ಹಾರ್ಡ್ ಪಾರ್ಟ್ ಟರ್ನಿಂಗ್ ಇದು 50 HRC ರಿಂದ 70 HRC ಯಲ್ಲಿ ಹಾರ್ಡನಿಂಗ್ ಮಾಡಿರುವ ಕಾರ್ಯವಸ್ತುಗಳ ಒಂದೇ ತೀಕ್ಷ್ಣವಾದ ತುದಿಯಿಂದ ಯಂತ್ರಣೆಯನ್ನು ಮಾಡುವ ಪ್ರಕ್ರಿಯೆಯಾಗಿದೆ. ಕಾರ್ಬನ್ ಸ್ಟೀಲ್, ಎಲಾಯ್ ಸ್ಟೀಲ್, ಟೂಲ್ ಸ್ಟೀಲ್, ಬೇರಿಂಗ್ ಸ್ಟೀಲ್ ಇಂತಹ ಸ್ಟೀಲ್‌ನ ಅನೇಕ ವಿಧಗಳಿವೆ. ಯಾವುದಕ್ಕೆ ಕೇಸ್ ಹಾರ್ಡನಿಂಗ್, ಇಂಡಕ್ಷನ್ ಹಾರ್ಡನಿಂಗ್ ಮತ್ತು ಇನ್ನಿತರ ಹಾರ್ಡನಿಂಗ್ ಪ್ರಕ್ರಿಯೆಗಳ ಮೂಲಕ ಹಾರ್ಡನಿಂಗ್ ಮಾಡಬಹುದಾಗಿದೆ.
ಸಾಮಾನ್ಯವಾಗಿ ಟರ್ನಿಂಗ್ ಸೆಂಟರ್‌ನಲ್ಲಿ ಮಾಡಿರುವ ಹಾರ್ಡ್ ಪಾರ್ಟ್ ಟರ್ನಿಂಗ್ ಇದು ಗ್ರೈಂಡಿಂಗ್‌ನ ಸಮರ್ಥವಾದ ಮತ್ತು ಲಾಭಕಾರಿಯಾದ ಪರ್ಯಾಯವೆಂದು ಗಮನಿಸಲಾಗುತ್ತದೆ. ಯಾವ ಯಂತ್ರಭಾಗಗಳಿಗೆ ಮಾಪನಗಳ ಉಚ್ಚಮಟ್ಟದ ನಿಖರತೆ ಮತ್ತು ಉನ್ನತವಾದ ಸರ್ಫೇಸ್ ಫಿನಿಶ್‌ನ ಆವಶ್ಯಕತೆ ಇದೆಯೋ, ಅದರ ಯಂತ್ರಣೆಯಲ್ಲಿ ಸಾಮಾನ್ಯವಾಗಿ ಸೆಮಿ ಫಿನಿಶಿಂಗ್ (ಗ್ರೈಂಡಿಂಗ್‌ನ ಮುಂಚೆ) ಅಥವಾ ಫಿನಿಶಿಂಗ್ ಆಪರೇಶನ್ ಮಾಡಬೇಕಾಗುತ್ತದೆ. ಹಾರ್ಡ್ ಪಾರ್ಟ್ ಟರ್ನಿಂಗ್‌ಗೋಸ್ಕರ ವಿಶೇಷವಾಗಿ ಡಿಸೈನ್ ಮತ್ತು ತಯಾರಿಸಿರುವ ಟರ್ನಿಂಗ್ ಸೆಂಟರ್ ಬಳಸುವುದರಿಂದ ಅನೇಕ ಲಾಭಗಳಾಗುತ್ತವೆ. ಉದಾಹರಣೆ,
ನಿರಂತರವಾದ ಸರ್ಫೇಸ್ ರಫ್‌ನೆಸ್‌ನ ಮೌಲ್ಯ (Ra 0.4 ಮತ್ತು ಹೆಚ್ಚು) ಮತ್ತು ಜ್ಯಾಮಿತೀಯ ಪ್ಯಾರಾಮೀಟರ್‌ಗಳು ಮತ್ತು ಟಾಲರನ್‌ಸ್ (GDT) ಇರುವ ಉಚ್ಚ ಗುಣಮಟ್ಟದ ಯಂತ್ರಭಾಗಗಳು.
ಪಿಸಿಬಿಎನ್‌ನಂತಹ ಪ್ರಗತಿ ಹೊಂದಿರುವ ಟೂಲಿಂಗ್ ಮಟೀರಿಯಲ್‌ನ ಬಳಕೆಯನ್ನು ಮಾಡುವುದು ಸಾಧ್ಯವಿರುವುದರಿಂದ ಪ್ರತಿಯೊಂದು ಯಂತ್ರಭಾಗದ ಉತ್ಪಾದನೆಯ ವೇಳೆಯಲ್ಲಿ ಇಳಿತವಾಗುತ್ತದೆ ಮತ್ತು ತುಂಡುಗಳ ಆಳದ ಕುರಿತು ಟರ್ನಿಂಗ್‌ನಲ್ಲಿ ಹೆಚ್ಚು ಫ್ಲೆಕ್ಸಿಬಿಲಿಟಿ ಲಭಿಸುತ್ತದೆ.
ಹಾರ್ಡ್ ಪಾರ್ಟ್ ಟರ್ನಿಂಗ್ ಡ್ರೈ ಇರುವಾಗ ಮಾಡಲಾಗುತ್ತದೆ, ಕೂಲಂಟ್‌ಗಳ ಅಗತ್ಯವಿರುವುದಿಲ್ಲ.
