ಕಾರಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಎಸ್.ಎಮ್.ಇ.ಡಿ. ಹಾಗೆಯೇ ಪೊಕಾಯೋಕೆ ಇಂತಹ ತಂತ್ರಜ್ಞಾನವನ್ನು ಬಳಸಿ ಎಸ್.ಪಿ.ಎಮ್. ನ ಬಳಕೆಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡುವುದು ಲಾಭಕಾರಿಯಾಗಿದೆ. ಈ ಲೇಖನದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವ ಎಸ್.ಪಿ.ಎಮ್. ನ ಕುರಿತು ತಿಳಿದುಕೊಳ್ಳೋಣ. ಈ ಎಸ್.ಪಿ.ಎಮ್. ಪ್ರಮುಖವಾಗಿ ಹೆಲಿಕಲ್ ಬ್ರೋಚಿಂಗ್ ಗೋಸ್ಕರ ತಯಾರಿಸಲಾಗಿದೆ.
ಯಾವುದೇ ಕಾರ್ಯವಸ್ತುವಿನ ಬೋರ್ ನಲ್ಲಿ ಅಥವಾ ಹೊರಗಿನ ವ್ಯಾಸದಲ್ಲಿ ನಿರ್ದಿಷ್ಟ ಆಕಾರದ ಮತ್ತು ಮಾಪನವಿರುವ ಸ್ಲಾಟ್ ಮಾಡಲು ಸಾಮಾನ್ಯವಾಗಿ ಬ್ರೋಚಿಂಗ್ ಬಳಸಲಾಗುತ್ತದೆ. ಇದರಲ್ಲಿ ಬಳಸಲಾಗುವ ಟೂಲ್ ಗೆ ಬ್ರೋಚ್ ಎಂದು ಹೇಳುತ್ತಾರೆ. ಬ್ರೋಚ್ ಒಂದರ ಮುಂದೆ ಇನ್ನೊಂದು ಈ ರೀತಿಯಲ್ಲಿರುವ ಕಟಿಂಗ್ ಪಾಯಿಂಟ್ ಗಳನ್ನು ತಯಾರಿಸಲಾಗಿರುತ್ತದೆ. ಪ್ರತಿಯೊಂದು ಟೂಥ್ ಕಾರ್ಯವಸ್ತುವಿನ ಸಂಪರ್ಕದಲ್ಲಿ ಬಂದಾಗ ನಿರ್ಧಾರಿತ ಮಟೀರಿಯಲ್ (ಚಿತ್ರ ಕ್ರ. 1) ಎಳೆದು ತೆಗೆಯುತ್ತದೆ. ಅಗತ್ಯಕ್ಕೆ ತಕ್ಕಂತೆ ಆಯಾ ಕೆಲಸದ ಆವಶ್ಯಕತೆಯನ್ನು ತಿಳಿದುಕೊಂಡು ಪ್ರತಿಯೊಂದು ಬ್ರೋಚ್ ವಿಶೇಷವಾದ ಆಕಾರದಲ್ಲಿ ಮತ್ತು ವಿಶಿಷ್ಟವಾದ ಮಾಪನದಲ್ಲಿ ತಯಾರಿಸಲಾಗುತ್ತದೆ. ಅಲ್ಲದೇ ಈ ಬ್ರೋಚ್ ಕೇವಲ ಅದೇ ಕೆಲಸಕ್ಕಾಗಿ ಬಳಸಲಾಗುತ್ತದೆ. (ಚಿತ್ರ ಕ್ರ. 2).
ಬ್ರೋಚಿಂಗ್ ನಲ್ಲಿ ಎರಡು ವಿಧದಲ್ಲಿರುತ್ತದೆ. ಮೊದಲ ವಿಧದಲ್ಲಿ ಬ್ರೋಚ್ ಗೆ ಒಂದು ಬದಿಯಲ್ಲಿ ಒತ್ತಡವನ್ನು ನೀಡಿ ಹಿಡಿದಿರುವ ಕಾರ್ಯವಸ್ತುವಿನಿಂದ ಅದನ್ನು ಮುಂದೆ ತಳ್ಳಲಾಗುತ್ತದೆ. ಅದನ್ನು ಪುಶ್ ಟೈಪ್ ಬ್ರೋಚಿಂಗ್ (ಚಿತ್ರ ಕ್ರ. 3) ಎಂದು ಹೇಳುತ್ತಾರೆ. ಎರಡವೇ ವಿಧದಲ್ಲಿ ಬ್ರೋಚ್ ಒಂದು ಬದಿಯಲ್ಲಿ ಹಿಡಿದು ಎಳೆಯಲಾಗುತ್ತದೆ. ಅದನ್ನು ಪುಲ್ ಟೈಪ್ ಬ್ರೋಚಿಂಗ್ (ಚಿತ್ರ ಕ್ರ. 4) ಎಂದು ಕರೆಯುತ್ತಾರೆ. ಈ ರೀತಿಯ ಬ್ರೋಚಿಂಗ್ ಪ್ರೆಸ್ ಮಶಿನ್ ನಲ್ಲಿ ಮಾಡಲಾಗುತ್ತದೆ.
ಹೆಚ್ಚಿನ ಬ್ರೋಚಿಂಗ್ ನಲ್ಲಿ ಬ್ರೋಚ್ ಒಂದು ದಿಕ್ಕಿನಲ್ಲಿಯೇ ನೇರವಾದ ರೇಖೆಯಲ್ಲಿ ಮುಂದೆ ಸರಿಯುತ್ತದೆ. ಅದನ್ನು ಲೀನಿಯರ್ ಬ್ರೋಚಿಂಗ್ ಎಂದು ಹೇಳುತ್ತಾರೆ. ಆಟೊಮೊಬೈಲ್ ಕಂಪನಿಗೆ ಬೇಕಾಗುವ ಕಾರ್ಯವಸ್ತುವನ್ನು ಪೂರೈಸುವ ಗ್ರಾಹಕರು ನಮಗೆ ಸವಾಲುಗಳುಳ್ಳ ಎಸ್.ಪಿ.ಎಮ್. ತಯಾರಿಸುವ ಬೇಡಿಕೆಯನ್ನು ನೀಡಿದರು ಅವರಲ್ಲಿರುವ ಒಂದು ಕಾರ್ಯವಸ್ತುವಿನ ಒಳಗಿನ ಬೋರ್ ನಲ್ಲಿ ಉರುಟಾಗಿ ಅಥವಾ ಹೆಲಿಕಲ್ ಆಕಾರದ ಕಚ್ಚುಗಳನ್ನು ಮಾಡಬೇಕಾಗಿತ್ತು. (ಚಿತ್ರ ಕ್ರ. 6) ಆ ಕಚ್ಚುಗಳ ಆಕಾರ ಮತ್ತು ಅದರಲ್ಲಿರುವ ಸರ್ಫೇಸ್ ಫಿನಿಶ್ ಇವೆರಡರ ಮಾನದಂಡಗಳು ತುಂಬಾ ನಿಖರವಾಗಿದ್ದವು. ಅಲ್ಲದೇ ಈ ಕಾರ್ಯವಸ್ತುಗಳ ಉತ್ಪಾದನೆಯನ್ನು ಹೆಚ್ಚಾಗಿ ಮಾಡುವ ಆವಶ್ಯಕತೆ ಇತ್ತು. ಇದರಿಂದಾಗಿ ಈ ಯಂತ್ರಣೆಗೋಸ್ಕರ ಎಸ್.ಪಿ.ಎಮ್. ತಯಾರಿಸುವುದು ಇದೇ ಇದಕ್ಕೆ ಸೂಕ್ತವಾದ ಪರ್ಯಾಯವಾಗಿತ್ತು.
ಹೆಲಿಕಲ್ ಆಕಾರದ ಕಚ್ಚುಗಳು ಎರಡು ವಿಧದಲ್ಲಿರುತ್ತವೆ. ಬಲ ಬದಿಯ (ರೈಟ್ ಹ್ಯಾಂಡ್) ಮತ್ತು ಎಡ ದಿಕ್ಕಿನ (ಲೆಫ್ಟ್ ಹ್ಯಾಂಡ್). ಈ ಕಚ್ಚುಗಳನ್ನು ಕೊರೆಯಲು ಯಾವುದೇ ಮಶಿನ್ ನಲ್ಲಿ ಬ್ರೋಚ್ ಗೆ ಎರಡು ವಿಧದ ಚಟುವಟಿಕೆಗಳನ್ನು ಪಡೆಯುವ ಆವಶ್ಯಕತೆ ಇರುತ್ತದೆ. ಮೊದಲನೆಯದಾಗಿ ಒಂದು ದಿಕ್ಕಿನಿಂದ ನೇರ ರೇಖೆಯಲ್ಲಿ (ಲಿನಿಯರ್) ಮುಂದೆ ಸರಿಯುವುದು ಮತ್ತು ಎರಡನೆಯದಾಗಿ ಅದೇ ವೇಳೆಯಲ್ಲಿ ಆ ಬ್ರೋಚ್ ಅಂಗ್ಯುಲರ್ ನಲ್ಲಿ ತಿರುಗುವುದು. ಈ ಲಿನಿಯರ್ ಮತ್ತು ಎಂಗ್ಯುಲರ್ ಚಟುವಟಿಕೆಗಳ ಯೋಗ್ಯವಾದ ರೀತಿಯ ಸಿಂಕ್ರೋನೈಜೆಶನ್ ಮಾಡಿದಾಗ, ಅಪೇಕ್ಷಿಸಿರುವ ಕೋನವು (ಹೆಲಿಕ್ಸ್ ಎಂಗಲ್) ಲಭಿಸುತ್ತದೆ. ಇದರಿಂದಾಗಿ ಹೆಲಿಕಲ್ ಬ್ರೋಚಿಂಗ್ ಗೋಸ್ಕರ ಎಸ್.ಪಿ.ಎಮ್. ನ ಕಲ್ಪನೆಯನ್ನು ನಿರ್ಧರಿಸುವಾಗ ನಮ್ಮೆದುರಿನಲ್ಲಿ ಎರಡು ಸವಾಲುಗಳಿದ್ದವು. ಹೆಲಿಕಲ್ ಆಕಾರವನ್ನು ಪಡೆಯಲು ಸ್ಪಿಂಡಲ್ ನಂತಹ ರಚನೆಯನ್ನು ಮಾಡಿ ಅದಕ್ಕೆ ಬಲ ಅಥವಾ ಎಡ ಬದಿಯಿಂದ ತಿರುಗಿಸುವ ವ್ಯವಸ್ಥೆಯನ್ನು ಮಾಡುವುದು ಅತ್ಯಾವಶ್ಯಕವಾಗಿತ್ತು. ಈ ರಚನೆಯಿಂದಾಗಿಯೇ ಈ ಮಶಿನ್ ಒಂದು ವೇಳೆ ಎಸ್.ಪಿ.ಎಮ್. ಇದ್ದರೂ ಕೂಡಾ ವಿವಿಧೊದ್ದೇಶದ್ದಾಗಿರುತ್ತಿತ್ತು. ಹಾಗೆಯೇ ಹೆಲಿಕಲ್ ಆಕಾರದ ಕಚ್ಚುಗಳ ಪ್ರಾರಂಭವು ನಿಗದಿತ ಜಾಗದಲ್ಲಾಗುವ ನಿಟ್ಟಿನಲ್ಲಿ ಬ್ರೋಚ್ ವರ್ಟಿಕಲ್ ಪೊಸಿಶನ್ ನಲ್ಲಿ ಇರುವಂತೆ ನಿರ್ಧರಿಸುವುದು ಆವಶ್ಯಕವಾಗಿತ್ತು.
ನಂತರ ಮೇಲೆ ತಿಳಿಸಿದಂತೆ ಇದಕ್ಕೋಸ್ಕರ ಬೇಕಾಗುವ ಬ್ರೋಚ್ ತಯಾರಿಸುವುದು ಅಗತ್ಯವಾಗಿತ್ತು. ಇದಕ್ಕೋಸ್ಕರ ನಾವು ಮತ್ತು ಗ್ರಾಹಕರು ಜಂಟಿಯಾಗಿ ಬ್ರೋಚ್ ತಯಾರಿಸಬಲ್ಲ ಉತ್ಪಾದಕರನ್ನು ಹುಡುಕುತ್ತಿದ್ದೆವು. ಅವರಿಂದ ಕಾರ್ಯವಸ್ತುವಿಗೆ ಅಪೇಕ್ಷಿಸಿರುವ ಜಾಮೆಟ್ರಿ ಬ್ರೋಚ್ ಪಡೆಯುವ ನಿಟ್ಟಿನಲ್ಲಿ ಯಶಸ್ವಿಯಾದೆವು. ಇದರಿಂದ ನಮಗೆ ಬ್ರೋಚ್ ನ ನಿಖರವಾದ ರಚನೆ ಮತ್ತು ಅದರ ಉದ್ದ ಇವೆರಡರ ಮಾಪನಗಳು ಲಭಿಸಿದವು. ಇದರಿಂದಾಗಿ ನಮಗೆ ಅಕ್ಷದ ಸ್ಟೋಕ್ ನಿರ್ಧರಿಸುವುದು ಸುಲಭವಾಯಿತು. ಅಲ್ಲದೇ ಬ್ರೋಚ್ ನ ಅಕ್ಷದ ಸ್ಥಿತಿಯನ್ನು ನಿರ್ಧರಿಸಲು ಬೇಕಾಗುವ ಮಾಹಿತಿಯೂ ಲಭಿಸಿತು. (ಚಿತ್ರ ಕ್ರ. 7)
ಎಲ್ಲಕ್ಕಿಂತಲೂ ಮೊದಲಾಗಿ ಈ ಎಸ್.ಪಿ.ಎಮ್.ನ ಕಲ್ಪನೆಯನ್ನು ನಿರ್ಧರಿಸುವಾಗ ಬ್ರೋಚ್ ಒಂದೇ ಸ್ಪಿಂಡಲ್ ನಲ್ಲಿ ಅಳವಡಿಸಿ ಅದರ ಅಕ್ಷ (ಎಕ್ಸಿಸ್) ವರ್ಟಿಕಲ್ ಸ್ಥಿತಿಯಲ್ಲಿ ಇಡುವುದನ್ನು ನಿರ್ಧರಿಸಿದೆವು. (ಚಿತ್ರ ಕ್ರ. 8) ಸ್ಪಿಂಡಲ್ ಗೆ ಅಪೇಕ್ಷಿಸಿರುವ ನೇರ ಮತ್ತು ಕೋನೀಯ ಚಟುವಟಿಕೆಗಳಿಗೆ ಎರಡು ಸರ್ವೋ ಡ್ರೈವ್ ಅಳವಡಿಸಿದೆವು. ಯೋಗ್ಯವಾದ ಕಂಪ್ಯೂಟರ್ ಪ್ರಣಾಳಿಕೆಯನ್ನು ಬಳಸಿ ಕಾರ್ಯವಸ್ತುವಿನಲ್ಲಿ ಸೂಕ್ತವಾದ ಬ್ರೋಚ್ ಬಳಸಿ ಅನೇಕ ಕೋನಗಳನ್ನು (ಹೆಲಿಕ್ಸ್ ಎಂಗಲ್) ಪಡೆಯಬಹುದಾದಂತಹ ವ್ಯವಸ್ಥೆಯನ್ನೂ ಮಾಡಲಾಯಿತು. ಯಂತ್ರಣೆಯಾಗುತ್ತಿರುವಾಗ ಬ್ರೋಚ್ ನಲ್ಲಿ ಉಂಟಾಗುವ ಲೋಡ್ ಮತ್ತು ಅದನ್ನು ನೀಗಿಸುವ ನಿಟ್ಟಿನಲ್ಲಿ ಸ್ಪಿಂಡಲ್ ನಲ್ಲಿ ಆವಶ್ಯಕವಿರುವ ಪವರ್ ಮತ್ತು ಟಾರ್ಕ್ ಇವೆರಡರ ಅಂಕೆ-ಸಂಖ್ಯೆಗಳ ಕುರಿತು ವಿಚಾರ ಮಾಡಿದೆವು. ವಿಶೇಷವಾದ ಪವರ್ ಪ್ಯಾಕ್ ಡಿಸೈನ್ ಮಾಡಿ ಎಲ್ಲ ಚಟುವಟಿಕೆಗಳು ಸುಲಲಿತವಾಗಿ ನಿರ್ವಹಿಸಲು ವಿಶೇಷವಾದ ಬ್ರೋಚ್ ತಯಾರಿಸಿಕೊಂಡೆವು. ಈ ಎರಡೂ ಡ್ರೈವ್ ನ ಚಟುವಟಿಕೆಗಳ ಹೊಂದಾಣಿಕೆಯಿಂದಾಗಿ ಅಪೇಕ್ಷಿಸಿರುವ ಹೆಲಿಕ್ಸ್ ಕೋನ ಮತ್ತು ಹೆಲಿಕ್ಸ ನ ಹ್ಯಾಂಡ್ ಕಾರ್ಯವಸ್ತುವಿನಲ್ಲಿ ಸಿಗಬಹುದು. ಬ್ರೋಚಿಂಗ್ ನಲ್ಲಿ ಅನೇಕ ಹಲ್ಲುಗಳ ಸಹಾಯದಿಂದ ಯಂತ್ರಣೆ ಆಗುವುದರಿಂದ ಅದು ಸರಿಯಾಗಿ ಆಗುವಲ್ಲಿ ಕೂಲಂಟ್ ಪಂಪ್ ಮತ್ತು ಕೂಲಂಟ್ ಟಾಂಕಿಯ ವ್ಯವಸ್ಥೆಯನ್ನೂ ಮಾಡಿದೆವು.
ಈ ಮಶಿನ್ ನ ಸ್ವಯಂಚಾಲಿತ ಸೈಕಲ್ (ಆಟೊ ಸೈಕಲ್) ಒಂದರ ಹಿಂದೆ ಇನ್ನೊಂದು ಆಗುವ ಚಟುವಟಿಕೆ ಮತ್ತು ಅದಕ್ಕೆ ಅನುಸಾರವಾಗಿ ಆಗುವ ಚಟುವಟಿಕೆಗಳನ್ನು ಓದುಗರಿಗೆ ವೀಕ್ಷಿಸಲು ವಿಡಿಯೋಗಳಲ್ಲಿ ನೀಡಲಾಗಿದೆ. ಅದಕ್ಕೋಸ್ಕರ ಪಕ್ಕದಲ್ಲಿರುವ QR ಕೋಡ್ ತಮ್ಮ ಮೊಬೈಲ್ ನ ಮೂಲಕ ಸ್ಕ್ಯಾನ್ ಮಾಡಿರಿ.
ಬ್ರೋಚ್ ಈ ಟೂಲ್ ಎಚ್.ಎಸ್.ಎಸ್. ಮಟೀರಿಯಲ್ ನಿಂದ ತಯಾರಿಸಲಾಗಿದ್ದರಿಂದ ತುಂಬಾ ದುಬಾರಿಯಾಗಿರುತ್ತದೆ. ಅಲ್ಲದೇ ಅದರಲ್ಲಿ ಕೋಬಾಲ್ಟ್ ನ ಪ್ರಮಾಣವೂ ಸ್ವಲ್ಪ ಹೆಚ್ಚು ಇರುತ್ತದೆ. ಆದುದರಿಂದ ಪ್ರತ್ಯಕ್ಷವಾಗಿ ಯಂತ್ರಣೆಯನ್ನು ಮಾಡುವಾಗ ಬ್ರೋಚ್ ಸರಿಯಾಗಿ ನಿಭಾಯಿಸದಿದ್ದಲ್ಲಿ ಅದರ ಹಲ್ಲುಗಳ ಚೆಕ್ಕೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಈ ಮಶಿನ್ ನಲ್ಲಿ ಕೆಲಸ ಮಾಡುವ ಕಾರ್ಮಿಕರ ಮನಸ್ಸಿನಲ್ಲಿ ನಿರಂತರವಾಗಿ ಹೆದರಿಕೆಯು ಇರುತ್ತಿತ್ತು. ಕಾರ್ಮಿಕರ ಮನಸ್ಸಿನಲ್ಲಿರುವ ಹೆದರಿಕೆಯನ್ನು ನೀಗಿಸಲು ಮಶಿನ್ ನ ಡಿಸೈನ್ ಮಾಡುವಾಗಲೇ ಎಫ್.ಎಮ್.ಇ.ಎ. (Failure Mode Effect Analysis) ಈ ತಂತ್ರವನ್ನು ಅವಲಂಬಿಸುವುದನ್ನು ನಿರ್ಧರಿಸಿದೆವು. ಈ ತಂತ್ರವನ್ನು ಬಳಸುವಾಗ ಯಾವುದೇ ಕೆಲಸದ ರೀತಿಯನ್ನು ಅವಲಂಬಿಸಿದ ನಂತರ ಇದರಲ್ಲಿ
ಉದ್ಭವಿಸುವ ಅಪಾಯಗಳು ಅನುಭವಿ ಕೆಲಸಗಾರರಿಂದ ಮುಂಚಿತವಾಗಿಯೇ ಕಂಡು ಹಿಡಿಯಲಾಗುತ್ತಿತ್ತು.
ಇಂತಹ ಸಂಭಾವ್ಯ ಅಪಾಯಗಳನ್ನು ತಡೆಯಲು ಪ್ರಾರಂಭದಿಂದಲೇ ಉಪಾಯಗಳನ್ನು ಮಾಡಲಾಯಿತು. ಈ ಎಸ್.ಪಿ.ಎಮ್. ನ ಕುರಿತು ದುಬಾರಿಯಾಗಿರುವ ಬ್ರೋಚ್ ಗಳು ತುಂಡಾಗುವಂತಹ ಮಹತ್ವದ ಸಮಸ್ಯೆಯ ಕಾರಣಗಳನ್ನು ಹುಡುಕಲಾಯಿತು. ಬ್ರೋಚಿಂಗ್ ಮಾಡುವಾಗ ಬ್ರೋಚ್ ನಲ್ಲಿ ಒಂದು ವೇಳೆ ಮಿತಿಮೀರಿದ ಲೋಡ್ ಉಂಟಾದಲ್ಲಿ ಅಥವಾ ಬ್ರೋಚ್ ಓರೆಯಾಗಿ ಮಧ್ಯದಲ್ಲಿಯೇ ಸಿಲುಕಿದಲ್ಲಿ, ಅದನ್ನು ತೆಗೆಯುವಾಗ ತುಂಡಾಗುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ಬಹುತೇಕ ಮಶಿನ್ ಗಳಲ್ಲಿ ಏನಾದರೂ ಅದ್ಧುತವಾದ ಪ್ರಸಂಗವು ಸಂಭವಿಸುತ್ತದೆ, ಎಂಬುದು ಗಮನಕ್ಕೆ ಬಂದಲ್ಲಿ ಮಶಿನ್ ಜಾಗದಲ್ಲಿ ನಿಲ್ಲಿಸಲು ಇಮರ್ಜನ್ಸಿ ಸ್ಟಾಪ್ ಬಟನ್ ನೀಡಲಾಗಿತ್ತದೆ, ಇದೇ ವ್ಯವಸ್ಥೆಯನ್ನು ಈ ಮಶಿನ್ ನಲ್ಲಿಯೂ ಅಳವಡಿಸಲಾಗಿದೆ. ಇದರ ಹೊರತಾಗಿ ಎರಡೂ ಅಂಶಗಳನ್ನು ನಿಯಂತ್ರಿಸಲು ನಾವು ಸ್ವಯಂಚಾಲಿತ ಸೈಕಲ್ ನಲ್ಲಿ ಎರಡು ಅಂಶಗಳನ್ನು ಒಳಗೂಡಿಸಿರುತ್ತೇವೆ. ಮೊದಲನೆಯದಾಗಿ ಮುಖ್ಯ ಸರ್ಕಿಟ್ ನಲ್ಲಿ ಓವರ್ ಲೋಡ್ ಸೆನ್ಸರ್ ಅಳವಡಿಸಿ ಮಶಿನ್ ನಲ್ಲಿ ಲೋಡ್ ಬಂದಾಕ್ಷಣ ಅದು ಜಾಗದಲ್ಲಿಯೇ ನಿಲ್ಲುವ ವ್ಯವಸ್ಥೆ. ಇದರಿಂದಾಗಿ ಬ್ರೋಚ್ ತುಂಡಾಗುವ ಮುಂಚೆಯೇ ಮಶಿನ್ ಅದೇ ಸ್ಥಿತಿಯಲ್ಲಿ ನಿಲ್ಲಿಸಲಾಗುತ್ತದೆ. ಬ್ರೋಚ್ ಮಧ್ಯದಲ್ಲಿಯೇ ಸಿಕ್ಕಿಕೊಂಡಾಗ ಪರಿಹಾರಕ್ಕೋಸ್ಕರ ಪ್ರೊಗ್ರಾಮಿಂಗ್ ನಲ್ಲಿ ಒಂದು ವಿಶೇಷವಾದ ಪಾಸ್ ನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ರೀತಿಯಲ್ಲಿ ಪಾಸ್ ಆದಾಗ ಓವರ್ ಲೋಡ್ ನಿಂದಾಗಿ ಮಶಿನ್ ನಡುವೆಯೇ ನಿಂತಲ್ಲಿ ಪ್ರೊಗ್ರಾಮ್ ಎರಡು ಪರ್ಯಾಯಗಳನ್ನು