ಹಾರಿಝಾಂಟಲ್ ಹೋನಿಂಗ್ ಮಶಿನ್ ಅಭಿವೃದ್ಧಿ ಮಾಡಿದರು. ಒಂದು ಪ್ರಕ್ರಿಯೆ ಎಂದು ನೋಡಿದಾಗ, ಹೋನಿಂಗ್ ನಲ್ಲಿ ಉಚ್ಚಮಟ್ಟದ ಮಾನವನ ಕೌಶಲ್ಯಗಳ ಆವಶ್ಯಕತೆ ಇದೆ. ಇದರಿಂದಾಗಿ ಸಾಂಪ್ರದಾಯಿಕ ಹೋನಿಂಗ್ ಮಶಿನ್ ನ ಉತ್ಪಾದಕತೆ ಕಡಿಮೆ ಇರುತ್ತದೆ. ಕಾಲಾಂತರದಲ್ಲಿ ಗ್ರಾಹಕರು (ಈಟನ್ ಹೈಡ್ರಾಲಿಕ್ ಕಂಪನಿ ಇವರು) ಉಚ್ಚ ಬೋರ್ ನ್ನು ನಿರ್ದೋಷದೊಂದಿಗೆ ಉಚ್ಚಮಟ್ಟದ ಉತ್ಪಾದಕತೆ ನೀಡುವ ಮಶಿನ್ ಗಳ ಬೇಡಿಕೆಯನ್ನು ಸಲ್ಲಿಸಿದರು. ಹಾಗೆಯೇ ನುರಿತ ಆಪರೇಟರ್ ನಲ್ಲಿ ಅವಲಂಬನೆಯನ್ನೂ ಕಡಿಮೆ ಮಾಡುವುದನ್ನು ಅಪೇಕ್ಷಿಸಲಾಗಿತ್ತು.

3_1  H x W: 0 x 
 
ಹೋನಿಂಗ್ ನಲ್ಲಿ ಮಾಡಿರುವ ನೂತನವಾದ ಬೆಳವಣಿಗೆ ಎಂದರೆ, ಸಿಂಗಲ್ ಪಾಸ್ ಹೋನಿಂಗ್. ಸಿಂಗಲ್ ಪಾಸ್ ಹೋನಿಂಗ್ ತಂತ್ರಜ್ಞಾನವನ್ನು ಬಳಸಿ ಪ್ರತಿಯೊಂದು ಯಂತ್ರಭಾಗಗಳಿಗೆ ಬರುವ ಖರ್ಚು ತುಂಬಾ ಕಡಿಮೆ, ಹೆಚ್ಚು ಕಠಿಣವಾದ ಟಾಲರನ್ಸ್ ಇರುವ ಉತ್ಪಾದನೆಯನ್ನು ಉಚ್ಚಮಟ್ಟದ ರಿಪಿಟ್ಯಾಬಿಲಿಟಿಯಲ್ಲಿ ಪಡೆಯುವುದೂ ಸಾಧ್ಯ. ಹೋನಿಂಗ್ ಮೈಕ್ರಾನ್ ನ ಹಂತವೂ ನಿಖರವಾಗಿಯೂ ಲಭಿಸುತ್ತದೆ.
ಮೇಲಿನ ಎಲ್ಲ ಅಂಶಗಳನ್ನು ಗಮನಿಸಿ, ಖುಷಬೂ ಇಂಜಿನಿಯರಿಂಗ್ ಇವರು ಸಿಂಗಲ್ ಪಾಸ್ ಪ್ರೊಗ್ರೆಸಿವ್ ಹೋನಿಂಗ್ ಮಶಿನ್ ಅಭಿವೃದ್ಧಿ ಪಡಿಸಿದರು.
 