>ನಿರಂತರವಾದ ಪ್ರೊಫೈಲ್ ತಯಾರಿಸಲು ಪ್ರಕ್ರಿಯೆಯಲ್ಲಿ ಉಚ್ಚಮಟ್ಟದ ಫ್ಲೆಕ್ಸಿಬಿಲಿಟಿ.
>ಗ್ರೈಂಡಿಂಗ್ ಮಶಿನ್ ಹೆಚ್ಚು ದುಬಾರಿಯಾಗಿರುತ್ತವೆ. ಒಂದೇ ಟರ್ನಿಂಗ್ ಸೆಂಟರ್‌ನಲ್ಲಿ ಒಳ ಮತ್ತು ಹೊರ ಯಂತ್ರಣೆಯನ್ನು ಒಟ್ಟಿಗೆ ಮಾಡುವ ಸಾಧ್ಯತೆ ಇರುವುದರಿಂದ ಬಂಡವಾಳ ಹೂಡುವಿಕೆಯ ಖರ್ಚು ಕಡಿಮೆಯಾಗುತ್ತದೆ.
>ವಿದ್ಯುತ್ತಿನ (ಎನರ್ಜಿ) ಕಡಿಮೆ ಆವಶ್ಯಕತೆ.
>ತಯಾರಾಗುವಂತಹ ಚಿಪ್‌ಗಳ ಮರು ಉಪಯೋಗದ ಸಾಧ್ಯತೆಯೊಂದಿಗೆ ತಯಾರಿಸಿರುವ ಚಿಪ್ ಅಥವಾ ಸ್ವಾರ್ಫ್ ನಿರ್ವಹಿಸಲು ಸುಲಭವಾಗಿರುತ್ತದೆ.
>ನಿರಂತರವಾದ ಸರ್ಫೇಸ್ ಫಿನಿಶ್ ಮತ್ತು ಜ್ಯಾಮಿತೀಯ ಪ್ಯಾರಾಮೀಟರ್‌ಗಳು ಮತ್ತು ಟಾಲರನ್‌ಸ್ ಪಡೆಯಲು ಸಾಮಾನ್ಯವಾದ ಟರ್ನಿಂಗ್ ಸೆಂಟರ್‌ನ ರಚನೆಗೆ ಮಿತಿಯಿರುತ್ತದೆ. ಕಾರಣ ಅವುಗಳ ಡಿಸೈನ್‌ನಲ್ಲಿ ಮುಂದಿನ ಅಂಶಗಳ ನಿವಾರಣೆಯನ್ನು ಮಾಡುವಂತಹ ವ್ಯವಸ್ಥೆಯು ಇರುವುದಿಲ್ಲ.
>ಸ್ಪಿಂಡಲ್‌ನಲ್ಲಿ ಹೆಚ್ಚಾಗಿರುವ ಕಂಪನಗಳ ಮಟ್ಟವು (ಉಚ್ಚ ಕಟಿಂಗ್ ಸ್ಟ್ರೆಂಥ್ ಮತ್ತು ಒತ್ತಡವು ಉಂಟಾಗುತ್ತದೆ).
>ಮಶಿನ್‌ನ ಅಕ್ಷದ ರಿಪಿಟ್ಯಾಬಿಲಿಟಿಯ ಸಾಮರ್ಥ್ಯ.
>ಪ್ರಕ್ರಿಯೆಯಲ್ಲಿ ಗೇಜ್‌ನ ಸೇರ್ಪಡೆಯಿಂದಾಗಿ ಕಮರ್ಶಿಯಲ್ ಹಾಗೆಯೇ ಪರಿಸರದೊಂದಿಗೆ ಸಂಬಂಧಪಟ್ಟ ಲಾಭಗಳು ಟರ್ನಿಂಗ್‌ನಲ್ಲಿ ಇರುವುದರಿಂದ ಟಾಲರನ್‌ಸ್ IT7/IT6 ಮತ್ತು ಸರ್ಫೇಸ್ ರಫ್‌ನೆಸ್‌ನ ಮೌಲ್ಯವು Ra 0.4 ಅಥವಾ ಹೆಚ್ಚು ಬೇಕಾಗಿದ್ದಲ್ಲಿ ಗ್ರೈಂಡಿಂಗ್‌ಗಿಂತಲೂ ಹಾರ್ಡ್ ಪಾರ್ಟ್ ಟರ್ನಿಂಗ್‌ಗೆ ಹೆಚ್ಚು ಮೆಚ್ಚುಗೆ ಇರುತ್ತದೆ.
