ಪಾರ್ಟಿಂಗ್ ಆಪರೇಶನ್

@@NEWS_SUBHEADLINE_BLOCK@@

Udyam Prakashan Kannad    12-Oct-2020
Total Views |

1_1  H x W: 0 x
ಬಾರ್ ನಿಂದ (ಕಬ್ಬಿಣದ ತುಂಡಿನಿಂದ) ತಮಗೆ ಬೇಕಾಗಿರುವಷ್ಟು ಉದ್ದದ ತುಂಡನ್ನು ಕತ್ತರಿಸುವ ರೀತಿಯನ್ನು ಪಾರ್ಟಿಂಗ್ ಎಂದು ಹೇಳುತ್ತಾರೆ. ಪಾರ್ಟಿಂಗ್ ಗೋಸ್ಕರ ಲೇಥ್ ನಲ್ಲಿರುವ ಚಕ್ ನಲ್ಲಿ ಬಾರ್ ದೃಢವಾಗಿ ಹಿಡಿದಿಡುವುದು ಆವಶ್ಯಕವಾಗಿರುತ್ತದೆ. ಬಾರ್ ತುಂಡು ಮಾಡಲು ಬ್ಲೇಡ್ ನಂತೆ ಕಾಣುವಂತಹ ಒಂದು ವಿಶೇಷವಾದ ಟೂಲ್ ಬಳಸಲಾಗುತ್ತದೆ. ಇದಕ್ಕೆ ಪಾರ್ಟಿಂಗ್ ಟೂಲ್ ಎಂದು ಕರೆಯುತ್ತಾರೆ. ಪಾರ್ಟಿಂಗ್ ಆಪರೇಶನ್ ಹೇಗೆ ನಡೆಯುತ್ತದೆ, ಎಂಬುದನ್ನು ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ.

ಪಾರ್ಟಿಂಗ್ ಮಾಡುವ ರೀತಿ

2_1  H x W: 0 x 
ಸಾಮಾನ್ಯವಾಗಿ ಲಂಬಗೋಲಾಕಾರವಾಗಿರುವ ಕಾರ್ಯವಸ್ತುವಿನ ತುಂಡುಗಳನ್ನು ಮಾಡಲು ಪಾರ್ಟಿಂಗ್ ಮಾಡಲಾಗುತ್ತದೆ. ಈ ಕಾರ್ಯವಸ್ತು 8, 10, 12 ಅಡಿ ಅಥವಾ ಅದಕ್ಕಿಂತ ಹೆಚ್ಚು ಉದ್ದದ ಉರುಟಾದ ಬಾರ್ ಇರುತ್ತದೆ. ಪಾರ್ಟಿಂಗ್ ಗೋಸ್ಕರ ಯಂತ್ರಣೆಯನ್ನು (ಕಟಿಂಗ್) ಮಾಡುವಾಗ ಅದು ಹೆಚ್ಚಾಗಿ ಗ್ರೂವಿಂಗ್ ನಂತೆಯೇ ಇರುತ್ತದೆ. ಹಲವಾರು ಜಾಗದಲ್ಲಿ ಇದಕ್ಕೆ ಗ್ರೂವಿಂಗ್ ನ ಎಕ್ಸ್ ಟೆನ್ಶನ್ ಎಂದೂ ಹೇಳಲಾಗುತ್ತದೆ. ಪಾರ್ಟಿಂಗ್ ನಲ್ಲಿ ಈ ಮುಂದಿನ ಅಂಶಗಳು ಮಹತ್ವದ್ದಾಗಿರುತ್ತವೆ.
1. ಯಂತ್ರಣೆಯಿಂದ ಹೊರ ಬರುವ ಚಿಪ್ ಗಳ ನಿಯಂತ್ರಣೆ ಮತ್ತು ಅದರ ವ್ಯವಸ್ಥೆ.
2. ಕೂಲಂಟ್ ನ ಉಪಯೋಗ.

