ಎಲೆಕ್ಸ್ ಗ್ರೈಂಡರ್ಸ್ ಪ್ರೈ.ಲಿ. (ನಾಗರ್ ಗಾವ್, ಲೋಣಾವಳಾ, ಮಹಾರಾಷ್ಟ್ರ) ಈ ಕಂಪನಿಯಲ್ಲಿ ಪಾಲಿಶಿಂಗ್‌ಗೋಸ್ಕರ ಅಭಿವೃದ್ಧಿ ಪಡಿಸಿರುವ ಲ್ಯಾಪಿಂಗ್ ಮಶಿನ್ ಕುರಿತು ಪ್ರಮುಖವಾದ ವಿಷಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಅಭಿವೃದ್ಧಿಯಲ್ಲಿ ಎದುರಿಸಬೇಕಾದ ಸಮಸ್ಯೆಗಳು, ಸಮಸ್ಯೆಗಳಿಗೆ ಪರಿಹಾರ ಇತ್ಯಾಾದಿಗಳ ಕುರಿತು ವಿವರಿಸಲಾಗಿದೆ.
ಕೆಲಸ ತಂಡದ ಮಾರ್ಗದರ್ಶಕರುಃ
ರಾಜ್ ಟಕ್ಕೆಕರ್ (ಕ್ವಾಾಲಿಟಿ ಮ್ಯಾನೆಜರ್)
ಕೆಲಸದ ತಂಡದ ಪ್ರಮುಖರುಃ ದೀಪಕ್ ಠೋಂಬರೆ (ಗುಣಮಟ್ಟ ವಿಭಾಗ)
ಕೆಲಸದ ತಂಡದ ಸದಸ್ಯರುಃ ವಿಜಯ ಖವರೆ (ಉತ್ಪಾಾದನೆ), ಶಿವಾಜೀ ಗರಡ್ (ಉತ್ಪಾಾದನೆ), ಬಚ್ಚನ್ ಧಾಯಗುಡೆ (ವೆಲ್ಡಿಂಗ್)
ಸಮಸ್ಯೆಗಳ ನಿವಾರಣೆ
ಲ್ಯಾಪಿಂಗ್ ಎಂಬ ಯಂತ್ರಣೆಯ ಪ್ರಕ್ರಿಯೆಯಲ್ಲಿ ಎರಡು ಸರ್ಫೇಸ್‌ಗಳ ನಡುವೆ ಎಬ್ರೆಸಿವ್ ಇಟ್ಟು ಕೈಯಿಂದ ಅಥವಾ ಮಶಿನ್‌ನ ಸಹಾಯದಿಂದ ಸರ್ಫೇಸ್‌ನಲ್ಲಿ ಒಂದರೊಂದಿಗೆ ಇನ್ನೊಂದನ್ನು ಉಜ್ಜಲಾಗುತ್ತದೆ. ಈ ಪ್ರಕ್ರಿಯೆಯ ಎರಡು ವಿಧಗಳಿವೆ. ಮೊದಲನೇ ರೀತಿಯಲ್ಲಿ ಲ್ಯಾಪಿಂಗ್ ಮಾಡುವಾಗ (ಇದಕ್ಕೆ ಸಾಂಪ್ರದಾಯಿಕವಾದ ರೀತಿಯಲ್ಲಿ ಗ್ರೈಂಡಿಂಗ್ ಎಂದು ವರ್ಣಿಸಲಾಗಿದೆ) ಎರಡರಲ್ಲೂ ಅಲ್ಯುಮಿನಿಯಮ್ ಆಕ್ಸೈಡ್‌ನಂತಹ ಎಬ್ರೆಸಿವ್ ಅಳವಡಿಸಿ ಉಜ್ಜಲಾಗುತ್ತದೆ.