ಹಾರ್ಡ್ ಪಾರ್ಟ್ ಟರ್ನಿಂಗ್‌ನ (ಮೇಲೆ ತಿಳಿಸಿರುವ) ವಿಶಿಷ್ಟವಾದ ಬೇಡಿಕೆಗಳನ್ನು ಪೂರ್ತಿಗೊಳಿಸಲು ಏಸ ಡಿಸೈನರ್ಸ್ ಲಿ. ಇವರು ಒಂದು ಆಮದು ಮಾಡುವ ಬದಲಿಗೆ ಪರ್ಯಾಯವಾದ ಉತ್ಪಾದನೆಯ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ ಮತ್ತು ಅನೇಕ ತಂತ್ರಜ್ಞಾನಗಳನ್ನು ಒಟ್ಟುಗೂಡಿಸಿ HPT-180 HS ಎಂಬ ಮಶಿನ್ ಅಭಿವೃದ್ಧಿಪಡಿಸಿದ್ದಾರೆ. ಈ ತನಕ ಯಾವುದೇ ಭಾರತೀಯ ಮಶಿನ್ ಟೂಲ್ ಉತ್ಪಾದಕರು ಕಾಸ್ಟ್ ಬೆಡ್ ಮತ್ತು ಹೈಡ್ರೋಸ್ಟ್ಯಾಟಿಕ್ ಗೈಡ್‌ವೇ ಇರುವ ಟರ್ನಿಂಗ್ ಮಶಿನ್ ತಯಾರಿಸಿಲ್ಲ. ಟರ್ನಿಂಗ್ ಸೆಂಟರ್‌ನಲ್ಲಿ ಮಿನರಲ್ ಕಾಸ್ಟ್ ಬೆಡ್‌ನೊಂದಿಗೆ ಹೈಡ್ರೋಸ್ಟ್ಯಾಟಿಕ್ ಗೈಡವೆಯಿಂದಾಗಿ ಸರ್ಫೇಸ್ ಫಿನಿಶ್, ಗೋಲಾಕಾರ ಮತ್ತು GDT ಪ್ಯಾರಾಮೀಟರ್‌ಗಳಲ್ಲಿ ಉಚ್ಚ ಗುಣಮಟ್ಟವನ್ನು ಪಡೆಯವಲ್ಲಿ ತುಂಬಾ ಸಹಾಯವಾಗುತ್ತದೆ. ಗ್ರೈಂಡಿಂಗ್ ಮಶಿನ್‌ಗೆ ಇದೊಂದು ತುಂಬಾ ಲಾಭದಾಯಕವಾದ ಪರ್ಯಾಯವಾಗಿದೆ. ಇದರಲ್ಲಿ ಬಳಸಲಾಗುವಂತಹ ವಿವಿಧ ತಂತ್ರಜ್ಞಾನ ಮತ್ತು ಅದರ ಲಾಭಗಳ ವಿವರಗಳನ್ನು ಈ ಮುಂದೆ ನೀಡಲಾಗಿದೆ.
ಎ. ಸಂಪೂರ್ಣವಾದ ಮಿನರಲ್ ಕಾಸ್ಟ್ ಬೆಡ್
>ಮಶಿನ್‌ನ ಸ್ಟ್ರಕ್ಚರ್ ಅದರ ಚಟುವಟಿಕೆಗಳಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಉತ್ತಮವಾದ ತಯಾರಿಕೆ, ಮಶಿನ್‌ನ ಕೆಲಸಗಳಲ್ಲಿ ಹೊಂದಾಣಿಕೆಯನ್ನು ಮಾಡದೇ ವಿವಿಧ ಬಲಗಳಿಗೆ ಪ್ರತಿಕಾರವನ್ನು ಮಾಡುತ್ತದೆ. ಉಷ್ಣತೆಯ ಸ್ವೀಕಾರ ಮತ್ತು ಸ್ಥಳಾಂತರವನ್ನೂ ಮಾಡುತ್ತದೆ. ಕಂಪನಗಳನ್ನು ಕಡಿಮೆ ಮಾಡುತ್ತದೆ ಮತ್ತು ಗೈಡ್‌ವೆನಂತಹ ಯಂತ್ರಘಟಕಗಳನ್ನು ಸೇರ್ಪಡಿಸುತ್ತದೆ. ಇದರಲ್ಲಿ ಎಸ್ಥೆಟಿಕ್ಸ್ ಮತ್ತು ಎರ್ಗಾನಾಮಿಕ್ಸ್ ಈ ಘಟಕಗಳ ಸಹಯೋಗವೂ ಆವಶ್ಯಕವಾಗಿದೆ. ಪ್ರಿಸಿಜನ್ ಬೇಕಾಗಿರುವ ಯಂತ್ರಭಾಗಗಳನ್ನು ತಯಾರಿಸಲು ಬಳಸಲಾಗುವಂತಹ ಕಚ್ಚಾ ವಸ್ತುಗಳ ಕಠಿಣತೆ ಮತ್ತು ಕಡಿಮೆ ಘನತೆ ಇರುವ ಕಡಿಮೆ ದಪ್ಪದ ರಚನೆಗೋಸ್ಕರವೂ ಸೂಕ್ತವಾಗಿರಬೇಕು.
>ಮಶಿನ್‌ನ ಬೆಡ್‌ಗೋಸ್ಕರ ಸಾಮಾನ್ಯವಾಗಿ ಬಳಸಲಾಗುವ ಮಟೀರಿಯಲ್‌ಗಳಿವೆ. ಕಾಸ್ಟ್ ಆಯರ್ನ್ ಮತ್ತು ಸ್ಟೀಲ್.
