ಮೈಕ್ರೊಫಿನಿಶಿಂಗ್‌ನಲ್ಲಿರುವ ಹೊಸ ಹಂತಗಳು

@@NEWS_SUBHEADLINE_BLOCK@@

Udyam Prakashan Kannad    10-Oct-2020   
Total Views |
 
1_1  H x W: 0 x
 
ವಾಹನ ಉದ್ಯಮದಲ್ಲಿ ಪಾವರ್‌ ಟ್ರೇನ್ ಇಂಜಿನಿಯರಿಂಗ್‌ನ ಮಿತಿಗಳನ್ನು ವಿಸ್ತರಿಸಲು ಹರಿತಕ್ರಾಂತಿಯ ಹೊರಸೂಸುವಿಕೆ ಮತ್ತು ಶಕ್ತಿಯ ಕಾರ್ಯಸಾಮರ್ಥ್ಯ ಇವೆರಡು ಘಟಕಗಳು ಮಹತ್ವದ್ದಾಗಿದೆ. ‘ಭಾರ ಕಡಿಮೆ ಮಾಡುವುದು’ ಮತ್ತು ‘ಘರ್ಷಣೆಯನ್ನು ಕಡಿಮೆ ಮಾಡುವುದು’ ಈ ಎರಡು ನೀತಿಗಳು ಈ ಸಂದರ್ಭದಲ್ಲಿ ತುಂಬಾ ಮಹತ್ವದ್ದಾಗಿವೆ. ಕ್ರ್ಯಾಂಕ್‌ಶಾಫ್ಟ್‌, ಕ್ಯಾಮ್‌ ಶಾಫ್ಟ್‌, ಟ್ರಾನ್ಸ್‌‌ ಮಿಶನ್ ಶಾಫ್ಟ್‌ ಇತ್ಯಾದಿ ಪಾವರ್‌ ಟ್ರೇನ್‌ಗೋಸ್ಕರ ಮಹತ್ವದ ಭಾಗಗಳಿಗೆ ಮೇಲಿನ ಎರಡೂ ಅಂಶಗಳನ್ನು ಕಾರ್ಯಗತಗೊಳಿಸಲು ಇಂಜಿನ್‌ನ ಡಿಸೈನ್ ಮಾಡುವವರಿಗೆ ಸರ್ಫೇಸ್‌ನ ಫಿನಿಶಿಂಗ್‌ನ ಸ್ಪೆಸಿಫಿಕೇಶನ್‌ ಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ನಿರ್ಧರಿಸಬೇಕಾಗುತ್ತದೆ. ಈ ಸ್ಪೆಸಿಫಿಕೇಶನ್‌ಗಳನ್ನು ಪಡೆಯಲು ಮೈಕ್ರೋಫಿನಿಶಿಂಗ್‌ನಂತಹ ಪ್ರಕ್ರಿಯೆಯು ತುಂಬಾ ಮಹತ್ವದ್ದಾಗಿದೆ. ಈ ಹಿಂದಿನ ಹಲವಾರು ವರ್ಷಗಳಲ್ಲಿ ಮೈಕ್ರೋಫಿನಿಶಿಂಗ್ ತಂತ್ರಜ್ಞಾನವು ಅನೇಕ ಹಂತಗಳನ್ನು ದಾಟಿರುತ್ತದೆ ಮತ್ತು ಇದರಿಂದಾಗಿ ಇಂಜಿನ್‌ನ ಕಾರ್ಯಸಾಮರ್ಥ್ಯದಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡುವುದೂ ಸಾಧ್ಯವಾಯಿತು.