ಈ ಎರಡು ಸರ್ಫೇಸ್‌ಗಳಲ್ಲಿ ಎಬ್ರೆಸಿವ್ ಉಜ್ಜಲ್ಪಟ್ಟಿದ್ದರಿಂದ ಅದರಲ್ಲಿ ಮೈಕ್ರೋೋಸ್ಕೋೋಪಿಕ್ ಕಾನ್‌ಕಾಡೈಲ್ ತಯಾರಾಗುತ್ತವೆ ಮತ್ತು ಎರಡೂ ಸರ್ಫೇಸ್‌ನಿಂದ ಮಟೀರಿಯಲ್ ತೆಗೆಯಲಾಗುತ್ತದೆ.
‘ಎಲೆಕ್ಸ್ ಗ್ರೈಂಡರ್ಸ್ ಪ್ರೈ.ಲಿ.’ ಈ ಕಂಪನಿಯಲ್ಲಿ ಲ್ಯಾಪಿಂಗ್ ಮಾಡಲು ಯಾವುದೇ ಮಶಿನ್ ಇರಲಿಲ್ಲ. ಎಲ್ಲ ರೀತಿಯ ಲ್ಯಾಪಿಂಗ್ ಪ್ರಕ್ರಿಯೆಯನ್ನು ಕೆಲಸಗಾರರು ಕೈಯಿಂದಲೇ ಮಾಡುತ್ತಿದ್ದರು.
ಹಳೆಯ ರೀತಿ
1.ಮೊತ್ತಮೊದಲಾಗಿ ಮಟೀರಿಯಲ್ ಮತ್ತು ಕಾರ್ಯವಸ್ತುಗಳಿಗೆ ಅನುಸಾರವಾಗಿ ಪಾಲಿಶ್ ಪೇಪರ್‌ನ ವಿಧವನ್ನು ಆಯ್ಕೆ ಮಾಡಲಾಗುತ್ತಿತ್ತು. ಉದಾಹರಣೆ, ಪಾಲಿಶ್ ಪೇಪರ್ 150, 80, 600.
2.ಪಾಲಿಶ್ ಪೇಪರ್‌ನ ವಿಧವನ್ನು ಆಯ್ಕೆ ಮಾಡಿದನಂತರ ಕೆಲಸಗಾರರ ಕೈಯ ಆಕಾರಕ್ಕೆ ಅನುಸಾರವಾಗಿ ಮತ್ತು ಸುಲಭತೆಗೆ ಅನುಸರಿಸಿ ಆ ಪಾಲಿಶ್ ಪೇಪರ್‌ನ ಸಣ್ಣ ತುಂಡುಗಳನ್ನು ಮಾಡಲಾಗುತ್ತಿತ್ತು.
3.ಅದರ ನಂತರ ಸಾಂಪ್ರದಾಯಿಕವಾದ ಪ್ರಕ್ರಿಯೆಯಲ್ಲಿ ಕೈಯಿಂದ ಲ್ಯಾಪಿಂಗ್ (ಚಿತ್ರ ಕ್ರ. 1) ಮಾಡಲಾಗುತ್ತಿತ್ತು.
ಹಳೆಯ ಪ್ರಕ್ರಿಯೆಯ ಸಮಸ್ಯೆಗಳು
ಸಾಂಪ್ರದಾಯಿಕವಾದ ಪ್ರಕ್ರಿಯೆಯಲ್ಲಿ ಲ್ಯಾಪಿಂಗ್ ಮಾಡುವಾಗ ಕಾರಖಾನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.
1.ಕೈಯಿಂದ ಪಾಲಿಶ್ ಮಾಡಲು ತುಂಬಾ ವೇಳೆಯು ಬೇಕಾಗುತ್ತಿತ್ತು. ಇದರಿಂದಾಗಿ ವೇಳೆಯು ವ್ಯರ್ಥವಾಗುತ್ತಿತ್ತು.