>ಪಾಲಿಮರ್ ಕಾಂಕ್ರೀಟ್ ಇದೊಂದು ಪರ್ಯಾಯವಾದ ಮಟೀರಿಯಲ್ ಆಗಿರುತ್ತದೆ ಮತ್ತು ಅದರಿಂದ ತಯಾರಿಸಿರುವ ಬೆಡ್‌ಗೆ ಮಿನರಲ್ ಕಾಸ್ಟಿಂಗ್ ಎಂದು ಹೇಳುತ್ತಾರೆ. ಇದರಲ್ಲಿ 90% ಗಿಂತ ಹೆಚ್ಚು ನೈಸರ್ಗಿಕವಾಗಿ ಉಪಲಬ್ಧವಿರುವ ಖನಿಜಗಳು ಮತ್ತು ನಿರ್ಧಾರಿತ ಗಾತ್ರದ ಗ್ರೀಟ್, ಕಲ್ಲು ಮತ್ತು ಇಪಾಕ್ಸಿ ರೆಝನ್‌ನಿಂದ ಕೂಡಿರುವ ಬೈಂಡಿಂಗ್ ಮಟೀರಿಯಲ್ ಇರುತ್ತದೆ. ಫಿಲರ್ ಮಟೀರಿಯಲ್ ಒಟ್ಟಾಗಿ ಇಡಲು ನಡುವೆ ಇರುವ ಸ್ತರದ (ಇಂಟರ್‌ಲೇಯರ್) ಕೆಲಸವನ್ನು ರೇಝನ್ ಮಾಡುತ್ತದೆ. ನಿರೀಕ್ಷಿಸಿರುವ ಗುಣಧರ್ಮವನ್ನು ಪಡೆಯಲು ವಿವಿಧ ಎಡಿಟಿವ್‌ಹ್‌ಗಳನ್ನು ಸೇರಿಸಲಾಗುತ್ತದೆ.
ಮಿನರಲ್ ಕಾಸ್ಟ್ ಬಳಸುವುದರಿಂದ ಲಭಿಸುವ ಕೆಲವು ಲಾಭಗಳು
>ಕಂಪನಗಳನ್ನು ಮಂದವಾಗಿ ಮಾಡಲು (ಡಂಪ್) ಮತ್ತು ಶಬ್ದವನ್ನು ಕಡಿಮೆ ಮಾಡಲು ಅತ್ಯುತ್ತಮವಾಗಿದೆ. ನೈಸರ್ಗಿಕವಾದ ಕಂಪನಗಳ ಕ್ರಿಟಿಕಲ್ ಫ್ರಿಕ್ವೆನ್ಸಿ ಗುರುತಿಸುವಂತೆ ಕಡಿಮೆ ಮಾಡುತ್ತದೆ.
>ಕಾಸ್ಟ್ ಆಯರ್ನ್‌ನ ಹೋಲಿಕೆಯಲ್ಲಿ ಕಡಿಮೆ ಉಷ್ಣತೆಯ ಪ್ರವಾಹ : ಕಾಸ್ಟ್
>ಆಯರ್ನ್‌ಗೋಸ್ಕರ 60W/(mk) ಇರುತ್ತದೆ, ಆದರೆ ಅದಕ್ಕೋಸ್ಕರ 1W/(m) ಇರುತ್ತದೆ.
>ಮಿನರಲ್ ಕಾಸ್ಟ್‌ನ ಉಷ್ಣತೆಯ ಸಾಮರ್ಥ್ಯ ಕಾಸ್ಟ್ ಆಯರ್ನ್‌ನ ಎರಡು ಪಟ್ಟಿಗಿಂತಲೂ ಹೆಚ್ಚಾಗಿರುತ್ತದೆ.
>ಔಷ್ಣಿಕ ಪ್ರಸಾರವು ಕಾಸ್ಟ್ ಆಯರ್ನ್‌ನೊಂದಿಗೆ ಹೋಲಿಸಲು ಯೋಗ್ಯವಾಗಿದೆ. ಬೈಮೆಟ್ಯಾಲಿಕ್‌ನ ಪ್ರಭಾವವು ಉಂಟಾಗುವುದಿಲ್ಲ.
>ಕಾರ್ಬನ್ ಫೂಟ್‌ಪ್ರಿಂಟ್ ಕಡಿಮೆ: ಕಾಸ್ಟ್ ಆಯರ್ನ್ ಬೆಡ್‌ನ ಹೋಲಿಕೆಯಲ್ಲಿ ಮಿನರಲ್ ಕಾಸ್ಟ್ ಬೆಡ್‌ನ ಉತ್ಪಾದನೆಗೋಸ್ಕರ ಕಡಿಮೆ ಶಕ್ತಿಯ ಅಗತ್ಯವಿರುತ್ತದೆ.
>ಮಿನರಲ್ ಕಾಸ್ಟ್ ಇಕೋ ಫ್ರೆಂಡ್ಲೀಯಾಗಿದೆ. ರಸ್ತೆಗಳಲ್ಲಿ, ಕೈಗಾರಿಕಾ ಕಟ್ಟಡಗಳ ನಿರ್ಮಾಣದಲ್ಲಿ, ನೆಲದಲ್ಲಿರುವ ಹೊಂಡಗಳನ್ನು ಮುಚ್ಚಲು, ಸರ್ಫೇಸ್ ಸೀಲಿಂಗ್ ಮತ್ತು ಹಸಿರಾದ ಹುಲ್ಲುಗಳ ನಿರ್ಮಾಣದಲ್ಲಿ ಅದರ ವ್ಯವಸ್ಥೆಯನ್ನು ಸಹಜವಾಗಿ ಮಾಡುವುದೂ ಸಾಧ್ಯವಾಗಿದೆ.
ಬಿ. ಹೈಡ್ರೋಸ್ಟ್ಯಾಟಿಕ್ ಗೈಡ್‌ವೆ
ಸಾಮಾನ್ಯವಾಗಿ ಮಶಿನ್‌ಗ ಭಾಗಗಳಲ್ಲಿರುವ ರೇಖೀಯ ವೇಗಕ್ಕೆ ಸಹಕರಿಸಲು ಮೂರು ವಿಧದ ಗೈಡ್‌ವೆಗಳಿರುತ್ತವೆ.