ವಿಶೇಷವಾದ ಲೇಪನ ಪ್ರಕ್ರಿಯೆಯಿಂದಾಗುವ ಎಬ್ರೆಸಿವ್ ಬಳಸಿ ನಿರಂತರವಾಗಿ ಹೆಚ್ಚು ವೇಗವಾದ ಮತ್ತು ಹೆಚ್ಚು ಕಾರ್ಯಸಾಮರ್ಥ್ಯದಲ್ಲಿ ಒಂದೇ ರೀತಿಯಲ್ಲಿರುವ ಫಿನಿಶಿಂಗ್ ಪಡೆಯಲು ವಿಶಿಷ್ಟವಾದ ಕೋಟಿಂಗ್‌ನ ಫಿಲ್ಮ್ ಇರುವ ಎಬ್ರೆಸಿವ್ಜ್‌‌ಗಳನ್ನು ಬಳಸಿ ಮೈಕ್ರೋಫಿನಿಶಿಂಗ್ ಮಾಡುವ ಪ್ರಕ್ರಿಯೆಯನ್ನು ಅಭಿವೃದ್ಧಿಗೊಳಿಸಲಾಯಿತು. ಹೈ ಇಂಜಿನಿಯರಿಂಗ್ ತಂತ್ರವನ್ನು ಬಳಸಿ ಮಾಡಿರುವ ಸರ್ಫೇಸ್‌ನ ಸಂಪರ್ಕ ಕ್ಷೇತ್ರದಲ್ಲಿ ಮೈಕ್ರೋಫಿನಿಶಿಂಗ್‌ ನಿಂದಾಗಿ, ಲುಬ್ರಿಕಂಟ್ ಗುಣಧರ್ಮಗಳು ತಯಾರಾಗುತ್ತವೆ. ಇದರಿಂದಾಗಿ ಹೆಚ್ಚು ಭಾರವು ಸಹಿಸಿಕೊಳ್ಳಲು ಅಗತ್ಯವಿರುವ ಸಾಕಷ್ಟು ಹೆಚ್ಚು ಬೇರಿಂಗ್ ಸರ್ಫೇಸ್ ಉಪಲಬ್ಧವಾಗುತ್ತದೆ, ಹಾಗೆಯೇ ಲುಬ್ರಿಕೇಶನ್‌ಗೋಸ್ಕರ ಸರ್ಫೇಸ್‌ನಲ್ಲಿ ಸಾಕಷ್ಟು ಆಯಿಲ್ ಇಡಲಾಗುತ್ತದೆ.

2_1  H x W: 0 x 
 
ಈ ತಂತ್ರಜ್ಞಾನದಲ್ಲಿ ಕಳೆದ ಹಲವಾರು ವರ್ಷಗಳಲ್ಲಿರುವ ಪ್ರಮುಖವಾದ ಹಂತಗಳೆಂದರೆ ಉಚ್ಚ ಗುಣಮಟ್ಟದ ಇಂಜಿನಿಯರಿಂಗ್ ಮಾಡಿರುವ ಅತ್ಯಂತ ನಿರ್ದೋಷವಾದ ಫಿನಿಶಿಂಗ್ ಪಡೆಯಲು ಪ್ರಕ್ರಿಯೆಯ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಹಾಗೆಯೇ ವಿಶಿಷ್ಟ ಕೋಟಿಂಗ್‌ನ ಫಿಲ್ಮ್ ಇರುವ ಎಬ್ರೆಸಿವ್ಜ್‌ ಬಳಸಿ ವಿವಿಧ ಪ್ರಕಾರದ ಭಾಗಗಳ ಪ್ರಕ್ರಿಯೆಯನ್ನು ಮಾಡುವುದಕ್ಕೋಸ್ಕರವೂ ಈ ಪ್ರಕ್ರಿಯೆಯು ಅಭಿವೃದ್ಧಿಗೊಳಿಸಲಾಗಿದೆ. ಈ ಮಶಿನ್‌ಗಳು ಈಗ ಹೆಚ್ಚು ಫ್ಲೆಕ್ಸಿಬಲ್ ಉತ್ಪಾದನೆಯ ಪ್ರಕ್ರಿಯೆಗೋಸ್ಕರ ಅಗತ್ಯವಿರುವಂತಹ ವಿವಿಧ ಪರ್ಯಾಯಗಳು ಉಪಲಬ್ಧವಿರುವ, ಅತ್ಯಂತ ಕಡಿಮೆ ಆಕಾರದ, ಬಳಸುವವರಿಗೆ ತುಂಬಾ ಸುಲಭವಾಗಿರುವ ಮತ್ತು ಹೆಚ್ಚು ಸಾಮರ್ಥ್ಯ ಉಳ್ಳವುಗಳಾಗಿವೆ.

ಮೈಕ್ರೋಫಿನಿಶಿಂಗ್ ಎಂದರೆ ಏನು?

