TAL ಬ್ರ್ಯಾಬೋ ರೊಬೋವ್ಹಿಝ್ ಎಜ್ಯುಕಾರ್ಟ್

@@NEWS_SUBHEADLINE_BLOCK@@

Udyam Prkashan Kannad    30-Jan-2020   
Total Views |
 
TAL ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್ಸ್‌ ಪ್ರೈ. ಲಿ. ಈ ಕಂಪನಿಯು ಟಾಟಾ ಮೋಟರ್ಸ್ ಇವರ ಸಂಪೂರ್ಣ ಮಾಲಿಕತ್ವದ ಉಪ ಕಂಪನಿಯಾಗಿದೆ. ಭಾರತದಲ್ಲಿ ಇದೊಂದು ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ಈ ಕಂಪನಿಯು ಈ ಹಿಂದಿನ 40 ವರ್ಷಕ್ಕಿಂತ ಹೆಚ್ಚು ಸಮಯ ವಾಹನ ಮತ್ತು ಬೃಹತ್ ಇಂಜಿನಿಯರಿಂಗ್ ಉದ್ಯಮದಲ್ಲಿ ಗ್ರಾಹಕರಿಗೆ ಮತ್ತು ಇತ್ತಿಚೆಗೆ ರೊಬೋಟಿಕ್ಸ್‌, ಎರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಗ್ರಾಹಕರಿಗೆ ಯಶಸ್ವಿಯಾಗಿ ಉತ್ಪಾದನೆಗಳಿಗೆ ಉಪಾಯಗಳನ್ನು (ಪ್ರೊಡಕ್ಟ್‌ ಸಲ್ಯುಶನ್) ಪೂರೈಸುತ್ತಿದ್ದಾಾರೆ. 1960 ಮತ್ತು 70 ರ ದಶಕದಲ್ಲಿ ಇಂತಹ ಮಶಿನ್‌ಗಳು ಮತ್ತು ಸಾಮಗ್ರಿಗಳನ್ನು ಆಮದು ಮಾಡುವ ಖರ್ಚು ಕಡಿಮೆ ಮಾಡಿ, ಬಂಡವಾಳವನ್ನು ಒಟ್ಟು ಮಾಡುವ ಖರ್ಚನ್ನು ಕಡಿಮೆ ಮಾಡಲು ಮತ್ತು ಭಾರತದಲ್ಲಿರುವ ಗ್ರಾಹಕರಿಗೆ ಪೂರೈಸುವಂತಹ ಬೆಲೆಯಲ್ಲಿ ವಾಹನಗಳನ್ನು ತಯಾರಿಸಲು ಟಾಟಾ ಮೋಟರ್ಸ್ ಇವರು ಈ ಮಾಡೆಲ್ ಅವಲಂಬಿಸಿದ್ದರು.
 

1_1  H x W: 0 x 
 
ಇಂದಿನ ಜಾಗತಿಕ ಉತ್ಪಾದನೆಯ ಕ್ಷೇತ್ರದಲ್ಲಿ ಕೆಲಸಕ್ಕೋಸ್ಕರ ಬರುವಂತಹ ಇಂಜಿನಿಯರ್‌ಮತ್ತು ಕೆಲಸಗಾರರಿಂದ ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಹಲವಾರು ವಿಷಯಗಳ ಕುರಿತು ಜ್ಞಾನದ ಅಪೇಕ್ಷೆಯು ಇರುವುದು ಕಂಡುಬರುತ್ತಿದೆ.
ಇಂತಹ ಬೇಡಿಕೆಗಳನ್ನು ಗಮನಿಸಿ TAL ಬ್ರ್ಯಾಬೋ ರೊಬೋವ್ಹಿಝ್ ಎಜ್ಯುಕಾರ್ಟ್ ಎಂಬ ಯಂತ್ರಮಾನವನ ವಿನ್ಯಾಾಸವನ್ನು (ಡಿಝೈನ್) ವಿದ್ಯಾರ್ಥಿಗಳಿಗೋಸ್ಕರ ಮಾಡಲಾಯಿತು. ರೊಬೋಟಿಕ್ಸ್‌ ಸ್ವಯಂಚಾಲನೆಯನ್ನು ತಂತ್ರಜ್ಞಾನದ ತರಗತಿಯಲ್ಲಿ ಕುಳಿತು ಪ್ರತ್ಯಕ್ಷವಾದ ಅನುಭವವನ್ನು ಪಡೆಯುವಲ್ಲಿ ಈ ರೊಬೋ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.
 
