ತುಂಬಾ ಸಲ ಟರ್ನಿಂಗ್ ಸೆಂಟರ್ ಮಶಿನ್ ಉಪಯೋಗಿಸುವವರಿಂದ ನಾವು ಹೀಗೂ ಕೇಳುತ್ತೇವೆ, ಡ್ರಾಯಿಂಗ್ ಮತ್ತು ಪ್ರೋಗ್ರಾಮಿಂಗ್ ನಿರ್ದೇಶನ ಸರಿಯಾಗಿ ಇದ್ದರೂ ಕೂಡಾ R0.1 ರಿಂದ R0.5 ಮಿ.ಮೀ.ನಂತಹ ಸಣ್ಣ ಆಕಾರದ ಫಿಲೇಟ್‌ಗಳು ಮತ್ತು 0.1 ರಿಂದ 0.5 ಮಿ.ಮೀ. ಅಳತೆಯ ಚಿಕ್ಕ ಚ್ಯಾOಪರ್ ಮಶಿನ್‌ನ ಸಹಾಯದಿಂದ ತಯಾರು ಮಾಡಲಾಗುವುದಿಲ್ಲ.
ಟರ್ನಿಂಗ್‌ನ ದಂಡಗೋಲಾಕಾರದ ಕಾರ್ಯವಸ್ತುಗಳನ್ನು ತಯಾರು ಮಾಡುವುದು ಸಾಧ್ಯವಿದೆ, ಎಂಬುದು ತಮಗೆ ತಿಳಿದಿದೆ. ಇದರಲ್ಲಿ ಕಾರ್ಯವಸ್ತು ಸ್ಪಿಂಡಲ್‌ನ ಸಹಾಯದಿಂದ ತಿರುಗಿಸಿ ಒಂದು ಬಿಂದು (ಸಿಂಗಲ್ ಪಾಯಿಂಟ್) ಟೂಲ್‌ಗೆ ವಿಶಿಷ್ಟವಾದ ಫೀಡ್‌ರೇಟ್ ಕೊಟ್ಟು ಯಂತ್ರಣೆಯನ್ನು ಮಾಡಬಹುದಾಗಿದೆ. ಫೀಡ್‌ರೇಟ್‌ನ ಪ್ರೊಗ್ರಾಮ್ ಸ್ಪಿಂಡಲ್‌ನ ಒಂದು ಸುತ್ತುವಿಕೆಯಲ್ಲಿ ನಿರ್ಧರಿಸಿರುವ ಮಿ.ಮೀ./ ಸುತ್ತುವಿಕೆ ಈ ಫೀಡ್‌ರೇಟ್‌ನಲ್ಲಿ ಒಂದು ಫೀಡ್ ಹೇಲಿಕ್‌ಸ್ ಅಂತರವನ್ನು ನಿರ್ಮಾಣ ಮಾಡುತ್ತದೆ. ಈ ರೇಖೆಯ ಚಟುವಟಿಕೆಗಳಲ್ಲಿ ಅಂತರವು ಇರುತ್ತದೆ. (G01 ಲೈನ್ ಪ್ರೋಗ್ರಾಮ್ ಉಪಯೋಗಿಸಿರುವುದರಿಂದ) ಅದು ಗೋಲಾಕಾರವಾದ ಚಟುವಟಿಕೆಗಳಲ್ಲಿ ಕಾರ್ಡ್‌ನ ಉದ್ದದಲ್ಲಿ ಅಳೆಯಲಾಗುತ್ತದೆ. (G02-G03 ಈ ಗೋಲಾಕಾರದ ಪ್ರೋಗ್ರಾಮ್ ಉಪಯೋಗಿಸಿ).
ಸ್ಪಿಂಡಲ್‌ನ ಪ್ರತಿಯೊಂದು ಸುತ್ತುವಿಕೆಯಲ್ಲಿ ಟೂಲ್ ಪ್ರೋಗ್ರಾಮ್ ಮಾಡಿರುವ ಫೀಡ್‌ರೇಟ್‌ನಷ್ಟು (ಮಿ.ಮೀ./ಸುತ್ತುಗಳು) ಮುಂದೆ ಸಾಗುತ್ತದೆ. ಫೀಡ್ ಹೆಲಿಕ್‌ಸ್‌ನಿಂದಾಗಿ ತಯಾರಾಗುವ ಕಡಿಮೆ ಉದ್ದದ ರೇಖೆಗಳು ಫೀಡ್‌ರೇಟ್‌ನಷ್ಟು ಅಥವಾ ಅದಕ್ಕಿಂತ ಕಡಿಮೆ ಉದ್ದದ್ದಾಗಿರುವುದರಿಂದ ಆ ಡ್ರಾಯಿಂಗ್‌ನಲ್ಲಿ ತೋರಿಸಿದಂತೆ ತಯಾರಾಗುವುದಿಲ್ಲ. ಅದರಂತೆಯೇ ಕಡಿಮೆ ತ್ರಿಜ್ಯವಿರುವ ಫಿಲೇಟ್ ಮತ್ತು ಕಡಿಮೆ ಇನ್‌ಕ್ಲ್ಯೂಡೆಡ್ ಕೋನವೂ ತಯಾರಾಗುವುದಿಲ್ಲ. (ಚಿತ್ರ ಕ್ರ. 1 ಮತ್ತು ಕೋಷ್ಟಕ ಕ್ರ. 1 ನೋಡಿರಿ). ಇದಕ್ಕೋಸ್ಕರ ಕಡಿಮೆ ಫಿಲೇಟ್‌ನ ತ್ರಿಜ್ಯ ಮತ್ತು ಚಿಕ್ಕ ಚ್ಯಾಪರ್ ಇರುವ ಕಾರ್ಯವಸ್ತು ನಿರ್ಮಿಸುವುದಾದಲ್ಲಿ ನಮಗೆ ಫಿಲೇಟ್ ಅಥವಾ ಚ್ಯಾಪರ್‌ನ ಪ್ರಾರಂಭದ ಫೀಡ್‌ರೇಟ್ ಕಡಿಮೆ ಮಾಡಬೇಕಾಗುತ್ತದೆ.
O1234 ((ಗೈಡ್)
)
N1 T0000 G21 G0
G28 U0 W0
T0101 (SVJBL 1616H11 R0.4)
G92 S3000
G96 S350 M03
M07
(ಫಿನಿಶ್ ಟರ್ನ್)
G0 X50. Z2.0
X5.0
G1 G42 X3.029 Z0.8 F0.25
G2 X4.629 Z0 F0.1
G3 X5.166 Z-0.166 R0.3 F0.03
G1 X6.937 Z-1.937 F0.08
G3 X7. Z-2.071 R0.3 F0.03
G1 Z-3.146 F0.08
G2 X9. Z-4.146 R1.
G1 X10.232
G3 X10.585 Z-4.252 R0.2 F0.02
G1 X11.133 Z-4.765 F0.08
G3 X11.103 Z-4.93 R0.15 F0.015
G1 X10.732 Z-5.162 F0.08
G2 X10.644 Z-5.592 R0.4
G1 X11.363 Z-6.3
G2 X12.076 Z-6.519 R0.4
G1 X12.972
G1 X13.272 Z-6.669 F0.015
G1 Z-10.0 F0.08
G1 X17.272 F0.3
G0 G40 X50.0 Z2.0
G97 S100
T0000 M09
M05
G28 U0 W0
M30
%