ರಂಧ್ರಗಳಲ್ಲಿ ಒಮ್ಮೆ ನಿರ್ಧಾರಿತ ಆಕಾರದ ಟೂಲ್ ಪಾಸ್ ಮಾಡಿ ಪೂರ್ವ ನಿರ್ಧಾರಿತ (ಪ್ರಿ-ಡಿಸೈಡೆಡ್) ಮಟೀರಿಯಲ್ ನ ಹೋನಿಂಗ್ ಮಾಡುವಂತಹ ತಂತ್ರಜ್ಞಾನವನ್ನು ಬಳಸಲಾಗಿತ್ತು. ಈ ರೀತಿಯಲ್ಲಿ ಒಂದರ ನಂತರ ಇನ್ನೊಂದು 4-6 ಸಲ ಮಾಡಿದ ನಂತರ ರಂಧ್ರಗಳಲ್ಲಿರುವ 40 ಅಥವಾ 60 ಮೈಕ್ರಾನ್ ಮಟೀರಿಯಲ್ ತೆಗೆಯಬಹುದಾದಂತಹ ವ್ಯವಸ್ಥೆ ಇದೆ. ಟೂಲ್ ಡೈಮಂಡ್ ಕೋಟಿಂಗ್ ಇರುವುದರಿಂದ ಸವೆತವೂ ತುಂಬಾ ಕಡಿಮೆ ಇರುತ್ತದೆ. ವಿಸ್ತರಣೆಯ (ಎಕ್ಸ್ ಪಾನ್ಶನ್) ಹೊರತಾಗಿ ಟೂಲ್ ಪಾಸ್ ಮಾಡಿದ್ದರಿಂದ ಆಪರೇಶನ್ ವೇಗವಾಗಿ ಆಗುತ್ತದೆ ಮತ್ತು ಸಿ.ಎನ್.ಸಿ. ನಿಯಂತ್ರಣೆಯಿಂದಾಗಿ ಈ ಪ್ರಕ್ರಿಯೆಯು ತುಂಬಾ ಉಚ್ಚಮಟ್ಟದ ನಿಖರತೆಯಿಂದ ಮತ್ತು ನಿರಂತರವಾಗಿ ನಿಯಂತ್ರಿಸಲಾಗುತ್ತದೆ. ಮಶಿನ್ ನ ದೃಢತೆಯೂ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ.

4_1  H x W: 0 x 
ಹೊಸ ಪರಿಕಲ್ಪನೆಯನ್ನು ಸ್ಥಿರಪಡಿಸುವುದು ಯಾವಾಗಲೂ ತುಂಬಾ ಕಷ್ಟಕರವಾಗಿರುತ್ತದೆ. ಸಂಪೂರ್ಣವಾದ ಡ್ರಾಯಿಂಗ್ ತಂತ್ರಜ್ಞಾನದ ಸಹಾಯದಿಂದ ಮತ್ತು ನುರಿತ ಡಿಸೈನ್ ತಂಡದ ಸಹಾಯದಿಂದ ಸಿಂಗಲ್ ಪಾಸ್ ಪ್ರೊಗ್ರೆಸಿವ್ ಹೋನಿಂಗ್ ತಂತ್ರಜ್ಞಾನವನ್ನು ತಮ್ಮ ದೇಶದಲ್ಲಿ ಅಭಿವೃದ್ಧಿ ಮಾಡುವುದು ನಮಗೆ ಸಾಧ್ಯವಾಯಿತು. ಡಿಸೈನ್ ನ ಪ್ರತಿಯೊಂದು ಹಂತದಲ್ಲಿ ಸ್ಟ್ರೆಸ್ ಎನಾಲಿಸಿಸ್ ಮಾಡುವುದು ಮತ್ತು ಡಿಸೈನ್ ದೃಢೀಕರಿಸುವುದು ಅಥವಾ ಸುಧಾರಿಸುವುದೂ ಆವಶ್ಯಕವಾಗಿತ್ತು. ಮಶಿನ್ ನ ಉತ್ಪಾದನೆಯನ್ನು ಮಾಡುವ ಭಾಗವೂ ಅಷ್ಟೇ ಮಹತ್ವದ್ದಾಗಿತ್ತು. ಮ್ಯಾನ್ಯುಫ್ಯಾಕ್ಚರಿಂಗ್ ಟಾಲರನ್ಸ್ ನ ಉಚ್ಚಮಟ್ಟದ ಸ್ಪೆಸಿಫಿಕೇಶನ್ ನೀಡುವಂತಹ ಯೋಗ್ಯ ರೀತಿಯ ವೆಂಡರ್ ನ ಆಯ್ಕೆಯನ್ನು ಮಾಡಿದ್ದರಿಂದ ನಮ್ಮ ಮೊದಲನೆಯ ಮಶಿನ್ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ತೇರ್ಗಡೆಯಾಯಿತು. 