ಪಾರ್ಟಿಂಗ್ ಟೂಲ್

ಬ್ಲೇಡ್ ನ ಆಕಾರದ ಟೂಲ್ ಗಳ ಬುಡದ ಎರಡೂ ಬದಿಗಳಲ್ಲಿ ಕ್ಲಿಯರನ್ಸ್ ಇರುವ ಕಾರ್ಬೈಡ್ ಇನ್ಸರ್ಟ್ ಇರುತ್ತದೆ. ಟೂಲ್ ನ ಕಟಿಂಗ್ ಎಡ್ಜ್ ಬೇರೆಬೇರೆ ಆಕಾರದಲ್ಲಿ ಉಪಲಬ್ಧವಿರುತ್ತವೆ. ಚಿತ್ರ ಕ್ರ. 3 ರಲ್ಲಿ ಸದ್ಯಕ್ಕೆ ಉಪಲಬ್ಧವಿರುವ ಟೂಲ್ ಎಂಡ್ ನ ಮೂರು ವಿಧಗಳನ್ನು ತೋರಿಸಲಾಗಿದೆ.
ಸಾಮಾವ್ಯವಾಗಿ ಪಾರ್ಟಿಂಗ್ ಆಪರೇಶನ್ ಗೋಸ್ಕರ ಒಂದೇ ಟೂಲ್ ಬಳಸಲಾಗುತ್ತದೆ. ಇದರಿಂದಾಗಿ ಸೆಟಪ್ ಗೆ ಬೇಕಾಗುವ ಸಮಯವು ಕಡಿಮೆಯಾಗುತ್ತದೆ. ಯಂತ್ರಣೆಯು ನಡೆಯುತ್ತಿರುವಾಗ ಕೂಲಂಟ್ ನ ಪೂರೈಕೆ ನಿರಂತರವಾಗಿ ಆಗುತ್ತಿರಬೇಕು. ಈ ಆಪರೇಶನ್ ಗೋಸ್ಕರ ನೀರಿನಲ್ಲಿ ಕರಗುವಂತಹ ಕೂಲಂಟ್ ಎಲ್ಲಕ್ಕಿಂತಲೂ ಹೆಚ್ಚು ಸೂಕ್ತವಾಗಿದೆ. ಒಂದು ಭಾಗ ಕರಗುವ ಆಯಿಲ್ ಮತ್ತು 15 ರಿಂದ 20 ಭಾಗ ನೀರು ಹೀಗೆ ಅದರ ಪ್ರಮಾಣವಿರಬೇಕು. (ಇಪ್ಪತ್ತನೆ ಒಂದು ಅಂಶ ಅಥವಾ ಹದಿನೈದನೇ ಒಂದು ಅಂಶ ಆಯಿಲ್ ಇರಬೇಕು.) ಈ ಕೂಲಂಟ್ ಬಾರ್ ನಲ್ಲಿ ಹೆಚ್ಚು ಒತ್ತಡದಿಂದ ಬೀಳುವ ಆವಶ್ಯಕತೆ ಇರುತ್ತದೆ.

ಟೂಲ್ ಎಪ್ರೋಚ್ ಮೋಶನ್ 
ಪ್ರೊಗ್ರಾಮ್ ತಯಾರಿಸಲು ಈ ಮುಂದಿನ ಹಂತಗಳ ಕುರಿತು ವಿಚಾರ ಮಾಡಬೇಕಾಗುತ್ತದೆ.
1. ಪಾರ್ಟ್-ಆಫ್ ಟೂಲ್ ಗಳ ಆಯ್ಕೆ.
2. ಇನ್ಸರ್ಟ್ ನ ಆಯ್ಕೆ.
3. ಟೂಲ್ ರೆಫರನ್ಸ್ ಪಾಯಿಂಟ್ ನ ಸ್ಥಾನ.
ಪ್ರೊಗ್ರಾಮ್
 
3_1  H x W: 0 x
03702 ಪಾರ್ಟ್-ಆಫ್ (ಟೂಲ್ ಎಡ್ಜ್ ನ ಎಡಬದಿ)
N120 G50 S1250 T0800 M42
N121 G96 S350 M03
N122 G00 X 2.65 Z-2.0 T0808 M08
N123 G01 Z - 0.03 F0.004
N124 G00 X 2.65 M09
N125 X 5.5 Z 2.0 T0800
N126 M30
%