1. ಹಾರ್ಡನಿಂಗ್ ಮತ್ತು ಗ್ರೈಂಡಿಂಗ್ ಮಾಡಿರುವ, ಬಾಕ್ಸ್‌ನ ವಿಧಗಳು
>ಈ ವಿಧದ ಗ್ರೈಡ್‌ವೆಯಲ್ಲಿ, ಸ್ಲೈಡಿಂಗ್ ಘಟಕಗಳಲ್ಲಿರುವ ಸಂಪರ್ಕವು ಸಾಮಾನ್ಯವಾಗಿ ಸರ್ಫೇಸ್‌ನೊಂದಿಗೆ ಸಂಪರ್ಕವನ್ನು ಇಡುತ್ತದೆ, ಇದರಲ್ಲಿ ತುಂಬಾ ಘರ್ಷಣೆಯ ಆಗುತ್ತಿರುತ್ತದೆ.
>ಘರ್ಷಣೆಯನ್ನು ಕಡಿಮೆ ಮಾಡಲು ಇದರಲ್ಲಿ ಆಯಿಲ್ ಅಥವಾ ಗ್ರೀಸ್ ಕೂಲಂಟ್ ಎಂದು ಬಳಸಲಾಗುತ್ತದೆ.
>ದೃಢವಾಗಿರುತ್ತವೆ (ರಿಜೀಡ್) ಮತ್ತು ಅದರಲ್ಲಿ ಕಂಪನಗಳನ್ನು ಕಡಿಮೆ ಮಾಡುವ ಒಳ್ಳೆಯ ಸಾಮರ್ಥ್ಯವು ಇರುತ್ತದೆ.
>ರ್ಯಾಪಿಡ್ ರೇಟ್ ಸಾಮರ್ಥ್ಯವು ಮಿತಿಯಲ್ಲಿರುತ್ತದೆ.
>ಸ್ಟಿಕ್/ಸ್ಪಿಪ್ ಆಗುವುದು (ಅಂಟಿಕೊಂಡಿರುವುದು/ ಜಾರುವುದು) ತುಂಬಾ ಹೆಚ್ಚು ಪ್ರಮಾಣದಲ್ಲಿರುತ್ತದೆ.
2. ಬಾಲ್ ಅಥವಾ ರೋಲರ್‌ನಂತಹ ರೋಲಿಂಗ್ ಘಟಕಗಳೊಂದಿಗೆ ರೇಖೀಯ ಚಟುವಟಿಕೆಗಳು
>ಈ ವಿಧದ ಗೈಡ್‌ವೇಯಲ್ಲಿ ಯೋಗ್ಯ ರೀತಿಯಲ್ಲಿ ಮುಂದೆ ಸರಿಯುವ ಎರಡು ವಸ್ತುಗಳಲ್ಲಿ ರೋಲಿಂಗ್ ಸಂಪರ್ಕವನ್ನು ಬಳಸಲಾಗುತ್ತದೆ. (ಬಾಲ್, ರೋಲರ್ ಇತ್ಯಾದಿ) ಇದರಿಂದಾಗಿ ಘರ್ಷಣೆಯು ಕಡಿಮೆಯಾಗುತ್ತದೆ.
>ತುಂಬಾ ನಿಖರವಾದ ಸ್ಥಾನವನ್ನು ನಿರ್ಧರಿಸಲು (ಪೊಜಿಶನಿಂಗ್) ಅಗತ್ಯವಿರುವ ಕೆಲಸಕ್ಕೋಸ್ಕರ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸಬ್‌ಮೈಕ್ರಾನ್ ಮಟ್ಟದ ಸ್ಥಾನವನ್ನು ನಿರ್ಧರಿಸುವುದು (ಪೊಜಿಶನಿಂಗ್) ಸಹಜವಾಗಿ ಸಾಧ್ಯವಾಗಿದೆ.
>ಉನ್ನತ ವೇಗದಲ್ಲಿ ನಿಖರತೆಯೊಂದಿಗೆ ದೀರ್ಘವಾದ ಬಾಳಿಕೆ.
>ಕಡಿಮೆ ಬಲ ಉಪಯೋಗಿಸಿ ಉನ್ನತ ವೇಗವಿರುವ ಚಟುವಟಿಕೆಯೂ ಸಾಧ್ಯವಾಗಿದೆ.
>ಸುಲಭವಾದ ನಿರ್ಮಾಣ, ಸುಲಭವಾದ ಲುಬ್ರಿಕೇಶನ್ ಮತ್ತು ಬದಲಾಯಿಸಲು ಸುಲಭ, ಇವೆಲ್ಲವುಗಳೂ ಇನ್ನಿತರ ಲಾಭಗಳು.
>ಎಲ್ಲ ದಿಕ್ಕುಗಳಲ್ಲಿ ಸಮಾನವಾದ ಭಾರದ ಸಾಮರ್ಥ್ಯವನ್ನೂ ತೋರಿಸುತ್ತದೆ.
>ಸಂಪರ್ಕ ಕ್ಷೇತ್ರ ಚಿಕ್ಕದು : ಪ್ರತಿಯೊಂದು ಸಿಲಿಂಡ್ರಿಕಲ್ ರೋಲರ್‌ನ ಪಕ್ಕದಲ್ಲಿ ಒಂದು ರೇಖೆಯಲ್ಲಿಯೇ ಸಂಪರ್ಕವಾಗುವುದರಿಂದ ಅದರ ಹಾರ್ಡ್‌ನೆಸ್ ಮತ್ತು ಡಂಪಿಂಗ್ ಕಡಿಮೆ ಇರುತ್ತದೆ.