ಮಶಿನ್ ನ ಮಹತ್ವದ ವೈಶಿಷ್ಟ್ಯಗಳು

5_1  H x W: 0 x 
 
ಸ್ಪಿಂಡಲ್/ಟೂಲ್ ಗಳ ಸಂಖ್ಯೆ - 6
⦁ ಗರಿಷ್ಠ ವ್ಯಾಸ - 40 ಮಿ.ಮೀ.
⦁ ಗರಿಷ್ಠ ಆಳ - 150 ಮಿ.ಮೀ.
⦁ ಇಂಡೆಕ್ಸಿಂಗ್ ನಿಖರತೆ - 15 ಸೆಕಂಡುಗಳು
⦁ ಪೀಡ್ ರೇಟ್ – 2500 ಮಿ.ಮೀ./ನಿಮಿಷ
⦁ ರೇಪಿಡ್ ಟ್ರೆವರ್ಸ್ Z – 5000 ಮಿ.ಮೀ./ನಿಮಿಷ
⦁ ರಂಧ್ರಗಳ ನಿಖರತೆ – 2-5 ಮೈಕ್ರಾನ್
⦁ ಆಕಾರದ ರಿಪಿಟ್ಯಾಬಿಲಿಟಿಯ ಸಾಮರ್ಥ್ಯ (Cpk) 1.67
⦁ ಅಕ್ಷಗಳ ಚಟುವಟಿಕೆಗೋಸ್ಕರ AC ಸರ್ವೋ ಮೋಟರ್

ಉದಾಹರಣೆ

6_1  H x W: 0 x 
1. ಟ್ರಾನ್ಸ್ ಮಿಶನ್ ಗೇರ್ : ಶಾಫ್ಟ್ ನಲ್ಲಿ ಉಚ್ಚಮಟ್ಟದ ಫಿಟ್ ಮೆಂಟ್ ಪಡೆಯಲು ಎಲ್ಲ ಟ್ರಾನ್ಸ್ ಮಿಶನ್ ಗೇರ್ ನ ಹೋನಿಂಗ್ ಮಾಡಲಾಗುತ್ತದೆ. ಇದರ ಪರಿಣಾಮದಿಂದಾಗಿ ಶಬ್ದವು ಕಡಿಮೆಯಾಗುತ್ತದೆ, ಟಾರ್ಕ್ ನ ಟ್ರಾನ್ಸ್ ಮಿಶನ್ ಮತ್ತು ಟ್ರಾನ್ಸ್ ಮಿಶನ್ ನ ಕೆಲಸದ ಸಾಮರ್ಥ್ಯ ಸುಧಾರಿಸುತ್ತದೆ. ಸಾಮಾನ್ಯವಾಗಿ ಹೀಟ್ ಟ್ರೀಟ್ ಮೆಂಟ್ ನಂತರ ಗೇರ್ ನಲ್ಲಿರುವ ರಂಧ್ರವು ಕೆಲವು ಮೈಕ್ರಾನ್ ನಿಂದ ಕಾಂಪ್ರೆಸ್ ಆಗುತ್ತದೆ. ಅಲ್ಲದೇ ಜಾಮೆಟ್ರಿಕಲ್ ನಿಖರತೆಯೂ ಹಾಳಾಗುತ್ತದೆ. ಹೋನಿಂಗ್ ಪ್ರಕ್ರಿಯೆಯಿಂದಾಗಿ ಉರುಟುತನ, ಟೇಪರ್ ಮತ್ತು ಸರ್ಫೇಸ್ ಫಿನಿಶ್ ಇಂತಹ ಜಾಮೆಟ್ರಿಯಲ್ಲಿ ಸುಧಾರಣೆಯೂ ಆಗುತ್ತದೆ. ಇದೇ ವೇಳೆಯಲ್ಲಿ ಬೋರ್ ಟೂ ಫೇಸ್ ರನ್ ಔಟ್ ಮತ್ತು ಗೇರ್ ಪಿ.ಸಿ.ಡಿ. ರನ್ ಔಟ್ ಹಾಗೆಯೇ ಇಡಲಾಗುತ್ತದೆ.
ಕೆಲಸದ ವಿವರಗಳು
ಮಟೀರಿಯಲ್ : ಹಾರ್ಡನ್ಡ್ ಸ್ಟೀಲ್
ತೆಗೆಯಲಾಗಿರುವ ಮಟೀರಿಯಲ್ : 0.040 ಮಿ.ಮೀ.
ವ್ಯಾಸ : 38.00 ಮಿ.ಮೀ.
ಉದ್ದ : 18 ಮಿ.ಮೀ.
ಪಾಸ್ ಗಳ ಸಂಖ್ಯೆ : 4
 