ಪ್ರೊಗ್ರಾಮ್
03702A ಪಾರ್ಟ್-ಆಫ್ (ಟೂಲ್ ಎಡ್ಜ್ ನ ಬಲಬದಿ)
N120 G50 S1250 T0800 M42
N121 G96 S350 M03
N122 G00 X 2.65 Z - 1.875 T0808 M08
N123 G01 Z - 0.03 F0.004
N124 G00 X 2.65 M09
N125 X 5.5 Z 2.125 T0800
N126 M30
%

4_1  H x W: 0 x 
ಮೇಲಿನ ಎರಡೂ ಪ್ರೊಗ್ರಾಮ್ ಗಳಲ್ಲಿ N122 ಮತ್ತು N125 ಈ ಬ್ಲಾಕ್ ಹೋಲಿಸಿದಲ್ಲಿ Z ಅಕ್ಷದ ಮೌಲ್ಯ ಬದಲಾಗಿದೆ. ಇದಕ್ಕೆ ವಿರುದ್ಧವಾಗಿ X ಅಕ್ಷ ಇದ್ದು, ಅದರಿಂದ ಟೂಲ್ ಟಿಪ್ ನ ಯಂತ್ರಣೆಯ ಬದಿಯು ಕಾಣುತ್ತದೆ. ಟೂಲ್ ಎಡ್ಜ್ ನ ಎಡಬದಿಯಲ್ಲಿ ಮಾಡಿರುವ ಪ್ರೊಗ್ರಾಮ್ ನಲ್ಲಿ Z ಪೋಸಿಶನ್ ನಲ್ಲಿ ಇನ್ಸರ್ಟ್ ನ ಅಗಲವನ್ನು ಪಡೆಯಬೇಕಾಗುತ್ತದೆ. ಚಿತ್ರ ಕ್ರ. 6 ರಲ್ಲಿರುವ ವ್ಯಾಸದಲ್ಲಿ ಪಾರ್ಟಿಂಗ್ ಆಪರೇಶನ್ ನಡೆಯುತ್ತಿರುವಾಗ ಕಾರ್ಯವಸ್ತುವಿನ ರೆಫರನ್ಸ್ ಟೂಲ್ ನ ಯೋಗ್ಯವಾದ ಮತ್ತು ಆಯೋಗ್ಯವಾದ ಸ್ಥಾನವನ್ನು ತೋರಿಸಲಾಗಿದೆ.

ಸ್ಟಾಕ್ ಅಲೌನ್ಸ್
ಪಾರ್ಟ್-ಆಫ್ ಆಪರೇಶನ್ ಮಾಡುವಾಗ ಎಲ್ಲ ಯಂತ್ರಣೆಯು ಪೂರ್ತಿಯಾಗಿದೆ, ಎಂದು ಹೇಳಲಾಗುವುದಿಲ್ಲ. ಹಲವಾರು ಸಲ ಪಾರ್ಟ್-ಆಫ್ ಅಂದರೆ ಮೊದಲನೆಯ ಆಪರೇಶನ್ ಇರಬಹುದು ಅಥವಾ ಅದನ ನಂತರದ ಹೆಚ್ಚುವರಿ ಕೆಲಸವು ಯಂತ್ರಣೆಯಾಗಿರುವ ಭಾಗದಲ್ಲಿಯೂ ಇರಬಹುದು. ಈ ಪರಿಸ್ಥಿತಿಯಲ್ಲಿ ಹೆಚ್ಚುವರಿ ಮಟೀರಿಯಲ್ ಉಳಿಸಬೇಕಾಗುತ್ತದೆ. ಸಾಮಾನ್ಯವಾಗಿ 0.3 ಮಿ.ಮೀ. ರಿಂದ 0.5 ಮಿ.ಮೀ.ನಷ್ಟು ಮಟೀರಿಯಲ್ ಇಡುವುದು ಲಾಭಕಾರಿಯಾಗುತ್ತದೆ. ಈ ಸ್ಥಿತಿಯಲ್ಲಿ N122 ಬ್ಲಾಕ್ ಎರಡೂ ಪ್ರೊಗ್ರಾಮ್ ನಲ್ಲಿ ಬದಲಾಯಿಸಬೇಕಾಗುತ್ತದೆ. ಉದಾಹರಣೆ, ಮೊದಲನೆಯ ಪ್ರೊಗ್ರಾಮ್ ಗೋಸ್ಕರ (03702) Z-2.0 ನಿಂದ Z-2.01 ಮತ್ತು ಎರಡನೇ ಪ್ರೊಗ್ರಾಮ್ ಗೋಸ್ಕರ Z-1.875 ನಿಂದ Z-1.895. ಹಾಗೆಯೇ N122 ನಲ್ಲಿರುವ x ಮೌಲ್ಯ x 2.65 ಇದೆ. ಇದರಿಂದಾಗಿ 0.125’’ ನಷ್ಟು ಕ್ಲಿಯರನ್ಸ್ Ø 2.400 ನಲ್ಲಿ ಇರಬಲ್ಲದು. ಮೇಲಿನ ಉದಾಹರಣೆಯಲ್ಲಿ ಬಾರ್ ನ ವ್ಯಾಸವು 2.5’’ ಮತ್ತು ನೇರವಾದ ಕ್ಲಿಯರನ್ಸ್ 0.075’’ ಬಾರ್ ನ ಪ್ರತಿಯೊಂದು ಬದಿಯಲ್ಲಿರಬಹುದು.