3_1  H x W: 0 x 
ಮೈಕ್ರೋಫಿನಿಶಿಂಗ್ ಇದು ಯಾವುದೇ ಕಾರ್ಯವಸ್ತುವಿನ ಎಲ್ಲ ರೀತಿಯ ಮಾಪನಗಳನ್ನು ಸೂಕ್ತ ರೀತಿಯಲ್ಲಿ ಮಾಡಲು ಮಶಿನಿಂಗ್ ಪೂರ್ಣವಾದ ನಂತರ, ಆ ಕಾರ್ಯವಸ್ತುವಿನ ಜೋಡಣೆ ಆಗುವ ಇನ್ನೊಂದು ಕಾರ್ಯವಸ್ತುವಿನೊಂದಿಗೆ ಸರಿಯಾಗಿ ಜೋಡಣೆಯಾಗಲು, ಸರ್ಫೇಸ್‌ಗೆ ಬೇಕಾಗಿರುವಷ್ಟೇ ಮಟೀರಿಯಲ್ ತೆಗೆಯುವ ರೀತಿ ಅಥವಾ ಪ್ರಕ್ರಿಯೆಯಾಗಿದೆ. ಮಶಿನಿಂಗ್ ಆದ ನಂತರ ಸರ್ಫೇಸ್‌ ನ ನಿರೀಕ್ಷಣೆಯನ್ನು ಮಾಡಿದಾಗ ಅದರಲ್ಲಿ ಟೂಲ್‌ ನ ಗುರುತುಗಳು, ಲೋಹಗಳ ಸೂಕ್ಷ್ಮವಾದ ತುಂಡುಗಳು, ಎತ್ತರ-ತಗ್ಗುಗಳು ಇತ್ಯಾದಿ ಕಂಡುಬರುತ್ತವೆ. ಉತ್ಪಾದನೆಯ ದೀರ್ಘಾಯುಷ್ಯಕ್ಕೆ, ಕಾರ್ಯಸಾಮರ್ಥ್ಯಕ್ಕೆ ಮತ್ತು ವಿಶ್ವಾಸಕ್ಕೋಸ್ಕರ ಈ ಎಲ್ಲ ದೋಷಗಳನ್ನು ತೆಗೆಯಲು ಮೈಕ್ರೋಫಿನಿಶಿಂಗ್ ಪ್ರಕ್ರಿಯೆಯನ್ನು ಮಾಡುವುದೂ ತುಂಬಾ ಆವಶ್ಯಕವಾಗಿರುತ್ತದೆ.
ಉದಾಹರಣೆ, ಮೈಕ್ರೋಫಿನಿಶಿಂಗ್ ಮಾಡದಿರುವ ಸರ್ಫೇಸ್ ಹಿಮದಿಂದ ಆವರಿಸಿರುವ ಕೆರೆಯೊಂದಿಗೆ ಹೋಲಿಸಬಹುದು. ಹೊರಗಿನಿಂದ ವೀಕ್ಷಿಸಿದಾಗ ಈ ಸರ್ಫೇಸ್ ದೃಢವಾದಂತೆ ಅನಿಸುತ್ತದೆ, ಆದರೆ ಹಿಮದ ಮೇಲೆ ಮಾನವನ ಭಾರದಿಂದಾಗಿ ಹೆಜ್ಜೆಯ ಗುರುತುಗಳು ಮೂಡಿಬರುತ್ತವೆ. ಆದರೆ ಐಸ್ ಸ್ಕೇಟ್ ಧರಿಸಿರುವ ಮಾನವನಿಗೆ ಅದರಿಂದಾಗಿ ಒಂದೇ ಜಾಗದಲ್ಲಿ ಉಂಟಾಗುವು ಒತ್ತಡವನ್ನು ಸಹಿಸಿ ಅಗತ್ಯವಿರುವ ಆಧಾರವನ್ನೂ ಹಿಮವು ನೀಡಬಲ್ಲದು. ಲೋಹಗಳ ಅಥವಾ ಸ್ಟೀಲ್‌ನ ಭಾಗಗಳಿಗೆ ಮಶಿನಿಂಗ್ ಮಾಡುವಾಗ ಸರ್ಫೇಸ್ ತುಂಡು ತುಂಡಾಗುತ್ತದೆ. ಉಷ್ಣಾಂಶವು ತಯಾರಿಸುವ ಗ್ರೈಂಡಿಂಗ್ ಪ್ರಕ್ರಿಯೆಯನ್ನು ಬಳಸಿದಲ್ಲಿ ಸರ್ಫೇಸ್‌ನಲ್ಲಿ ಎನಿಲಿಂಗ್ ಆಗುತ್ತದೆ. ಈ ರೀತಿಯ ಸರ್ಫೇಸ್ ದೊಡ್ಡದಾದ ಬೇರಿಂಗ್ ಲೋಡ್ ಸಹಿಸಲಾರದು. ಮೈಕ್ರೋಫಿನಿಶಿಂಗ್ ಈ ಪ್ರಕ್ರಿಯೆಯಲ್ಲಿ ಸಂಪರ್ಕದ ಕಡಿತವಾಗಿರುವ ಮತ್ತು ಎನಿಲಿಂಗ್ ಆಗಿರುವ ಸರ್ಫೇಸ್ ತೆಗೆಯಲಾಗುತ್ತದೆ. ಇದರಿಂದಾಗಿ ಮೂಲ ಲೋಹವು ಹೆಚ್ಚು ಪ್ರಮಾಣದಲ್ಲಿ ಬೇರಿಂಗ್‌ನ ಲೋಡ್ ಸಹಿಸಬಲ್ಲದು.