TAL ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್‌ಸ್‌ ಇವರು ಈ ಯಂತ್ರಮಾನವನನ್ನು ವಿಶ್ವವಿದ್ಯಾಲಯಗಳು, ಇಂಜಿನಿಯರಿಂಗ್ ಕಾಲೇಜ್‌ಗಳು, ಪಾಲಿಟೆಕ್ನಿಕ್ ಮತ್ತು ತರಬೇತಿಯನ್ನು ನೀಡುವಂತಹ ಸಂಸ್ಥೆಗಳ ಬೇಡಿಕೆಗಳನ್ನು ಪೂರ್ತಿ ಮಾಡಲು ತಯಾರಿಸಿದ್ದು ಶೈಕ್ಷಣಿಕ ಶಾಖೆಯ ಮೂಲಕ ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಿದ್ದಾಾರೆ. ಈ ಯಂತ್ರಮಾನವನು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪ್ರತ್ಯಕ್ಷವಾದ ಜ್ಞಾನವನ್ನು ನೀಡಲು ಮತ್ತು ವಿವಿಧ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಉಪಯೋಗಿಸಲಾಗುವ ಔದ್ಯೋಗಿಕ ಯಂತ್ರಮಾನವನ ಕೆಲಸವನ್ನು ತಿಳಿಸಿ ಹೇಳಲು ವಿಶೇಷವಾಗಿ ಡಿಝೈನ್ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅಪ್ಲಿಕೇಶನ್ ಅಭಿವೃದ್ಧಿ ಮಾಡುವುದು, ಪ್ರೊಗ್ರಾಮಿಂಗ್, ಡಿಝೈನಿಂಗ್, ರೊಬೋಟಿಕ್ ಸೆಲ್‌ನ ಕೆಲಸ ಇವೆಲ್ಲದರ ಮೂಲಭೂತ ತತ್ವಗಳನ್ನು ಕಾರ್ಯಗತ ಮಾಡುವ ಅವಕಾಶವು ಲಭಿಸುತ್ತದೆ. ಈ ಪ್ರತ್ಯಕ್ಷ ಕೆಲಸದ ಅನುಭವದಿಂದಾಗಿ ವಿದ್ಯಾರ್ಥಿಗಳಿಗೆ ರೊಬೋಟಿಕ್‌ಸ್‌ ಮತ್ತು ಸ್ವಯಂಚಾಲನೆಯ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಉಚ್ಚ ಗುಣಮಟ್ಟದ ಮತ್ತು ಇನೊವ್ಹೆಟೀವ್ ಚಟುವಟಿಕೆಗೋಸ್ಕರ, ಹಾಗೆಯೇ ಅಗತ್ಯವಿರುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಸಹಾಯವಾಗುತ್ತದೆ.
 
ಸದ್ಯದ ಉತ್ಪಾದನೆಯಲ್ಲಿ ಮತ್ತು ಅಸೆಂಬ್ಲಿಯ ಕೆಲಸಗಳಲ್ಲಿ ರೊಬೋಟಿಕ್‌ಸ್‌ ಮತ್ತು ಸ್ವಯಂಚಾಲನೆಯ ಮಹತ್ವವು ಹೆಚ್ಚುತ್ತಿರುವಾಗ, ಮುಂದೆ ಅದರಲ್ಲಿ ಕೆಲಸ ಮಾಡುವವರಿಗೆ ಈ ಪ್ರಕ್ರಿಯೆಯು ಸುಲಭವಾಗಲು ತರಬೇತಿಯನ್ನು ನೀಡುವುದು ಅಗತ್ಯವಾಗಿದೆ.
 
TAL ಬ್ರ್ಯಾಬೊ ರೊಬೊವಿಝ್ ಎಜ್ಯುಕಾರ್ಟ್‌ನಲ್ಲಿ ವಿವಿಧ ಉಪಾಯಗಳಿಗೋಸ್ಕರ ಮುಂದಿನ ನಾಲ್ಕು ಪರ್ಯಾಯಗಳು ಉಪಲಬ್ಧವಿವೆ.
 

2_1  H x W: 0 x 
 
1. ಪ್ಯಾಲೆಟೈಝಿಂಗ್ ಮತ್ತು ಪಾಥ್ ಟ್ರೇಸಿಂಗ್
2. ಪಿಕ್, ಪ್ಲೇಸ್ ಮತ್ತು ಪಾಥ್ ಟ್ರೇಸಿಂಗ್
3. ಕವರ್ ಸೆನ್ಸರ್‌ನೊಂದಿಗೆ ಪಿಕ್ ಮತ್ತು ಪ್ಲೇಸ್
4. ಚಟುವಟಿಕೆಗಳು ಮತ್ತು ಶಬ್ದವನ್ನು ಅರಿಯುವಂತಹ ಅಪ್ಲಿಕೇಶನ್.
 
ರೊಬೊವಿಝ್ ಎಜ್ಯುಕಾರ್ಟ್ ಇದು ಶೈಕ್ಷಣಿಕ ಕ್ಷೇತ್ರದಲ್ಲಿರುವ ನಮ್ಮ ಪಾಲುಗಾರರೊಂದಿಗೆ ಸಂಬಂಧವನ್ನು ದೃಢಪಡಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದರಿಂದಾಗಿ ಔದ್ಯೋಗಿಕ ಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರ ಇವೆರಡಲ್ಲಿರುವ ಅಂತರವನ್ನು ಕಡಿಮೆ ಮಾಡುವಲ್ಲಿ ಮತ್ತು ಔದ್ಯೋಗಿಕ ಯಂತ್ರಮಾನವನೊಂದಿಗೆ ಭವಿಷ್ಯತ್ಕಾಾಲದಲ್ಲಿ ಕೆಲಸ ಮಾಡುವವರಿಗೆ ಒಂದು ಪಠ್ಯಕ್ರಮವನ್ನು ಅಭಿವೃದ್ಧಿ ಮಾಡಲು ಸಹಾಯವಾಗಬಹುದು. ಈ ಯಂತ್ರಮಾನವ ಓಪನ್ ಸೋರ್ಸ್ ಅನ್ನು ಆಧರಿಸಿದೆ ಮತ್ತು ಯಂತ್ರಮಾನವನ ನಿಯಂತ್ರಕನಿಗೆ (ಕಂಟ್ರೋಲರ್) ಮಿತಿ ಇಲ್ಲದ ಎಕ್ಸೆಸ್ ಇರುವುದರಿಂದ ವಿದ್ಯಾರ್ಥಿಗಳಿಗೆ ಮಹತ್ವಾಾಕಾಂಕ್ಷೆ ಇರುವ ಪ್ರಯೋಗವನ್ನು ಮಾಡಲು, ಶಿಕ್ಷಣವನ್ನು ಪಡೆಯಲು ಮತ್ತು ಅದರ ಕಲ್ಪನೆಗಳನ್ನು ಉಪಯೋಗಿಸಲು ಅವಕಾಶವೂ ಸಿಗಬಹುದು.
 