3. ಹೈಡ್ರೋಸ್ಟ್ಯಾಟಿಕ್/ಎರೋಸ್ಟ್ಯಾಟಿಕ್
>ತುಂಬಾ ನಿಖರವಾದ ಮತ್ತು ಯೋಗ್ಯವಾದ ಆಪರೇಶನ್‌ಗಳ ಅಗತ್ಯವಿರುತ್ತದೆಯೋ, ಆಗ ಅದರಲ್ಲಿರುವ ಘಟಕಗಳಲ್ಲಿ ಯಾಂತ್ರಿಕ ಸಂಪರ್ಕ ಇಲ್ಲದಿರುವ ಗೈಡ್ ಅತ್ಯಾವಶ್ಯಕವಾಗಿರುತ್ತದೆ. ಸಾಕ್ಷೇಪವಾಗಿ ಸರಿಯುವ ಎರಡು ಘಟಕಗಳಲ್ಲಿ ಹೈಡ್ರೋಸ್ಟ್ಯಾಟಿಕ್ ಅಥವಾ ಎರೋಸ್ಟ್ಯಾಟಿಕ್ ಇವುಗಳ ಪೂರೈಕೆಯನ್ನು ಶಕ್ತಿಶಾಲಿಯಾಗಿ ಮಾಡುವುದನ್ನೂ ಸಾಧಿಸಲಾಗುತ್ತದೆ.
>ಡ್ಯಾಂಪನಿಂಗ್, ಡೈನ್ಯಾಮಿಕ್ ದೃಢತೆ ಮತ್ತು ಉಚ್ಚಮಟ್ಟದ ಭಾರವನ್ನು ಸಾಗಿಸುವ ಕೆಲಸಕ್ಕೆ ಸಾಮರ್ಥ್ಯದ ಅಗತ್ಯವಿದ್ದಲ್ಲಿ, ಆ ಕೆಲಸದ ಹೈಡ್ರೋಸ್ಟ್ಯಾಟಿಕ್ ಗೈಡ್‌ವೆಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಸಂಪೂರ್ಣವಾದ ಮಶಿನ್ ಟೂಲ್‌ಗಳ ಉದ್ಯಮದ ಕ್ಷೇತ್ರದಲ್ಲಿ, ಸಿಸ್ಟಮ್ ಲೋಡಿಂಗ್‌ನ ಬಿಂದುಗಳಲ್ಲಿರುವ ಕಂಪನಗಳ ಡಂಪನಿಂಗ್‌ಗೋಸ್ಕರ ಹೈಡ್ರೋಸ್ಟ್ಯಾಟಿಕ್ ಲಿನಿಯರ್ ಗೈಡ್‌ಗೆ ‘ಉತ್ಕೃಷ್ಟವಾದ ತಾಂತ್ರಿಕ ಉಪಾಯ’ ಎಂದು ತಿಳಿಯಲಾಗುತ್ತದೆ.
>ಹೈಡ್ರೋಸ್ಟ್ಯಾಟಿಕ್ ಗೈಡ್‌ವೇಯ ಮೂಲಭೂತವಾದ ಕೆಲಸವು ಇದಾಗಿದೆ.
>ಒತ್ತಡದಿಂದ ಕೂಡಿರುವ ಆಯಿಲ್‌ನ ಮಟ್ಟದ ಮೂಲಕ ಶಕ್ತಿಯು ಲಭಿಸುವಂತಹ, ತುಂಬಾ ನಿಖರತೆಯಿಂದ ಘರ್ಷಣೆಯನ್ನು ಮಾಡಿ ತಯಾರಿಸಿರುವ ಗೈಡ್‌ವೇಯಲ್ಲಿ ಪ್ರೆಶರ್ ಪಾಕೇಟ್‌ಗಳಿರುವ ಒಂದು ಕ್ಯಾರೇಜ್ ಅಳವಡಿಸಲಾಗಿರುತ್ತದೆ.
>ಕ್ಯಾರೇಜ್‌ನಲ್ಲಿ ಎರಡು ಎಂಡ್ ಪೀಸ್‌ಗಳಿರುವ ಸ್ಟೀಲ್ ಸ್ಯಾಡಲ್ ಪ್ಲೇಟ್ ಇರುತ್ತದೆ.
>ಒಂದು ಎಂಡ್ ಪೀಸ್‌ನ ಬದಿಯು ಪ್ರೆಶರ್‌ನಿಂದ ಕೂಡಿರುತ್ತದೆ. ಇದರಲ್ಲಿ ಒಂದು ಇಂಟಿಗ್ರೆಟೆಡ್ ಪ್ರೆಶರ್ ರೆಗ್ಯುಲೇಟರ್ ಕ್ಯಾರೇಜ್‌ನ ಪ್ರೆಶರ್ ಪ್ಯಾಕೇಟ್‌ಗೆ ಆಯಿಲ್ ಪೂರೈಸುತ್ತದೆ.
>ಎರಡನೇ ಎಂಡ್ ಪೀಸ್‌ನ ಪಕ್ಕದಲ್ಲಿ ಸಕ್ಷನ್/ಎಕ್ಸ್‌ಟ್ರೆಕ್ಷನ್ ಆಗುತ್ತದೆ. ಅದರಿಂದ ಆಯಿಲ್ ಸರ್ಕಿಟ್‌ನಲ್ಲಿರುವ ಪ್ರೆಶರ್ ಇಲ್ಲದಿರುವ (ಡಿ-ಪ್ರೆಶರೈಜ್‌ಡ್) ಆಯಿಲ್ ತೆಗೆಯಲಾಗುತ್ತದೆ.