4_1  H x W: 0 x
ಅತ್ಯಾಧುನಿಕವಾದ ಕ್ರ್ಯಾಂಕ್‌ ಶಾಫ್ಟ್‌‌ ಗೋಸ್ಕರ ಆವಶ್ಯಕವಿರುವ ಸುಧಾರಿತ ಸ್ಪೆಸಿಫಿಕೇಶನ್ಸ್‌ ಪಡೆಯುವುದು
ಕ್ರ್ಯಾಂಕ್‌ ಶಾಫ್ಟ್‌ ಅಂದರೆ ಇಂಜಿನ್‌ನ ಹೃದಯವೇ ಸರಿ. ಆ ಇಂಜಿನ್‌ನಲ್ಲಿ ತಯಾರಾಗುವಂತಹ ಔಷ್ಣಿಕ ಶಕ್ತಿಯನ್ನು ಬಳಸಿ ಪಾವರ್‌ ಟ್ರೇನ್ ತಿರುಗಿಸುತ್ತೇವೆ. ಕಳೆದ ಹಲವಾರು ವರ್ಷಗಳ ಕಾಲಾವಧಿಯಲ್ಲಿ ಕ್ರ್ಯಾಂಕ್‌ಶಾಫ್ಟ್‌‌ನ ಸ್ಪೆಸಿಫಿಕೇಶನ್‌ಗಳಲ್ಲಿ ಜಾಗತಿಕ ಮಟ್ಟದಲ್ಲಿ ತುಂಬಾ ಸುಧಾರಣೆಗಳಾಗಿವೆ. ಘರ್ಷಣೆಯನ್ನು ಕಡಿಮೆ ಮಾಡಲು ಸಾಕಷ್ಟು ಹೆಚ್ಚು ಒಳ್ಳೆಯ ಫಿನಿಶ್ ಇರುವ ಬೇಡಿಕೆಯೂ ಹೆಚ್ಚುತ್ತಿರುವಾಗ ಭಾರವನ್ನು ಕಡಿಮೆ ಮಾಡಲು (ಮತ್ತು 4 ಸಿಲಿಂಡರ್ ಇರುವ ಇಂಜಿನ್‌ನ ಬದಲಾಗಿ 2 ಮತ್ತು 3 ಸಿಲಿಂಡರ್ ಇರುವ ಇಂಜಿನ್ ತಯಾರಿಸಲು) ಕ್ರ್ಯಾಂಕ್‌ಶಾಫ್ಟ್ ನ ವಿವಿಧ ಭಾಗಗಳಿಗೆ ಹೆಚ್ಚು ಬೇರಿಂಗ್ ಲೋಡ್ ಬರಲಾರಂಭಿಸಿತು. ಈ ಪರಿಸ್ಥಿತಿಯಲ್ಲಿ ಗ್ರಾಹಕರು ಅವರವರ ಅನುಭವದಿಂದಾಗಿ ಹೆಚ್ಚು ವೇಗ, ಇಂಜಿನ್‌ನ ಆಯುಷ್ಯ ಮತ್ತು NVH ನಾಯಿಸ್, ವೈಬ್ರೇಶನ್, ಹೀಟ್ ಮತ್ತು ಉಷ್ಣತೆ ಇತ್ಯಾದಿಗಳಲ್ಲಿ ಕಡಿತ, ಈ ಎಲ್ಲದರ ಬೇಡಿಕೆಯನ್ನು ನೀಡಲಾರಂಭಿಸಿದರು. ಇದರಿಂದಾಗಿ ಕ್ರ್ಯಾಂಕ್‌ ಶಾಫ್ಟ್‌‌ ಗಿಂತ ಉನ್ನತ ಗುಣಮಟ್ಟವನ್ನು ನಿರೀಕ್ಷಿಲಾಯಿತು.

ಘರ್ಣಣೆಯನ್ನು ಕಡಿಮೆ ಮಾಡಲು ಕ್ರ್ಯಾಂಕ್‌ ಶಾಫ್ಟ್ ನಲ್ಲಿ ಇರಬೇಕಾದ ಗುಣಧರ್ಮಗಳ ಆವಶ್ಯಕತೆ
⦁ ಮೈನ್ ಮತ್ತು ಪಿನ್ ಜರ್ನಲ್ಸ್‌‌ನಲ್ಲಿ ಸರ್ಫೇಸ್ ಫಿನಿಶ್ ಸಾಮಾನ್ಯವಾಗಿ Ra 0.1 ಮೈಕ್ರಾನ್‌ಗಿಂತ ಕಡಿಮೆ, ಆದರೆ ಥ್ರಸ್ಟ್‌ ವಾಲ್‌ನಲ್ಲಿರುವ ಫಿನಿಶ್ Ra 0.15 ಮೈಕ್ರಾನ್‌ಗಿಂತ ಕಡಿಮೆ, ಹೆಚ್ಚು ತೆಳ್ಳಗಿರುವ ಆಯಿಲ್ ಬಳಸುವ ಅಗತ್ಯವು ಉಂಟಾಗಿದ್ದರಿಂದ ಆಯಿಲ್‌ನ ಸೀಲ್‌ನ ಫಿನಿಶ್ ಹೆಚ್ಚು ಉನ್ನತ ಗುಣಮಟ್ಟದಲ್ಲಿರುವ ಅಗತ್ಯವಿದೆ.
⦁ ಗೋಲಾಕಾರ, ನೇರವಾಗಿರುವಿಕೆ, ದಂಡಗೋಲಾಕಾರ ಈ ಎಲ್ಲ ಭೌಮಿತಿಯ ಆಕಾರಗಳು ಹೆಚ್ಚು ನಿರ್ದೋಷವಾಗಿ, ಪ್ರೊಫೈಲ್ಸ್‌, ಕ್ರೌನಿಂಗ್, ಲೋಬಿಂಗ್‌ ಗೋಸ್ಕರ ಹೊಸ ಪ್ಯಾರಾಮೀಟರ್‌ಗಳು ಇರಬೇಕು.
⦁ ನೀಡಿರುವ ಮಿತಿಯಲ್ಲಿಯೇ ಆಕಾರ ಅಥವಾ ಮಾಪನಗಳು ಇರುವಂತೆ ಮುತುವರ್ಜಿಯನ್ನು ವಹಿಸಿ ಆವಶ್ಯಕವಿರುವಷ್ಟೇ ಮಟೀರಿಯಲ್ ತೆಗೆಯಬೇಕು.
ವಾಹನ ಉದ್ಯಮದಲ್ಲಿ ಹೆಚ್ಚಾಗಿ ಅತ್ಯಾಧುನಿಕವಾದ ಕ್ರೇಂಕ್‌ ಶಾಫ್ಟ್‌ ಸ್ಟೆಪ್ II ಅಥವಾ ಸ್ಟೆಪ್ III ಮೈಕ್ರೋ ಫಿನಿಶ್ ಇಂತಹ ಮಲ್ಟಿಸ್ಟೆಪ್ ಪ್ರಕ್ರಿಯೆಯನ್ನು ಉಪಯೋಗಿಸಿ ಮೈಕ್ರೋಫಿನಿಶಿಂಗ್ ಮಾಡಲಾಗಿರುತ್ತದೆ.