ನಿರ್ಮಿತಿಗೋಸ್ಕರ ಇರುವ ಪ್ರೇರಣೆ
 
ನಾವು ಉದ್ಯಮ ಮತ್ತು ಶಿಕ್ಷಣ ಕ್ಷೇತ್ರ ಇವೆರಡಲ್ಲಿರುವ ದೂರವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಿದೆವು. ಮುಂದಿನ ಕಾಲದಲ್ಲಿ ರೊಬೊಟಿಕ್‌ಸ್‌ ಮತ್ತು ಸ್ವಯಂಚಾಲನೆಯ ತಂತ್ರಜ್ಞಾನವು ಯಾರಿಗೆ ಚೆನ್ನಾಾಗಿ ತಿಳಿದಿದೆಯೋ, ಇಂತಹ ಮಾನವ ಸಂಪನ್ಮೂಲಗಳಿಗೆ ತುಂಬಾ ಮಹತ್ವವು ಲಭಿಸಲಿದೆ, ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಇದರಿಂದಾಗಿ ಪ್ರತ್ಯಕ್ಷವಾಗಿ ಕೆಲಸ ಮಾಡುವಾಗ ಉಪಯೋಗವಾಗುವಂತಹ ಕೌಶಲ್ಯವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯವಾಗಬಹುದು, ಇಂತಹ ಉತ್ಪಾದನೆಗಳನ್ನು ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸುವ ಇಚ್ಛೆಯೂ ನಮಗಿದೆ.
 
ಉತ್ಪಾದನೆಯ ನಿರ್ಮಾಣದಲ್ಲಿರುವ ಸವಾಲುಗಳು
 
ವಿದ್ಯಾರ್ಥಿಗಳಿಗೆ ಯಂತ್ರಮಾನವನ ಉಪಯೋಗ ಮಾಡುವ ಪ್ರತ್ಯಕ್ಷ ಅನುಭವದ ಲಾಭವನ್ನು ಕೊಡುವ ಇಚ್ಛೆ ಇತ್ತು. ಹಾಗೆಯೇ ಅವರ ಕಲ್ಪನೆಗಳನ್ನು ಉಪಯೋಗಿಸಿ ಅವರು ಮುಂದೆ ಅಪ್ಲಿಕೇಶನ್ ಅಭಿವೃದ್ಧಿ ಮಾಡಬೇಕು, ಎಂದು ನಮಗೆ ಅನಿಸುತ್ತಿತ್ತು. ಇದರಿಂದಾಗಿ ನಾವು ಸುರಕ್ಷೆಯನ್ನು ಗಮನಿಸಿ ಕಡಿಮೆ ನಿರ್ಬಂಧಗಳಿರುವ ಓಪನ್ ಸೋರ್ಸ್ ನಿಯಂತ್ರಕವನ್ನು ನೀಡಿದೆವು. ಈ ವೈಶಿಷ್ಟ್ಯವು ತುಂಬಾ ಸವಾಲುಗಳಿಂದ ಕೂಡಿತ್ತು.
 
ಉತ್ಪಾದನೆಗಳ (ಪ್ರೊಡಕ್ಟ್‌) ವೈಶಿಷ್ಟ್ಯಗಳು
 
ಯಂತ್ರಮಾನವನ ರಚನೆಯು (ಆರ್ಕಿಟೆಕ್ಚರ್) ರಹಿತವಾಗಿದ್ದು, ಅದರಲ್ಲಿ ನಿಯಂತ್ರಕಕ್ಕೆ ಎಕ್ಸೆಸ್ ನೀಡಲಾಗಿದೆ. ರೊಬೋಟಿಕ್ಸ್‌ ಮತ್ತು ಅಭಿವೃದ್ಧಿಯ ರೀತಿಯ ಅಭ್ಯಾಸವನ್ನು ಮಾಡಲು ಮುಕ್ತ ಸ್ಥಾನಗಳನ್ನು (ಓಪನ್ ಪ್ಲಾಟ್‌ ಫಾರ್ಮ್) ಪೂರೈಸಲಾಗಿದೆ. ಉಪಯೋಗದ ಸುಲಭತೆಗೋಸ್ಕರ ರೊಬೋವಿಝ್ ಎಜ್ಯುಕಾರ್ಟ್ ಒಂದು ಸಹಜವಾಗಿ ಸ್ಥಳಾಂತರಿಸಬಹುದಾದಂತಹ ವಾಹನದಲ್ಲಿ ಇಡಲಾಗಿದ್ದು, ಅದು ಲ್ಯಾಬ್ ವ್ಹ್ಯೂ ಮೆಟಾಲ್ಯಾಬ್, ವ್ಹಿಜ್ಯುವಲ್ ಸ್ಟುಡಿಯೋ ಮತ್ತು ಜಾವಾ ಇಂತಹ ಸಾಫ್ಟ್‌ ‌ವೇರ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹದ್ದಾಗಿದೆ. ಈ ಯಂತ್ರಮಾನವನಿಂದ ವಿದ್ಯಾರ್ಥಿಗಳಿಗೆ ರೊಬೋ ಪ್ರೊಗ್ರಾಮಿಂಗ್, ಅಕ್ಷಗಳ ಚಟುವಟಿಕೆ (ಎಕ್ಸಿಸ್ ಮೂವ್ಹಮೆಂಟ್), ಟ್ರ್ಯಾಜೆಕ್ಟರೀ ಮೂವ್ಹಮೆಂಟ್, ಒಂದೇ ರೇಖೆಯಲ್ಲಿರುವ ಚಟುವಟಿಕೆಗಳು (ಲಿನಿಯರ್ ಮೂವಮೆಂಟ್) ಮತ್ತು ಕಂಪ್ಯೂಟರ್ ವಿಜನ್ ಈ ವಿಷಯಗಳ ಶಿಕ್ಷಣವನ್ನು ನೀಡಬಹುದು. ಯಂತ್ರಮಾನವನ ವಿವಿಧ ಸಹಾಯಕವಾದ (ಪೆರಿಫೇರಲ್) ಸಾಮಗ್ರಿಗಳೊಂದಿಗೆ ಎಕೀಕರಣದಿಂದಾಗಿ (ಉದಾಹರಣೆ, ವ್ಹಿಜನ್ ಸೆನ್ಸರ್ ಮತ್ತು ಸೀಮಲೆಸ್ ಸಿಗ್ನಲ್ ಮತ್ತು ಕಮ್ಯುನಿಕೇಶನ್ ಇಂಟರ್‌ ಫೇಸ್) ವಿದ್ಯಾರ್ಥಿಗಳು ಅನೇಕ ವಿಧದ ಔದ್ಯೋಗಿಕ ಸಾಮಗ್ರಿಗಳಿಗೋಸ್ಕರ ಪ್ರಯೋಗವನ್ನು ಮಾಡಬಹುದು. ವಿದ್ಯಾರ್ಥಿಗಳು ಇದಕ್ಕೋಸ್ಕರ ಪ್ರೊಗ್ರಾಮ್ ಡಿಝೈನ್ ಮಾಡಲೂ ಕಲಿಯಬಹುದು.
 
ರೊಬೋವಿಝ್ ಎಜ್ಯುಕಾರ್ಟ್ ಯಂತ್ರಮಾನವನ ಲಾಭಗಳು
 
1. ರೊಬೋವಿಝ್ ಎಜ್ಯುಕಾರ್ಟ್ ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಹಜವಾಗಿ ಒಯ್ಯಬಹುದು.
2. ಕಡಿಮೆ ಬೆಲೆಯಲ್ಲಿ ಉಪಲಬ್ಧವಿದೆ.
3. ಪ್ರೊಗ್ರಾಮಿಂಗ್ ಮತ್ತು ನಿರ್ವಹಣೆಗೂ ಸುಲಭ.
4. ಒಂದೇ ಬಾರಿ ಮಾಡಿರುವ ಕ್ಯಾಾಲಿಬ್ರೇಶನ್ ದೀರ್ಘ ಕಾಲಾವಧಿಯ ತನಕ ಇರುತ್ತದೆ. ಆಗಾಗ ನಿರ್ವಹಣೆಯನ್ನು ಮಾಡುವ ಅಗತ್ಯವಿದ್ದರೂ ಕೂಡಾ ಮ್ಯಾನ್ಯುವಲಿ ಕ್ಯಾಲಿಬ್ರೇಶನ್ ಮಾಡಬೇಕಾಗುವುದಿಲ್ಲ.
5. ಶೂನ್ಯ ಬ್ಯಾಕ್‌ ಲ್ಯಾಶ್ ಇರುವ ಕಡಿಮೆ ಖರ್ಚಿನಲ್ಲಿರುವ ಶಕ್ತಿಯ ಹಸ್ತಾಂತರ (ಪಾವರ್ ಟ್ರಾನ್ಸ್‌‌ ಮಿಶನ್)
6. ಸಿಂಗಲ್ ಫೇಜ್‌ನಲ್ಲಿ ನಡೆಯುತ್ತದೆ.
7. 3D ಡ್ರಾಯಿಂಗ್ ಓದಿ ಬ್ರ್ಯಾಬೊ ಪ್ರೊಗ್ರಾಮ್‌ನಲ್ಲಿ ಅದನ್ನು ಬದಲಾಯಿಸುವಂತಹ CAD2MOTION ಸಾಫ್ಟ್‌‌ವೇರ್
8. ಭಾರತದಲ್ಲಿ ಎಲ್ಲೆಡೆಯೂ ಸೇವೆಯೂ ಲಭ್ಯವಿದೆ.
9. 90 ವಿದ್ಯಾರ್ಥಿಗಳಿಗೋಸ್ಕರ ಈ ಯಂತ್ರಮಾನವನನ್ನು ಉಪಯೋಗಿಸಿದಲ್ಲಿ, ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ ರೂಪಾಯಿ 2,200 ಆದಾಯವಿದ್ದಲ್ಲಿ 6 ತಿಂಗಳುಗಳಲ್ಲಿಯೇ ಖರ್ಚು ವಸೂಲು.
 
 
 
 
amit bhingurde_1 &nb
ಅಮಿತ ಭಿಂಗುರ್ಡೆ
ಸಿ.ಓ.ಓ., TAL ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್ ಪ್ರೈ.ಲಿ.
 
18002670103
 
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಬಳಿಕ 1991 ರಲ್ಲಿ ಅಮಿತ್ ಭಿಂಗಾರ್ಡೆ ಇವರು ಟಾಟಾ ಮೋಟರ್ಸ್ ಕಂಪನಿಯಲ್ಲಿ ಸೇರ್ಪಡೆಯಾಗಿ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು. ಸಾಮಾನ್ಯ ಉದ್ಯಮಿಗಳ ವ್ಯಾಾಪ್ತಿಯ ರೊಬೋಗಳನ್ನು ತಯಾರಿಸುವಂತಹ ಹಂಬಲವನ್ನು ಇಟ್ಟುಕೊಂಡು 2014 ರಿಂದ ‘TAL’ ನಲ್ಲಿ
                                                ಮ್ಯಾನಿಫ್ಯಾಕ್ಚರಿಂಗ್ ಸಲ್ಯುಶನ್ಸ್‌ ಪ್ರೈ. ಲಿ.ನಲ್ಲಿ ಅವರು ಸಿ.ಓ.ಓ.
                                                ಈ ಹುದ್ದೆಯಲ್ಲಿ ಕಾರ್ಯನಿರ್ವಹಣೆಯನ್ನು ಮಾಡುತ್ತಿದ್ದಾಾರೆ.
 
 
@@AUTHORINFO_V1@@