2.ಲ್ಯಾಪಿಂಗ್ ಮಾಡುತ್ತಿರುವಾಗ ಮತ್ತು ಪ್ರಕ್ರಿಯೆಯಾದ ನಂತರ ಶಿಸ್ತು ಇಲ್ಲದ್ದರಿಂದ ತುಂಬಾ ಸಲ ಕೆಲಸ ಮಾಡಿದ ನಂತರ ಉಳಿದಿರುವ ಪಾಲಿಶ್ ಪೇಪರ್ ಕಾರಖಾನೆಯಲ್ಲಿಯೇ ಅಲ್ಲಲ್ಲಿ ಬಿದ್ದಿರುತ್ತಿತ್ತು.
3.ಕೈಯಿಂದ ಪಾಲಿಶ್ ಮಾಡಿದರೆ ಕೆಲಸಗಾರರಿಗೆ ಗಾಯವಾಗುವ ಸಾಧ್ಯತೆ.
4.ಈ ಕೆಲಸವನ್ನು ಮ್ಯಾನ್ಯುವಲಿ ಮಾಡಿದ್ದರಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸರ್ಫೇಸ್ ಫಿನಿಶ್ ಲಭಿಸುತ್ತಿತ್ತು. ಅದರಲ್ಲಿ ಅಪೇಕ್ಷಿಸಿರುವ ನಿರಂತರತೆ ಇರುತ್ತಿರಲಿಲ್ಲ. ಆದ್ದರಿಂದ Ra ವ್ಯಾಾಲ್ಯೂ ಸಮಾನವಾಗಿ ಕಂಡು ಬರುತ್ತಿರಲಿಲ್ಲ.
5. ಇದರಲ್ಲಿ 100% ಪಾಲಿಶ್ ಪೇಪರ್ ಬಳಸದೇ ಇರುವುದರಿಂದ ಪೇಪರ್ ವ್ಯರ್ಥವಾಗುವ ಪ್ರಮಾಣವೂ (ಚಿತ್ರ ಕ್ರ. 2) ತುಂಬಾ ಹೆಚ್ಚಾಗಿತ್ತು.
ಸಮಸ್ಯೆಗಳ ಪರಿಹಾರಕ್ಕೆ ಮಾಡಿರುವ ವಿಚಾರಗಳು
ಹಳೆಯ ರೀತಿಯಲ್ಲಿ ವೇಳೆಯು ವ್ಯರ್ಥವಾಗುತ್ತಿತ್ತು, ಅಲ್ಲದೇ ಉತ್ಪಾದಕತೆಯೂ ಯೋಗ್ಯ ಪ್ರಮಾಣದಲ್ಲಿ ಲಭಿಸುತ್ತಿರಲಿಲ್ಲ. ಮೇಲಿನ ಎಲ್ಲ ಅಂಶಗಳ ಕುರಿತು ವಿಚಾರ ಮಾಡಿದಾಗ, ಲ್ಯಾಪಿಂಗ್ ಮಶಿನ್ ಖರೀದಿಸುವ ಪರಿಹಾರವೇ ನಮ್ಮೆದುರು ಕಾಣುತ್ತಿತ್ತು. ಆದರೆ ಈ ಮಶಿನ್‌ನ ಬೆಲೆಯೂ ತುಂಬಾ ಜಾಸ್ತಿ ಇದ್ದರಿಂದ ಅದು ನಮಗೆ ಆರ್ಥಿಕವಾಗಿ ಪೂರೈಸುವಂತಹದ್ದು ಆಗಿರಲಿಲ್ಲ. ಇದರಿಂದಾಗಿ ನಮ್ಮ ಕೆಲಸಗಾರರ ಪಂಗಡವು ಕಾರಖಾನೆಯಲ್ಲಿಯೇ ಲ್ಯಾಪಿಂಗ್ ಮಶಿನ್ ಅಭಿವೃದ್ಧಿ ಮಾಡುವ ಕುರಿತು ನಿರ್ಧಾರವನ್ನು ಮಾಡಿದರು. ಆ ನಿಟ್ಟಿನಲ್ಲಿ ನಾವು ಹೆಜ್ಜೆಯನ್ನು ಮುಂದಿಟ್ಟೆವು. ಈ ಮಶಿನ್ ಅಭಿವೃದ್ಧಿ ಮಾಡಲು ಮಾಡಿರುವ ವಿಚಾರಗಳನ್ನು (ಚಿತ್ರ ಕ್ರ. 4) ಈ ಮುಂದೆ ನೀಡಲಾಗಿದೆ.
ಮಶಿನ್‌ನ ವಿವರಗಳು
ಸಾಮಗ್ರಿಯ ಆಯ್ಕೆ : ಬೇರಿಂಗ್ (6206 Z)
D: 30 ಮಿ.ಮೀ.
ಬೇಸಿಕ್ ಡೈನ್ಯಾಾಮಿಕ್ ಲೋಡ್ (C) :
20.3 KN
ಫಟಿಗ್ ಮೋಡ್ ಮಿತಿ (pu): 0.475 KN
ವೇಗದ ಮಿತಿ : 1500 ಸುತ್ತುಗಳು ಪ್ರತಿ ನಿಮಿಷ
ಮೋಟರ್ : S.C. ಇಂಡಕ್ಷನ್ ಮೋಟರ್
ಪಾವರ್ : 0.75 ರಿಂದ 375 kw
ಪೋಲ್ : 4
ವೇಗ : 1000 ದಿಂದ 1200 ಆರ್.ಪಿ.ಎಮ್.
ಮೋಟರ್ ನಿಯಂತ್ರಣೆಯ ಸ್ವಿಚ್ : 300 L-Q
ಮ್ಯಾಕ್ಸಿಮಮ್ ಕಂಟಿನ್ಯುವಸ್ ರೇಟಿಂಗ್ : 63 ಅ್ಯಂಪಿಯರ್
ಫ್ರಿಕ್ವೆನ್ಸಿ ಆಪರೇಶನ್ : 200 ಸ್ವಿಚಿಂಗ್
ಸೈಕಲ್ ಪ್ರತಿ ಗಂಟೆಗೆ
ಪುಲಿ ಚಿಕ್ಕ ವ್ಯಾಾಸ : 60 ಮಿ.ಮೀ.
ಪುಲಿ ದೊಡ್ಡ ವ್ಯಾಾಸ : 100 ಮಿ.ಮೀ.
ಬೆಲ್ಟ್ ಆಕಾರ : 25
ಅಭಿವೃದ್ಧಿ ಮಾಡಿದ ರೀತಿ
ಚಿತ್ರ ಕ್ರ. 5 ರಲ್ಲಿ ತೋರಿಸಿದಂತೆ ಕಾರ್ಯವಸ್ತುವಿಗೆ ಪಾಲಿಶಿಂಗ್ ಮಾಡಬೇಕಾಗಿದೆ. ಅದಕ್ಕೋಸ್ಕರ ಮೊತ್ತಮೊದಲಾಗಿ ಕಾರ್ಯವಸ್ತುವಿನ ಆಕಾರಕ್ಕೆ ಅನುಸಾರವಾಗಿ ಪಾಲಿಸ್ ಪೇಪರ್‌ನ ಆಯ್ಕೆಯನ್ನು ಮಾಡುವುದೂ ಆವಶ್ಯಕವಾಗಿದೆ. ಅದಕ್ಕೆ ಅನುಸಾರವಾಗಿ ನಾವು 280 X 230 ಮಿ.ಮೀ. ಈ ಆಕಾರದ ಪಾಲಿಶ್ ಪೇಪರ್ (ಚಿತ್ರ ಕ್ರ. 6) ಪಡೆಯಲಾಯಿತು. ಚಿತ್ರ ಕ್ರ. 7 ಮತ್ತು ಚಿತ್ರ ಕ್ರ. 8 ರಲ್ಲಿ ತೋರಿಸಿದಂತೆ, ಪಾಲಿಶ್ ಪೇಪರ್ ನಾವು ಅಭಿವೃದ್ಧಿ ಪಡಿಸಿದ ಲ್ಯಾಪಿಂಗ್ ಮಶಿನ್‌ನಲ್ಲಿ ಇಟ್ಟು ಅದನ್ನು ಕ್ಲ್ಯಾಂಪ್ ಮಾಡಿದೆವು. ಕ್ಲ್ಯಾಂಪಿಂಗ್ ಮಾಡಿದ್ದರಿಂದ ಪಾಲಿಶ್ ಪೇಪರ್ ಒಂದೇ ಜಾಗದಲ್ಲಿ ದೃಢವಾಗಿ ಅಳವಡಿಸಲಾಯಿತು. ಇದರಿಂದಾಗಿ ಕೆಲಸಗಾರರ ಕೈಗೆ ಅಪಘಾತಗಳಾಗುವ ಸಮಸ್ಯೆಯೂ ಕಡಿಮೆ ಆಯಿತು. ಪಾಲಿಶಿಂಗ್ ಮಾಡಬೇಕಾದ ಕಾರ್ಯವಸ್ತುವನ್ನು ಕೈಯಿಂದ ಹಿಡಿದು ಅದರ ಸರ್ಫೇಸ್ ಈ ಕ್ಲ್ಯಾಂಪ್‌ನಿಂದ ತಯಾರಿಸಿರುವ ಪೇಪರ್‌ಗೆ ಉಜ್ಜಲವಾಗುತ್ತದೆ. (ಚಿತ್ರ ಕ್ರ. 9) ಇದರಿಂದಾಗಿ ಪಾಲಿಶಿಂಗ್ ಒಂದೇ ರೀತಿಯಲ್ಲಿ ಮಾಡಲು ಸಹಾಯವಾಯಿತು. ಚಿತ್ರ ಕ್ರ. 10 ರಲ್ಲಿ ತಮಗೆ ಪಾಲಿಶಿಂಗ್ ಮಾಡಿರುವ ಕಾರ್ಯವಸ್ತುವನ್ನು ತೋರಿಸಲಾಗಿದೆ. ಅಪೇಕ್ಷಿಸಿರುವ ಪಾಲಿಶಿಂಗ್‌ನ ಗುಣಮಟ್ಟವು ಲಭಿಸಿದ ನಂತರ ಮಶಿನ್‌ನಿಂದ ಪಾಲಿಸ್ ಪೇಪರ್ ಅನ್‌ಕ್ಲ್ಯಾಂಪ್ ಮಾಡಿ ತೆಗೆಯಲಾಗುತ್ತದೆ. (ಚಿತ್ರ ಕ್ರ. 11 ಮತ್ತು 12). ಪಾಲಿಶಿಂಗ್‌ನ ಪ್ರಕ್ರಿಯೆಯಾದ ನಂತರ ಪೇಪರ್‌ನ ಸ್ಥಿತಿಯನ್ನು ಚಿತ್ರ ಕ್ರ. 13 ರಲ್ಲಿ ತೋರಿಸಲಾಗಿದೆ.
ಲಾಭಗಳು
1. ಲ್ಯಾಪಿಂಗ್‌ಗೋಸ್ಕರ ತಗಲುವ ವೇಳೆಯು ಕಡಿಮೆಯಾಯಿತು.
2. ಪಾಲಿಶ್ ಪೇಪರ್‌ನ ಸಂಖ್ಯೆಯೂ ಕಡಿಮೆಯಾಯಿತು.
3. ಕೆಲಸಗಾರರ ಕೈಗೆ ಅಪಘಾತಗಳಾಗುವ ಸಾಧ್ಯತೆಯೂ ಕಡಿಮೆಯಾಯಿತು.
4. ವೇಳೆ ಮತ್ತು ಖರ್ಚು ಇವೆರಡರಲ್ಲಿಯೂ ಉಳಿತಾಯವಾಯಿತು.