7_1  H x W: 0 x
 
2. ಹೈಡ್ರಾಲಿಕ್ ವಾಲ್ವ್ : ಇದೊಂದು ತುಂಬಾ ವೈಶಿಷ್ಟ್ಯಪೂರ್ಣವಾದ ಹೋನಿಂಗ್ ಆಪರೇಶನ್. ವಾಲ್ವ್ ಬಾಡಿಯ ರಂಧ್ರದಲ್ಲಿ ಸ್ಪೂಲ್ ನ ಫಿಟ್ ಮೆಂಟ್ 4-5 ಮೈಕ್ರಾನ್ ಗಿಂತ ಕಡಿಮೆ ಇರುತ್ತದೆ. ಅಂದರೆ ರಂಧ್ರಗಳ ಜಾಮೆಟ್ರಿಕಲ್ ಮಾಪನಗಳು 2 ಮೈಕ್ರಾನ್ ಗಿಂತ ಕಡಿಮೆ ಇರಬೇಕಾಗುತ್ತವೆ. ಹಾಗೆಯೇ ಸರ್ಫೇಸ್ ಫಿನಿಶ್ ಕೂಡಾ 0.2-0.4 Ra ಇರಬೇಕಾಗುತ್ತದೆ. ಈ ಸ್ಥಿತಿಯಲ್ಲಿ ರಂಧ್ರದ ಮಾಪನಗಳು 20-30 ಮೈಕ್ರಾನ್ ನಷ್ಟು ಇರುತ್ತವೆ. ಹೋನಿಂಗ್ ಪ್ರಕ್ರಿಯೆಯಿಂದಾಗಿ ರಂಧ್ರದ ಉರುಟುತನ ಮತ್ತು ಸರಳತೆಯು ಸುಧಾರಿಸಲ್ಪಟ್ಟು 2 ಮೈಕ್ರಾನ್ ಗಿಂತ ಕಡಿಮೆಯಾಗುತ್ತದೆ.
ಕೆಲಸದ ವಿವರಗಳು
ಮಟೀರಿಯಲ್ : ಕಾಸ್ಟ್ ಆಯರ್ನ್
ತೆಗೆದ ಮಟೀರಿಯಲ್ : 0.030-0.040 ಮಿ.ಮೀ.
ವ್ಯಾಸ : 16.00 ಮಿ.ಮೀ.
ಉದ್ದ : -127 ಮಿ.ಮೀ.
ಪಾಸ್ ಗಳ ಸಂಖ್ಯೆ : 4

8_1  H x W: 0 x 
3. ರೆಫ್ರಿಜರೇಶನ್ ಕಾಂಪ್ರೆಸರ್ ಬಾಡಿ : ಈ ರೆಫ್ರಿಜರೇಶನ್ ಕಾಂಪ್ರೆಸರ್ ನ ಹೃದಯವಾಗಿದೆ. ಸಂಪೂರ್ಣ ಯುನಿಟ್ ನ ಚಟುವಟಿಕೆಯು ರಂಧ್ರದ ಫಿನಿಶಿಂಗ್ ನಲ್ಲಿ ಲಭಿಸಿರುವ ನಿಖರತೆಯಲ್ಲಿ ಅವಲಂಬಿಸಿರುತ್ತದೆ. ರಂಧ್ರದಲ್ಲಿರುವ ಪಿಸ್ಟನ್ ನ ಫಿಟ್ ಮೆಂಟ್ 3-4 ಮೈಕ್ರಾನ್ ಗಿಂತ ಕಡಿಮೆ ಇರುವುದರಿಂದ ರಂಧ್ರದ ನಿಖರತೆಯು 1-1.5 ಮೈಕ್ರಾನ್ ನಷ್ಟು ಇರಬೇಕಾಗುತ್ತದೆ. ಹೋನಿಂಗ್ ಪ್ರಕ್ರಿಯೆಯು ರಂಧ್ರದ ನಿಖರತೆ ಮತ್ತು ಎರಡೂ ರಂಧ್ರಗಳ ಸರ್ಫೇಸ್ ಫಿನಿಶ್ ನೀಡುತ್ತದೆ, ಅಲ್ಲದೇ ಅದರೊಂದಿಗೆ ಜರ್ನಲ್ ಬೋರ್ ಮತ್ತು ಪಿಸ್ಟನ್ ಬೋರ್ ಇವೆರಡರಲ್ಲಿರುವ ಲಂಬರೇಖೆಯನ್ನೂ ಕಾಪಾಡುತ್ತದೆ.