>ಆಯಿಲ್‌ನಿಂದ ತುಂಬಿರುವ ಪ್ರೆಶರ್ ಪಾಕೇಟ್‌ನಲ್ಲಿ ಹೈಡ್ರೋಸ್ಟ್ಯಾಟಿಕ್ ಗೈಡ್ ಸ್ಥಿರವಾಗಿರುತ್ತದೆ.
>ಕ್ಯಾರೇಜ್ ಗೈಡ್‌ವೇಯಲ್ಲಿ ಬೇಕಾದಂತೆ ಇಡಲಾಗುತ್ತದೆ ಮತ್ತು 0.015 ಮಿ.ಮೀ. ಎತ್ತರದಲ್ಲಿ ಒಂದೇ ರೀತಿಯಲ್ಲಿ ಎತ್ತಲ್ಪಡುತ್ತದೆ. ಈ ರೀತಿಯಲ್ಲಿ ಇಂಟಿಗ್ರೆಟೆಡ್ ಚೋಕ್ ಸೆಟ್ ಮಾಡಿರುತ್ತವೆ.
ಹೈಡ್ರೋಸ್ಟ್ಯಾಟಿಕ್ ಗೈಡ್‌ವೇ ಬಳಸುವುದರಿಂದ ಉಂಟಾಗುವ ಲಾಭಗಳು
>ಸ್ಲೈಡ್ ಮತ್ತು ಗೈಡ್‌ವೇಯಲ್ಲಿ ಲೋಹಗಳ ಸಂಬಂಧವು ಲೋಹಗಳೊಂದಿಗೆ ಆಗುವುದಿಲ್ಲ. ಹೈಡ್ರೋಸ್ಟ್ಯಾಟಿಕ್ ಗೈಡ್‌ವೇನಲ್ಲಿ ಘರ್ಷಣೆಯು ಹತ್ತು ಪಟ್ಟು ಕಡಿಮೆ ಇರುತ್ತದೆ ಮತ್ತು ವೇಗದ ಪ್ರಮಾಣದಲ್ಲಿಯೇ ಇರುತ್ತದೆ.
>ಸಾಮಾನ್ಯವಾದ ಗೈಡ್‌ವೇಯ ವಿರುದ್ಧ, ಹೈಡ್ರೋಸ್ಟ್ಯಾಟಿಕ್ ಸಿಸ್ಟಮ್‌ನಲ್ಲಿ ಚಟುವಟಿಕೆಗಳ ದಾರಿಯು ವಿರುದ್ಧವಾಗುವಾಗ ಅಥವಾ ಸ್ಟಿಕ್-ಸ್ಲಿಪ್ ಪರಿಣಾಮಗಳಿಂದಾಗಿ (ಎರಡು ವಸ್ತುಗಳು ಒಂದರೊಂದಿಗೆ ಒಂದು ಸರಿಯುತ್ತಿರುವಾಗ ವಿಶೇಷವಾಗಿ ಉದ್ಭವಿಸುವಂತಹ ಅಪ್ಪಳಿಸುವಿಕೆಯಲ್ಲಿ ಉಂಟಾಗುವ ಚಟುವಟಿಕೆಗಳು) ಬ್ಯಾಕ್‌ಲ್ಯಾಶ್‌ನ ಸಮಸ್ಯೆಯೂ ಉಂಟಾಗುವುದಿಲ್ಲ.
>ಗೈಡ್ ಶಾಶ್ವತವಾಗಿ ಪ್ಲೆರಹಿತವಾಗಿರುತ್ತವೆ.
>ಸ್ಥಾನದ ನಿರ್ಧಾರದಲ್ಲಿ (ಪೊಜಿಶನಿಂಗ್) ಉಲ್ಲೇಖನೀಯ ನಿಖರತೆಯ ಸ್ತರ.
>ಗೈಡ್‌ನ ಟ್ರೂ ಚಲಿಸುವಿಕೆ : ಗೈಡ್‌ನ ಸರ್ಫೇಸ್‌ಗಿಂತ ಹೈಡ್ರೋಸ್ಟ್ಯಾಟಿಕ್ ಗೈಡ್ ಹೆಚ್ಚು ರೇಖೀಯವಾಗಿರುತ್ತವೆ.
>ಮಶಿನ್‌ನ ಉತ್ತಮವಾದ ಔಷ್ಣಿಕ ಸ್ಥಿರತೆ : ಘರ್ಷಣೆಯಿಂದಾಗಿ ಬೇರಿಂಗ್‌ನಲ್ಲಿ ಉಂಟಾಗುವ ಉಷ್ಣತೆಯು ಮಶಿನ್‌ನಿಂದ ಹೆಚ್ಚು ಪ್ರಭಾವಶಾಲಿಯಾಗಿ ದೂರಕ್ಕೆ ಹೋಗುತ್ತದೆ. ತಂಪಾಗಿರುವ ಆಯಿಲ್ ಬಳಸಿ ಮಶಿನ್‌ನ ಉಷ್ಣಾಂಶವನ್ನು ನಿಯಂತ್ರಿಸಲಾಗುತ್ತದೆ.