ವಾಹನದಲ್ಲಿ ಟ್ರಾನ್ಸ್‌‌ಮಿಶನ್‌ ಗೆ ಬಳಸುವ ಭಾಗಗಳ ಮೈಕ್ರೋಫಿನಿಶಿಂಗ್

5_1  H x W: 0 x 
ವಾಹನಗಳಲ್ಲಿರುವ ಟ್ರಾನ್ಸ್ ಮಿಶನ್‌ ಗೋಸ್ಕರ ಉಪಯೋಗಿಸಲಾಗುವ ಗಿಯರ್ ಶಾಫ್ಟ್ ನಂತಹ ಭಾಗಗಳು (ಇನ್‌ ಪುಟ್ ಶಾಫ್ಟ್‌, ಔಟ್‌ ಪುಟ್ ಶಾಫ್ಟ್‌, ಮೇನ್ ಶಾಫ್ಟ್‌) ಮತ್ತು ಸಿಂಕ್ರೋನನ್ಸ್‌, ಡಿಫರನ್ಸಿಯಲ್ ಹೌಸಿಂಗ್ ಇತ್ಯಾದಿಗೋಸ್ಕರ ಸಾಂಪ್ರದಾಯಿಕವಾಗಿ ಕೇವಲ ಸರ್ಫೇಸ್‌ ನ ಫಿನಿಶಿಂಗ್‌ ನ ಪ್ಯಾರಾಮೀಟರ್‌ ಗಳಿರುತ್ತವೆ. ಉದಾಹರಣೆ, Ra ಮೌಲ್ಯವು ಇಂಜಿನ್‌ನ ಭಾಗದಷ್ಟು ಮಹತ್ವದ್ದಾಗಿಲ್ಲದಿದ್ದರೂ ಟ್ರಾನ್ಸ್‌‌ ಮಿಶಿನ್‌ಗೋಸ್ಕರ ಬಳಸಲಾಗುವ ಭಾಗಗಳ ಪ್ಯಾರಾಮೀಟರ್‌ಗಳು ಕಳೆದ ಹಲವಾರು ವರ್ಷಗಳಲ್ಲಿ ಅಭಿವೃದ್ಧಿಯಾಗಿವೆ. ಇದರಿಂದಾಗಿ ಸುಪರ್ ಫಿನಿಶಿಂಗ್‌ನ ಬದಲಾಗಿ ಮೈಕ್ರೋಫಿನಿಶಿಂಗ್ ತಂತ್ರಜ್ಞಾನವನ್ನು ಬಳಸುವ ಅಗತ್ಯವು ಉಂಟಾಗಿದೆ. Ra ಮೌಲ್ಯದ ಹೊರತಾಗಿ ಅನೇಕ ಭಾಗಗಳಿಗೆ ಈಗ RK, Tp, Rmr ಮತ್ತು ಲೀಡ್ ಅ್ಯಂಗಲ್ ಇಂತಹ ಪ್ಯಾರಾಮೀಟರ್‌ಗಳನ್ನು ಅತ್ಯಂತ ಸೂಕ್ಷ್ಮವಾಗಿ ನೀಡಲಾಗಿರುತ್ತವೆ.
ಮೈಕ್ರೋಫಿನಿಶಿಂಗ್ ಮತ್ತು ಸುಪರ್ ಪಿನಿಶಿಂಗ್ ಇವೆರಡರಲ್ಲಿರುವ ವ್ಯತ್ಯಾಸ ಎಬ್ರೆಸಿವ್ಜ್‌ ಫಿಲ್ಮ್ ಮತ್ತು ಮಶಿನ್‌ ನ ಭಾಗಗಳಲ್ಲಿರುವ ಸಂಪರ್ಕದ ವಿಧಕ್ಕೆ ಅನುಸಾರವಾಗಿ ಚಿತ್ರ ಕ್ರ. 1 ಮತ್ತು 2 ರಲ್ಲಿ ತೋರಿಸಿದಂತೆ ಸ್ಪಷ್ಟಪಡಿಸಲಾಗಿದೆ.
ಸರ್ಫೇಸ್‌ನ ಫಿನಿಶಿಂಗ್‌ನಲ್ಲಿ ಮೈಕ್ರೋಫಿನಿಶಿಂಗ್ ಹೆಚ್ಚು ನಿರಂತರತೆ ನೀಡುತ್ತದೆ. ಸುಪರ್ ಫಿನಿಶಿಂಗ್ ಭೂಮಿತಿಯ ಸುಧಾರಣೆಯು ಸಾಧ್ಯವಿಲ್ಲದಿದ್ದಲ್ಲಿ ಮೈಕ್ರೋಫಿನಿಶಿಂಗ್‌ನಲ್ಲಿ ಇಂತಹ ಸುಧಾರಣೆಯನ್ನು ಖಂಡಿತವಾಗಿಯೂ ಮಾಡಬಹುದಾಗಿದೆ. ಬ್ಯಾಲೆನ್ಸರ್ ಶಾಫ್‌ಟ್‌, ಡಿಫರನ್ಶಿಯಲ್ ಗಿಯರ್ ಹೌಸಿಂಗ್, ಮೇನ್ ಶಾಫ್ಟ್‌ ಇತ್ಯಾದಿಗೋಸ್ಕರ ಮೈಕ್ರೋಫಿನಿಶಿಂಗ್ ಮಾಡಿರುವ ಅನೇಕ ಯಶಸ್ವಿಯಾಗಿರುವ ಯೋಜನೆಗಳಿಗೆ ಈ ತಂತ್ರಜ್ಞಾನದಿಂದ ಆಗಿರುವ ಲಾಭವನ್ನು ಸ್ಪಷ್ಟಪಡಿಸಲಾಗುತ್ತದೆ.

ಕೇಸ್ ಸ್ಟಡಿ
ಕ್ಯಾಮ್‌ ಶಾಫ್ಟ್ ಗೋಸ್ಕರ ಸ್ಟೋನ್ ಫಿನಿಶಿಂಗ್ ತಂತ್ರಜ್ಞಾನದ ಬದಲಾಗಿ ಮೈಕ್ರೋಫಿನಿಶಿಂಗ್ ತಂತ್ರಜ್ಞಾನದ ಬಳಕೆ
ಕ್ಯಾಮ್‌ ಶಾಫ್ಟ್‌‌ ನೊಂದಿಗೆ ಶಾಫ್ಟ್ ನಂತಹ ಭಾಗಗಳ ಫಿನಿಶಿಂಗ್ ಮಾಡಲು ಸ್ಟೋನ್ ಫಿನಿಶಿಂಗ್ ಇಂತಹ ಸಾಂಪ್ರದಾಯಿಕವಾದ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಫಿಲ್ಮ್ ಇರುವ ಎಬ್ರೆಸಿವ್ ಬಳಸಿ ಮಾಡಿರುವ ಮೈಕ್ರೋಫಿನಿಶಿಂಗ್‌ನ ಸ್ಟೋನ್ ಫಿನಿಶಿಂಗ್‌ನೊಂದಿಗೆ ಹೋಲಿಸಿದಲ್ಲಿ ಅನೇಕ ಲಾಭಗಳಿವೆ. ಉದಾಹರಣೆ, ಗುಣಮಟ್ಟದಲ್ಲಿ ನಿರಂತರತೆ, ನಿರ್ವಹಣೆಯ ಖರ್ಚು ಕಡಿಮೆ ಮತ್ತು ಕಡಿಮೆ ಅಡ್ಜೆಸ್ಟ್ ಮೆಂಟ್ಸ್‌, ಬಲಕ್ಕೆ ಕಡಿಮೆ ಉಪಯೋಗ ಇತ್ಯಾದಿ. ಮೇಲಿನ ಎಲ್ಲ ಕಾರಣಗಳಿಂದಾಗಿ ಶಾಫ್ಟ್ ನ ವಿಧಗಳ ಅನೇಕ ಭಾಗಗಳಲ್ಲಿ ಈಗ ಯಾವಾಗಲೂ ಉಪಯೋಗಿಸುವ ಸ್ಟೋನ್ ಲ್ಯಾಪಿಂಗ್‌ನ ಬದಲಾಗಿ ಮೈಕ್ರೋಫಿನಿಶಿಂಗ್ ಬಳಸಲಾಗುತ್ತದೆ. ಇಂಜಿನ್‌ ನ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಕಂಪನಿಯು ಅಮೇರಿಕಾದಲ್ಲಿರುವ ಕಾರಖಾನೆಗಳೊಂದಿಗೆ ಅನೇಕ ಕಾರಖಾನೆಗಳಲ್ಲಿ ಸ್ಟೋನ್ ಮತ್ತು ಫಿಲ್ಮ್ ಒಟ್ಟಾಗಿ ಉಪಯೋಗಿಸಿ ಅತ್ಯಂತ ಕಠಿಣವಾದ ಪ್ಯಾರಾಮೀಟರ್‌ಗಳನ್ನು ಪಡೆದಿರುವ ಕುರಿತು ಒಂದು ಉದಾಹರಣೆಯೂ ಇದೆ.
ಈ ಹಿಂದೆ ಬಳಲಾಗುತ್ತಿದ್ದ 3 ಹಂತಗಳಿರುವ ಫಿನಿಶ್ ಪ್ರಕ್ರಿಯೆಯ ಬದಲಾಗಿ ಕೇವಲ ಫಿಲ್ಮ್ ಬಳಸಿ ಮಾಡಿರುವ 2 ಹಂತಗಳ ಪ್ರಕ್ರಿಯೆಯನ್ನು ಬಳಸಲಾಯಿತು. ಸರ್ಫೇಸ್‌ನಲ್ಲಿ ಲಭಿಸಿರುವ ಫಿನಿಶ್ ಈ ಮುಂದಿನಂತಿದೆ.
Ra < 0.067 ಮೈಕ್ರಾನ್ಸ್‌ ಮತ್ತು
Cpm > 1.67
Rtm 0.412
Wt < 0.45
Wc < 0.12
ಲಭಿಸಿರುವ ನಿರಂತರತೆ ಮತ್ತು ಶಕ್ತಿಯ ಕಡಿಮೆ ಬಳಕೆ ಹಾಗೆಯೇ ಕಡಿಮೆ ರೊಟೇಶನ್ ಟೈಮ್ ಇದರಿಂದಾಗಿ ಗ್ರಾಹಕರಿಗೆ ಸಮಾಧಾನ ಲಭಿಸಿತು.

ತೀರ್ಮಾನ
ಮೈಕ್ರೋಫಿನಿಶಿಂಗ್‌ನಲ್ಲಿರುವ ಹಂತಗಳು
ಮೈಕ್ರೋಫಿನಿಶಿಂಗ್ ಇದು ಶಕ್ತಿಯ ಯೋಗ್ಯವಾದ ಬಳಕೆ ಮತ್ತು ಹೊರಸೂಸುವಿಕೆ ಇದರ ಕುರಿತು ಇಂಜಿನ್‌ನ ಕಾರ್ಯಸಾಮರ್ಥ್ಯ ಹೆಚ್ಚಿಸಲು ವಾಹನಗಳ ಪವರ್‌ ಟ್ರೇನ್‌ನಲ್ಲಿರುವ ಮಹತ್ವದ ಪ್ರಕ್ರಿಯೆಯ ತಂತ್ರಜ್ಞಾನವಾಗಿದೆ. ಇದಕ್ಕೆ ಇನ್ನಷ್ಟು ಹೆಚ್ಚು ಫಿನಿಶಿಂಗ್ ಪಡೆಯುವ ಸಾಮರ್ಥ್ಯ ಪಾವರ್‌ ಟ್ರೇನ್‌ನಲ್ಲಿ ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು NVH ಕಡಿಮೆ ಮಾಡುತ್ತದೆ. ಭವಿಷ್ಯತ್ಕಾಲದಲ್ಲಿ ಕ್ರ್ಯಾಂಕ್‌ಶಾಫ್ಟ್‌, ಕ್ಯಾಮ್‌ ಶಾಫ್ಟ್‌ ಮತ್ತು ಅನೇಕ ಪವರ್‌ ಟ್ರೇನ್ ಭಾಗಗಳ ಪ್ಯಾರಾಮೀಟರ್‌ಗಳು ಹೆಚ್ಚೆಚ್ಚು ಖಚಿತವಾಗಿ ಆಗುವ ಸಾಧ್ಯತೆ ಇದೆ. ಮೈಕ್ರೋಫಿನಿಶಿಂಗ್ ತಂತ್ರಜ್ಞಾನದಲ್ಲಾದ ಪ್ರಗತಿಯಿಂದಾಗಿ ಈ ಘಟಕಗಳನ್ನು (ಪ್ಯಾರಾಮೀಟರ್) ನಿರಂತರವಾಗಿ ಪಡೆಯುವುದು ಸಾಧ್ಯವಾಗಬಹು\ದು.


6_1  H x W: 0 x 
 ಸಮೀರ್ ಕೇಳ್ ಕರ್
 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
 ಗ್ರೈಂಡ್ ಮಾಸ್ಟರ್ ಮಶಿನ್ಸ್‌ ಪ್ರೈ.ಲಿ.
 9049948833
ಸಮೀರ್ ಕೇಳಕರ್ ಇವರು ಐ.ಐ.ಟಿ ಮುಂಬಯಿಯಲ್ಲಿ ರಜತ ಪದಕವನ್ನು ಪಡೆದ ಪದವೀಧರರಾಗಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್‌ಲೇ ಎಂಬಲ್ಲಿಂದ ಅವರು ರೊಬೊಟಿಕ್ ಈ ವಿಷಯದಲ್ಲಿ ಎಮ್.ಎಸ್. ಮಾಡಿರುತ್ತಾರೆ. ‘ಗ್ರೈಂಡ್ ಮಾಸ್ಟರ್ ಮಶಿನ್ಸ್ ಪ್ರೈ.ಲಿ.’ ಈ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಈ ವಿಭಾಗದ ಪ್ರಮುಖರಾಗಿದ್ದಾರೆ.

@@AUTHORINFO_V1@@