ಟೂಲ್ ರಿಟರ್ನ್ ಮೋಶನ್
ಪಾರ್ಟಿಂಗ್ ಪೂರ್ಣವಾದ ನಂತರ ಟೂಲ್, ಟೂಲ್ ಬದಲಾಯಿಸುವ ಜಾಗದಲ್ಲಿ (ಟೂಲ್ ಚೇಂಜ್ ಪೋಸಿಶನ್) ಪಡೆಯುವ ಕೆಲಸವು ಟೂಲ್ ರಿಟರ್ನ್ ಮೋಶನ್ ನಲ್ಲಿ ಆಗುತ್ತದೆ. ಮೇಲಿನ ಪ್ರೊಗ್ರಾಮ್ ನಲ್ಲಿರುವ N124 ಬ್ಲಾಕ್ ಟೂಲ್ ರಿಟರ್ನ್ ಗೋಸ್ಕರ ಈ ಮುಂದಿನಂತೆ ಬರೆಯಬಹುದು.
N124 G00 X 5.5 Z-2.0 (ಅಥವಾ Z-2.125) T0800 M09
ಮೊದಲಾಗಿ X ಅಕ್ಷದಲ್ಲಿ ರಿಟರ್ನ್ ಮಾಡಿರಿ. ಈ ಸ್ಥಾನವು ಬಾರ್ ನ ವ್ಯಾಸದ ಮೇಲ್ಭಾಗದಲ್ಲಿರಬೇಕು.

ಚ್ಯಾಂಫರ್ ನೊಂದಿಗೆ ಪಾರ್ಟ್-ಆಫ್

5_1  H x W: 0 x 
ಪಾರ್ಟ್-ಆಫ್ ಟೂಲ್ ಬಳಸಿ ಯಂತ್ರಣೆಯನ್ನು ಪೂರ್ತಿ ಮಾಡಬೇಕಾಗುತ್ತದೆ, ಅಗ ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಬರಬೇಕು. ಸರ್ಫೇಸ್ ಫಿನಿಶ್ ಉಚ್ಚಮಟ್ಟದಲ್ಲಾಗಲು ಚೂಪಾಗಿರುವ ಮೂಲೆಗಳನ್ನು ತುಂಡು ಮಾಡುವುದು (ಚ್ಯಾಂಫರ್) ಮಾಡುವುದು ಆವಶ್ಯಕವಾಗಿರುತ್ತದೆ. ಮೇಲಿನ ಉದಾಹರಣೆಯಲ್ಲಿ X2.4 ಮತ್ತು Z2-1.875 ಈ ಕಟಿಂಗ್ ಪಾಯಿಂಟ್ ಗೆ ಚೂಪಾಗಿರುವ ಮೂಲೆಯು ಇರುತ್ತದೆ. ಸಾಮಾನ್ಯವಾದ ಟರ್ನಿಂಗ್ ಟೂಲ್ ಒಂದು ವೇಳೆ ಚೂಪಾಗಿರುವ ತುದಿಗಳನ್ನು ತೆಗೆಯದಿದ್ದಲ್ಲಿ ಪಾರ್ಟ್-ಆಫ್ ಇದೊಂದು ಉತ್ತಮ ಪರ್ಯಾಯವಾಗಿದೆ. ಈ ಪಾರ್ಟ್-ಆಫ್ ನಲ್ಲಿ ಚ್ಯಾಂಫರ್ ಯಂತ್ರಣೆಯನ್ನು ಮಾಡುವಾಗ ಯೋಗ್ಯ ರೀತಿಯ ಪ್ರೊಗ್ರಾಮ್ ತಯಾರಿಕೆಗೆ ಹಲವಾರು ಮಾರ್ಗದರ್ಶನದ ಸೂಚಿಗಳನ್ನು ಈ ಮುಂದೆ ನೀಡಲಾಗಿದೆ. (ಚಿತ್ರ ಕ್ರ. 7)
1. ನಿಯಮಿತ (ರೆಗ್ಯುಲರ್) ಪಾರ್ಟ್-ಆಫ್ Z ಸ್ಥಾನದ (ಪೋಸಿಶನ್) ಮುಂದೆ ಟೂಲ್ ನೀಡಿ Z ಅಕ್ಷದಲ್ಲಿ ಸ್ಥಾನವನ್ನು ನಿರ್ಧರಿಸಿರಿ.

6_1  H x W: 0 x 
2. ಪಾರ್ಟ್-ಆಫ್ ಆಪರೇಶನ್ ಪ್ರಾರಂಭಿಸಿ ಎಲ್ಲಿ ಚ್ಯಾಂಫರ್ ಮುಗಿಯುತ್ತದೆಯೋ, ಆ ವ್ಯಾಸದಲ್ಲಿಯೇ ನಿಲ್ಲಿಸಿರಿ.
3. ಪ್ರಾರಂಭದ ವ್ಯಾಸಕ್ಕೆ ಮತ್ತೆ ಬನ್ನಿ ಮತ್ತು ಚ್ಯಾಂಫರ್ ಪ್ರಾರಂಭದ ಸ್ಥಾನದಲ್ಲಿರುವುದರ ಕುರಿತು ಖಾತರಿ ವಹಿಸಿರಿ.
4. ಒಂದೇ ಬ್ಲಾಕ್ ನಲ್ಲಿ ಚ್ಯಾಂಫರ್ ಕಟ್ ಮಾಡಿರಿ ಮತ್ತು ಅದನ ನಂತರ ಬರುವ ಬ್ಲಾಕ್ ನಲ್ಲಿ ಪಾರ್ಟ್-ಆಫ್ ಮಾಡಿರಿ.
ಈ ಎಲ್ಲ ಅಂಶಗಳನ್ನು ಒಳ್ಳೆಯ ರೀತಿಯಲ್ಲಿ ತಿಳಿದುಕೊಳ್ಳಲು ಈ ಮುಂದಿನ ಪ್ರೊಗ್ರಾಮ್ ನ ಉದಾಹರಣೆಯನ್ನು ನೋಡಿರಿ.

ಪಾರ್ಟ್-ಟೂಲ್ ಬಳಸಿ ಚ್ಯಾಂಫರ್ ಪ್ರೊಗ್ರಾಮ್
03703 (ಪಾರ್ಟ್-ಆಫ್ ಚ್ಯಾಂಫರ್)
G20
...
N120 G50 S1250 T0800 M42
N121 G96 S350 M03
N122 G00 X 2.65 Z-2.015 T0808 M08
N123 G01 X2.2 F0.004
N124 X 2.46 F0.03
N126 U - 0.1 W - 0.05 F0.002
N127 X - 0.03 F0.004
N128 G00 X 2.65
N129 X 5.5 Z 2.0 T0800 M09
N130 M30
%

8_1  H x W: 0 x 
ಮೇಲಿನ ಪ್ರೋಗ್ರಾಮ್ ನಲ್ಲಿ ಬ್ಲಾಕ್ N122 ರಲ್ಲಿ Z ಅಕ್ಷದ 2.0 ಈ ಮೌಲ್ಯದ ಹಿಂದೆ 0.015 ದೂರದಲ್ಲಿ ಟೂಲ್ ನ ಸ್ಥಾನವನ್ನು ಪಡೆಯಲಾಗಿದೆ. ಆದರೆ ಬ್ಲಾಕ್ N123 ಸ್ಪಲ್ಪ ಸಮಯಕ್ಕೋಸ್ಕರ ಗ್ರೂವ್ ವ್ಯಾಸ 2.200 ನಲ್ಲಿ ಅಳವಡಿಸಲಾಗುತ್ತದೆ. ಮುಂದಿನ ಬ್ಲಾಕ್ N124 ಗ್ರೂವ್ ನ ಹೊರಗಿನ ಚಟುವಟಿಕೆಯನ್ನು (ಮೋಶನ್) ಮಾಡುತ್ತದೆ. ಈ ಚಟುವಟಿಕೆ ಚ್ಯಾಂಫರ್ ನ ಪ್ರಾರಂಭದ ವ್ಯಾಸದ ತನಕ (2.460) ಆಗುತ್ತದೆ. N125 ರಲ್ಲಿ ಟೂಲ್ ಚ್ಯಾಂಫರ್ ನ ಪ್ರಾರಂಭದ ಸ್ಥಾನದ ತನಕ Z ಅಕ್ಷಕ್ಕೆ ಹೋಗುತ್ತದೆ.
N126 ಇದು ಚ್ಯಾಂಫರ್ ಯಂತ್ರಣೆ (ಇನ್ ಕ್ರಿಮೆಂಟಲ್ ಮೋಡ್) ಆಗುತ್ತದೆ. ಒಂದು ವೇಳೆ ಎಬ್ ಸಲ್ಯೂಟ್ ಮೋಡ್ ಬಳಸಿದಲ್ಲಿ N126 ಬ್ಲಾಕ್ ಮುಂದಿನಂತಾಗಬಹುದು. N126 x 2.36 Z – 2.0 F0.002

7_1  H x W: 0 x 
 
ಇದರಲ್ಲಿ ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಬರಲು ಫೀಡ್ ರೇಟ್ ಕಡಿಮೆ ಮಾಡಲಾಗಿರುತ್ತದೆ.
ಬಾರ್ ನಿಂದ ಯಂತ್ರಭಾಗಗಳು ಬೇರ್ಪಡಿಸಲ್ಪಟ್ಟನಂತರ ಅದು ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದನಂತರ ಒಂದು ವೇಳೆ ಅದರಲ್ಲಿ ಹೆಚ್ಚು ಪ್ರಮಾಣದ ಒತ್ತಡ ಬಿದ್ದಲ್ಲಿ ತಯಾರಾಗಿರುವ ಉಚ್ಚಮಟ್ಟದ ಯಂತ್ರಭಾಗಗಳಲ್ಲಿ ನಷ್ಟ ಉಂಟಾಗುತ್ತದೆ. ಹಲವಾರು ಸಲ ಅದು ನಿರುಪಯೋಗಿಯೂ ಆಗುತ್ತದೆ. ಈ ನಷ್ಟವನ್ನು ತಡೆಯಲು ತಯಾರಾಗಿರುವ ಯಂತ್ರಭಾಗಗಳನ್ನು ಕೂಲಂಟ್ ಇರುವ ಬಕೇಟ್ ನಲ್ಲಿ ಬೀಳಿಸಬೇಕು. ಇದರಿಂದಾಗಿ ಉಂಟಾಗುವ ನಷ್ಟವನ್ನು ತಡೆಯಬಹುದು. ಇದಕ್ಕೋಸ್ಕರ ಯಂತ್ರಭಾಗಗಳ ತಯಾರಿಸುವಲ್ಲಿ ಸಿ.ಎನ್.ಸಿ. ಆಪರೇಟರ್ ಕೂಲಂಟ್ ತುಂಬಿರುವ ಬಕೆಟ್ ಇಡಬಲ್ಲನು.
ಮಹತ್ವದ ಸೂಚನೆಗಳು : ಪ್ರೊಗ್ರಾಮ್ ನಡೆಯುತ್ತಿರುವ ಮತ್ತು ಸ್ಪಿಂಡಲ್ ತಿರುಗುತ್ತಿರುವಾಗ ಯಂತ್ರಭಾಗಗಳನ್ನು ಸ್ಪರ್ಶಿಸಬಾರದು.
 
 ಸತೀಶ ಜೋಶಿ
 ಲೇಖಕರು ಮತ್ತು ಸಲಹೆಗಾರರು 
 8625975219
 [email protected]
 ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
@@AUTHORINFO_V1@@