ಕೇಳುತ್ತದೆ. ಸೈಕಲ್ ರಿಟ್ರ್ಯಾಕ್ಟ್ ಮಾಡಬೇಕೋ, ನಿಂತಲ್ಲಿಂದ ಮುಂದುವರಿಸುವುದೋ ಎಂಬುದಾಗಿ ಮೆಸೆಜ್ ಕಾಣುತ್ತದೆ. ಆ ಸ್ಥಿತಿಯಲ್ಲಿ ನಿಖರವಾಗಿ ಏನಾಗಿದೆ ಎಂಬುದನ್ನು ನಿರೀಕ್ಷಿಸಿ ಮತ್ತು ವಿಶ್ಲೇಷಿಸಿಯೇ ಸೂಕ್ತವಾದ ಪರ್ಯಾಯದ ಆಯ್ಕೆ ಮಾಡಿ ಮುಂದಿನ ಕಮಾಂಡ್ ಮ್ಯಾನ್ಯುವಲಿ ನೀಡಲಾಗುತ್ತದೆ. ಈ ವೈಶಿಷ್ಟ್ಯಗಳನ್ನು ಮಶಿನ್ ತಯಾರಿಸುವಾಗಲೇ ಸೂಚಿಸಿದ್ದರಿಂದ ಗ್ರಾಹಕರ ಪ್ರತಿಕ್ರಿಯೆಗಳು ನಮಗೆ ತುಂಬಾ ಸಹಾಯ ಮತ್ತು ಸಹಕಾರವನ್ನು ನೀಡಿದವು.
ಎಸ್.ಪಿ.ಎಮ್. ಇದ್ದರೂ ಕೂಡಾ ಅದು ವಿವಿಧೋದ್ದೇಶಗಳದ್ದಾಗಿರುವುದ, ಯೋಗ್ಯವಾದ ತಂತ್ರಗಳನ್ನು ಅಪೇಕ್ಷಿಸಿರುವ ಜಾಗದಲ್ಲಿ ಸೂಕ್ತವಾಗಿ ಬಳಸುವುದು, ಮಶಿನ್ ನಲ್ಲಿರುವ ಡಿಸೈನ್ ಅದರಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುಲಭವಾಗಿ ಬಳಸಲು ಅಚ್ಟುಕಟ್ಟಾಗಿ ಮಾಡಿ ಕೊಡುವುದು ಇವೆಲ್ಲವೂ ನಮ್ಮ ಕುಶಲತೆಯಿಂದಾಗಿ, ಗ್ರಾಹಕರಿಂದ ನಮಗೆ ಆಗಾಗ ಬೇಡಿಕೆಗಳು (ಆರ್ಡರ್) ಬರುತ್ತಿರುತ್ತವೆ. ಗ್ರಾಹಕರಿಗೆ ಇಷ್ಟಪಡುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ.
ವಿವೇಕ ಪಿಟಕೆ ಇವರು ಮೆಟಲರ್ಜಿಯಲ್ಲಿ ಡಿಪ್ಲೋಮಾ ಮತ್ತು ಪದವಿಯನ್ನು ಪಡೆದಿದ್ದಾರೆ. ಅದರ ನಂತರ 1990 ರಲ್ಲಿ ಸ್ವಂತದ್ದೇ ಆದ ‘ಸ್ಪೆಪರ್‌ಮ್ಯಾಕ್ ಇಂಜಿನಿಯರಿಂಗ್ ಸರ್ವಿಸೆಸ್’ ಎಂಬ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯಲ್ಲಿ ಕ್ಯಾಮ್ ಮಿಲಿಂಗ್ ಡೋಮ್ ಗ್ರೈಂಡಿಂಗ್‌ನಂತಹ ಅನೇಕ ಕ್ಲಿಷ್ಟವಾದ ಯಂತ್ರಣೆಯನ್ನು ಮಾಡುವಂತಹ ಎಸ್.ಪಿ.ಎಮ್.ನ ತಯಾರಿಕೆಯನ್ನು ಮಾಡಲಾಗುತ್ತದೆ.