ಕೆಲಸದ ವಿವರಗಳು

9_1  H x W: 0 x 
ಮಟೀರಿಯಲ್ : ಕಾಸ್ಟ್ ಆಯರ್ನ್
ತೆಗೆದಿರುವ ಮಟೀರಿಯಲ್ : 0.030-0.040 ಮಿ.ಮೀ.
ವ್ಯಾಸ :19.00 ಮಿ.ಮೀ.
ಉದ್ದ : 40 ಮಿ.ಮೀ.
ಪಾಸ್ ಗಳ ಸಂಖ್ಯೆ : 6

10_1  H x W: 0  
ಕಾರ್ಯವಸ್ತುಗಳ ಅಪೇಕ್ಷಿಸಿರುವ ಪರಿಮಾಣಗಳಿಗಿಂತ ಉಚ್ಚಮಟ್ಟದ ಮಾಪನಗಳನ್ನು ಈ ಮಶಿನ್ ನಲ್ಲಿ ಪಡೆಯುವುದು ಸಾಧ್ಯ. ಮಿತ್ಸುಬಿಶಿ E80 ಇದು ಸಿ.ಎನ್.ಸಿ. ಪ್ರಣಾಳಿಕೆ ಇರುವ ಮಶಿನ್ ಬಳಸಲು ತುಂಬಾ ಸುಲಭವಾಗಿದೆ. ಒಂದು ಸಲ 6 ಸ್ಪಿಂಡಲ್ ಕೆಲಸ ನಿರ್ವಹಿಸುತ್ತಿರುವುದರಿಂದ ಬಳಕೆಗಾರರಿಗೆ ಅಪೇಕ್ಷಿಸಿರುವ ಉತ್ಪಾದನೆಯ ಗುರಿಯ ತನಕ ತಲುಪುವುದು ಸಹಜವಾಗಿ ಸಾಧ್ಯವಾಗಿದೆ, ಎಂಬುದು ಮೇಲಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ.


1_1  H x W: 0 x 
 ಅಜಿತ್ ಸಾಮಾನಿ
 ನಿರ್ದೇಶಕರು,
 ಖುಷಬೂ ಇಂಜಿನಿಯರ್ಸ್
 9371658016
ಅಜಿತ್ ಸಾಮಾನಿ ಇವರು ವಾಲ್ ಚಂದ್ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಬಲ್ಲಿಂದ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಕಿರ್ಲೋಸ್ಕರ ಗ್ರೂಪ್ ನಲ್ಲಿ ಪಡೆದ ಅನುಭವದಿಂದ ಅವರು 1988 ರಲ್ಲಿ ಜಿಗ್ಸ್ ಮತ್ತು ಫಿಕ್ಸ್ಚರ್ ನ ಮೊತ್ತ ಮೊದಲ ಮ್ಯಾನ್ಯುಫ್ಯಾಕ್ಚರಿಂಗ್ ಯುನಿಟ್ ಪ್ರಾರಂಭಿಸಿದರು. 1994 ರಲ್ಲಿ ಸ್ವಂತ ಉಪಯೋಗಕ್ಕೆ ಮೊದಲ ಹಾರಿಝಾಂಟಲ್ ಹೋನಿಂಗ್ ಮಶಿನ್ ತಯಾರಿಸಿ ಅವರು ಹೋನಿಂಗ್ ಮಶಿನ್ ನ ಉತ್ಪಾದನೆಯ ಪ್ರವಾಸವನ್ನು ಪ್ರಾರಂಭಿಸಿದರು.
@@AUTHORINFO_V1@@