>ಮಶಿನ್‌ನ ಗುಣವಿಶೇಷಗಳನ್ನು ವಿಸ್ತಾರವಾಗಿ ಬಳಸಿದನಂತರ ಪ್ರಭಾವಹೀನವಾಗುತ್ತವೆ.
>ನಿರ್ವಹಣೆಯ ಖರ್ಚು ಕಡಿಮೆ ಮತ್ತು ಮಶಿನ್ ದೀರ್ಘಕಾಲಾವಧಿಯ ತನಕ ಬಾಳಿಕೆ ಬರುತ್ತದೆ.
ಮುಂದಿನ ಕೆಲಸಗಳಿಗೋಸ್ಕರ ಉಪಯುಕ್ತ
>ಅತ್ಯುತ್ತಮವಾದ ಸರ್ಫೇಸ್ ಗುಣಮಟ್ಟ ಮತ್ತು ನಿಖರವಾಗಿರುವ ಸಾಮಾನ್ಯವಾದ ಯಂತ್ರಣೆ
>ಹೆಚ್ಚು ಕಟಿಂಗ್ ಸ್ಪೀಡ್ ಮತ್ತು ತುಂಡುಗಳ ಆಳವನ್ನು ಇಟ್ಟು ಉತ್ಕೃಷ್ಟವಾದ ಯಂತ್ರಣೆಯ ಗುಣಮಟ್ಟ ಮತ್ತು ನಿರ್ದೋಷತೆಯನ್ನು ನೀಡುವ ಉನ್ನತ ಕೆಲಸ ಸಾಮರ್ಥ್ಯವುಳ್ಳ ಯಂತ್ರಣೆ.
ಸಿ. ತುಂಬಾ ನಿಖರತೆ ಇರುವ ಸ್ಪಿಂಡಲ್
>P2 ಶ್ರೇಣಿಯ (ಗ್ರೈಂಡಿಂಗ್ ಶ್ರೇಣಿ) ಸ್ಪಿಂಡಲ್ ಬೇರಿಂಗ್ ಬಳಸಿ ತಯಾರಿಸಿರುವ ಥರ್ಮೋ ಸಿಮೆಟ್ರಿಕ್ ಸ್ಪಿಂಡಲ್ ಸ್ಟ್ರಕ್ಚರ್
>ಆಯಿಲ್ ತಂಪು ಮಾಡಿರುವ ಹೆಡ್‌ಸ್ಟಾಕ್ ಇರುವ ಬಿಲ್ಟ್-ಇನ್ ಸ್ಪಿಂಡಲ್
>ಗಾಳಿ ಒಳಗೆ ಬಿಡಬಹುದಾದಂತಹ ಸ್ಪಿಂಡಲ್ ಅಸೆಂಬ್ಲಿ.
ಕೇಸ್ ಸ್ಟಡಿ
ಎ. ಹಾರ್ಡ್ ಪಾರ್ಟ್ ಟೇಪರ್ ಟರ್ನಿಂಗ್
ಸರ್ಫೇಸ್ ರಫ್‌ನೆಸ್ (ಒರಟುತನ) ಯಂತ್ರಭಾಗಗಳ ಫೇಸ್‌ನಲ್ಲಿರುವ ಸರಳತೆ
ಬಿ. ಹಾರ್ಡ್‌ನೆಸ್ ಮಾಡಿರುವ ಸ್ಟೀಲ್‌ನಲ್ಲಿ ಟೇಪರ್‌ನಲ್ಲಿರುವ ವರ್ತುಲಾಕಾರ ಮತ್ತು ಸರಳತೆ
ಮಟೀರಿಯಲ್ : 20McCr5
ಕಠಿಣತೆ : 56-60 HRC
ಕಟಿಂಗ್ ಸ್ಪೀಡ್ Vc : 140 ಮೀ./ನಿಮಿಷ ಮತ್ತು ಫೀಡ್ ರೇಟ್ f : 0.05 ಮಿ.ಮೀ./ ಸುತ್ತುವಿಕೆ ಇದರಲ್ಲಿ ಪರಿಶೀಲನೆಯನ್ನು ಮಾಡಲಾಯಿತು.
ಟಿಪ್ಪಣಿ : ಫೀಡ್‌ರೇಟ್ ಕಡಿಮೆ ಮಾಡಿ ಇದಕ್ಕಿಂತಲೂ ಒಳ್ಳೆಯ ಸರ್ಫೇಸ್ ಫಿನಿಶ್ ಲಭಿಸಬಹುದು.
ಅಮೃತೇಶ್ವರ ಸಿ. ಆರ್
ಸಹಾಯಕ ವ್ಯವಸ್ಥಾಪಕರು,
ರಿಸರ್ಚ್ ಮತ್ತು ಡೆವ್ಹಲಪ್‌ಮೆಂಟ್ ವಿಭಾಗ
ಏಸ ಡಿಸೈನರ್ಸ್ ಲಿ.
9741715715
ಅಮೃತೇಶ್ವರ ಸಿ.ಆರ್. ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ.
ಏಸ ಡಿಸೈನರ್ಸ್ ಲಿ. ಕಂಪನಿಯಲ್ಲಿ ಸಂಶೋಧನೆ ಮತ್ತು ಡೆವಲಪ್‌ಮೆಂಟ್ ವಿಭಾಗದಲ್ಲಿ ಅವರು ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಮಶಿನ್ ಟೂಲ್ ನಿರ್ಮಾಣದ ಕ್ಷೇತ್ರದಲ್ಲಿ ಅವರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ.