ಇನ್ ಸಿಟೂ ಯಂತ್ರಣೆ

@@NEWS_SUBHEADLINE_BLOCK@@

Udyam Prkashan Kannad    26-Dec-2019   
Total Views |
 
 
ವಿವಿಧ ಉದ್ಯಮಗಳ ಕ್ಷೇತ್ರಕ್ಕೋಸ್ಕರ ಉನ್ನತ ಗುಣಮಟ್ಟದ ಸ್ಟಾಂಡರ್ಡ್ ಮಶಿನ್ ಟೂಲ್, ಸ್ಪೆಶಲ್ ಪರ್ಪಸ್ ಮಶಿನ್
 
(ಎಸ್.ಪಿ.ಎಮ್.) ಮತ್ತು ಇನ್ ಸಿಟೂ (ಕೆಲಸದ ಜಾಗಕ್ಕೆ ಹೋಗಿ ಯಂತ್ರಣೆಯನ್ನು ಮಾಡುವಂತಹ) ಮಶಿನ್‌ನ ತಯಾರಿಕೆಯನ್ನು ಮಾಡುವ ಪ್ರೆಸಿಟೆಕ್ ಕಂಪನಿಯ ಸ್ಥಾಪನೆಯನ್ನು 1978 ರಲ್ಲಿ ಮಾಡಲಾಯಿತು. ಡಿಸೈನ್, ಉತ್ಪಾದನೆ ಮತ್ತು ಅಸೆಂಬ್ಲಿ, ಅತ್ಯಾಧುನಿಕ ಕಂಟ್ರೋಲರ್, ಸರ್ವಿಸಿಂಗ್ ಮತ್ತು ಸಪೋರ್ಟ್, ಪ್ರೊಟೊಟೈಪಿಂಗ್ ಹಾಗೆಯೇ ಯಂತ್ರೋಪಕರಣಗಳು, ಉಪಸಾಧನೆಗಳು (ಎಕ್ಸೆಸರೀಜ್) ಮತ್ತು ಅಟ್ಯಾಚ್‌ಮೆಂಟ್ ಇತ್ಯಾದಿಗಳ ಉತ್ಪಾದನೆ ಇಂತಹ ವಿವಿಧ ಕ್ಷೇತ್ರಗಳಲ್ಲಿ ಪ್ರೆಸಿಟೆಕ್ ಕಂಪನಿಯು ಕಾರ್ಯನಿರತವಾಗಿದೆ.
 

1_1  H x W: 0 x 
 
ಇನ್ ಸಿಟೂ ಮಶಿನ್
 
ಪ್ರೆಸಿಟೆಕ್ ಇನ್ ಸಿಟೂ ಪ್ರಕ್ರಿಯೆಯಲ್ಲಿ ವಿವಿಧ ಪ್ರಕಾರದ ಕೆಲಸಗಳಿಗೋಸ್ಕರ ಬೇಕಾಗಿರುವ ಮಶಿನ್‌ಗಳನ್ನು ತಯಾರಿಸುತ್ತದೆ. ಇದರಲ್ಲಿ ಮಲ್ಟಿಪರ್ಪಸ್ ಸರ್ವೋ ಈ ಸಿ.ಎನ್.ಸಿ.ಯಲ್ಲಿ ಕಾಲಮ್ ಮೂಮೆಂಟ್ ಮಾಡಬಲ್ಲ ರಚನೆಯಲ್ಲಿದೆ, ಇದರಿಂದಾಗಿ ಯಾವುದೇ ವಿಧದ ಯಂತ್ರಣೆಯನ್ನು ಮಾಡುವುದು ಸಾಧ್ಯವಾಯಿತು. ಆದರೆ ಪೋರ್ಟ್‌ಮಿಲ್ ಇದು ಒಂದು ಅಸಾಮಾನ್ಯವಾದ ಮಿಲಿಂಗ್ ಮಶಿನ್ ಆಗಿದ್ದು, ಸಹಜವಾಗಿ ಅದನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಬಹುದು. ಇನ್ ಸಿಟೂ ಮಶಿನ್‌ನ ಲ್ಯಾಂಜ್ ಫೇಸಿಂಗ್ ವಿಧದಲ್ಲಿ ರೋಟಾ ಮಿಲ್ ಮಶಿನ್ ಹೈಡ್ರೊ ಪಾವರ್ ಇಂಜಿನಿಯರಿಂಗ್, ಪೆಟ್ರೊಲಿಯಮ್ ರಿಯಾಕ್ಟರ್, ಹಡಗುಗಳ ಕಟ್ಟುವಿಕೆ, ರಿಯಾಕ್ಟರ್ಸ್ ಇಂತಹ ಹೆವಿ ಇಂಜಿನಿಯರಿಂಗ್ ಉದ್ಯಮದಲ್ಲಿ ಮಾಡಲಾಗುವ ದೊಡ್ಡ ಮತ್ತು ತುಂಬಾ ಚಿಕ್ಕ ಆಕಾರದ ಯಂತ್ರಣೆಗೋಸ್ಕರ ಬಳಸಲಾಗುತ್ತದೆ.
 
ಉದ್ಯಮಕ್ಷೇತ್ರದ ಅನೇಕ ಬೇಡಿಕೆಗಳನ್ನು ಪೂರ್ಣಗೊಳಿಸಲು ನಮ್ಮಲ್ಲಿರುವ ಅನುಭವದಿಂದಾಗಿ ನಾವು ಇನ್ ಸಿಟೂ ಪ್ಲಂಜ್ ಫೇಸಿಂಗ್ ಉತ್ಪಾದನೆಗಳ ಪಂಕ್ತಿಯಲ್ಲಿ ರೊಟೋಸ್ ಪ್ರಸ್ತುತ ಪಡಿಸಿದೆವು. ರೊಟಾಮಿಲ್‌ನ ಹೋಲಿಕೆಯಲ್ಲಿ ರೋಟಾ ಫೇಸ್‌ನಲ್ಲಿ 0.55 ರಿಂದ 1.55 ಮೀಟರ್‌ನಷ್ಟು ಸಣ್ಣ ವ್ಯಾಸದ ವ್ಯಾಪ್ತಿಯಲ್ಲಿ ಫೇಸಿಂಗ್ ಮಾಡಲಾಗುತ್ತದೆ. ಇದರ ಹೊರತಾಗಿ ಅದರಲ್ಲಿ ಅನೇಕ ಡ್ರೈವ್, ಕ್ಲಾಪಿಂಗ್ ಮತ್ತು ಟೂಲಿಂಗ್‌ನ ಪರ್ಯಾಯಗಳು ಉಪಲಬ್ಧವಿವೆ. ಇದರ ವ್ಯಾಪ್ತಿಯು ಹೆವಿ ಇಂಜಿನಿಯರಿಂಗ್ ಕ್ಷೇತ್ರದಿಂದ ಮೆಂಟೆನನ್ಸ್ ರಿಪೆಯರ್ ಆಪರೇಶನ್ಸ್ (MRO)/ ಮೆಂಟೆನನ್ಸ್ ರಿರ್ಬಿಶ್‌ಮೆಂಟ್
 
ಅಪ್‌ಗ್ರೆಡೇಶನ್‌ನಂತಹ (MRO)/ ಉದ್ಯಮಗಳ ತನಕ ಇರುತ್ತದೆ. ಇದರ ಕುರಿತಾದ ಉದಾಹರಣೆ ಎಂದರೆ, ಇಂಟರ್‌ನ್ಯಾಶನಲ್ ಥರ್ಮೋನ್ಯುಕ್ಲಿಯರ್ ಏಕ್‌ಸ್‌‌ಪರಿಮೆಂಟಲ್ ರಿಯಾಕ್ಟರ್ (ITER) ಯೋಜನೆ.


2_1  H x W: 0 x

ಜಗತ್ತಿನ ಈ ಮೊತ್ತ ಮೊದಲ ಪರಮಾಣುಗಳ ಫ್ಯುಜನ್ ರಿಯಾಕ್ಟರ್‌ನಲ್ಲಿ 28 ಮೀಟರ್ ವ್ಯಾಸದ ಸರ್ಫೇಸ್ ಬೃಹತ್ ಪ್ರಮಾಣದಲ್ಲಿ ಯಂತ್ರಣೆಯನ್ನು ಮಾಡುವ ಯೋಜನೆ ಇತ್ತು. ಅದಕ್ಕೋಸ್ಕರ ನಾವು ಕಟ್ಟಡಗಳ ನಿರ್ಮಾಣದ ಕ್ಷೇತ್ರದಲ್ಲಿ ಬಳಸಲಾಗುವ ಶಿಪಿಂಗ್ ಕ್ರೇನ್‌ನಂತಹ ಸ್ಲ್ಯುಯಿಂಗ್ ಬೇರಿಂಗ್ ಸೀಟಿಂಗ್ ಇರುವ ಒಂದು ಪೋರ್ಟೆಬಲ್ ಮಶಿನ್ ನೀಡಲಾಗಿದೆ. ವಿಶೇಷವೆಂದರೆ ಈ ಕೆಲಸಕ್ಕೋಸ್ಕರ ಬಳಸಲಾಗುವ 9 ಮೀಟರ್‌ನ ದೊಡ್ಡ ಟೇಬಲ್ ಇರುವ ವಿ.ಟಿ.ಎಲ್.ನ ಹೋಲಿಕೆಯಲ್ಲಿ ಈ ಪೋರ್ಟೆಬಲ್ ಮಶಿನ್‌ನ ಬೆಲೆಯು ತುಂಬಾ ಕಡಿಮೆ ಇತ್ತು.
 
ರೋಟೋಸ್
 
ಇನ್ ಸಿಟೂ ಫ್ಲಂಜ್ ಫೇಸಿಂಗ್ ಯಂತ್ರಣೆಯಲ್ಲಿ ಬಹೂಪಯೋಗಿತ್ವ, ಸಹಜವಾದ ಚಟುವಟಿಕೆಗಳು ಮತ್ತು ಮೊಡ್ಯುಲರ್ ಉಪಯೋಗವನ್ನು ಪಡೆಯಲು ಇರುವ ಪ್ರಮುಖವಾದ ವೈಶಿಷ್ಟ್ಯಗಳನ್ನು ಈ ಮುಂದೆ ನೀಡಲಾಗಿದೆ.
 
ಫೇಸಿಂಗ್‌ಗೋಸ್ಕರ ಪ್ರೋಗ್ರಾಮ್ ಮಾಡಲು ಯೋಗ್ಯವಾಗಿರುವ ಸ್ವಯಂಚಾಲಿತ ಫೀಡ್ ರೇಟ್. 
ಗಟ್ಟಿಯಾಗಿರುವ ಮತ್ತು ದೃಢ, ಆದರೆ ಭಾರವು ಕಡಿಮೆ. ಫೈನ್ ಫಿನಿಶ್, ನಿಯಂತ್ರಿತ ರಫ್ ಫಿನಿಶ್ ಅಥವಾ ಸರ್ಪಿಲ್ ಕಚ್ಚಿನ (ಗ್ರಾಮೋಫೋನ್ ರೆಕಾರ್ಡ್‌ನಲ್ಲಿರುವ ಕಚ್ಚುಗಳಂತಿರುವ) ಫಿನಿಶ್ ಪಡೆಯಲು ಫೇಸಿಂಗ್‌ಗೋಸ್ಕರ ಪ್ರೊಗ್ರಾಮ್ ಮಾಡಲು ಯೋಗ್ಯವಾಗಿರುವ ಸ್ವಯಂಚಾಲಿತ ಫೀಡ್ ರೇಟ್ ಇರುವುದರಿಂದ ಕೂಲಂಜ್‌ನ ಸರ್ಫೇಸ್‌ನಲ್ಲಿ ವಿವಿಧ ಪ್ರಕಾರದ ಫಿನಿಶ್ ನಿರ್ದೋಷವಾಗಿ ಪಡೆಯುವುದು ಸಾಧ್ಯವಾಗುತ್ತದೆ.
 

3_1  H x W: 0 x 
 
ಡ್ರೈವ್ ಯುನಿಟ್‌ಗೋಸ್ಕರ ಇಲೆಕ್ಟ್ರಿಕ್, ಹೈಡ್ರಾಲಿಕ್, ನ್ಯುಮ್ಯಾಟಿಕ್ ಇಂತರ ಭಿನ್ನವಾದ ಪರ್ಯಾಯಗಳು ಉಪಲಬ್ಧವಿರುವುದರಿಂದ ಗ್ರಾಹಕರು ಅವರವರ ಬೇಡಿಕೆಗಳಿಗೆ ಅನುಸಾರವಾಗಿ ಡ್ರೈವ್‌ನ ಆಯ್ಕೆಯನ್ನು ಮಾಡಬಲ್ಲರು ಅಥವಾ ಸೈಟ್ ಅಥವಾ ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಅದೇ ಮಶಿನ್‌ನಲ್ಲಿ ವಿವಿಧ ಪ್ರಕಾರದ ಡ್ರೈವ್ ಬಳಸಬಲ್ಲರು.
ಮೊಡ್ಯುಲರ್ ಕ್ಲಾಂಪಿಂಗ್ ಮತ್ತು ಟೂಲಿಂಗ್ ಪ್ರಣಾಳಿಕೆ.
ಬೇಡಿಕೆಗೆ ಅನುಸಾರವಾಗಿ ರಿಂಗ್ ಟೈಪ್ ಜಾಯಿಂಟ್ (RTJ) ಫ್ಲಂಜ್‌ನಲ್ಲಿರುವ ಕಚ್ಚಿನ ಯಂತ್ರಣೆಯನ್ನು ಮಾಡಲು ಸ್ಟ್ಯಾಂಡರ್ಡ್ ಟೂಲ್. ತುಂಬಾ ಕಠಿಣವಾದ ಪ್ಯಾರಾಮೀಟರ್ಸ್‌ಗಳನ್ನು ಪಾಲಿಸಿ ಟೇಪರ್‌ನ ಸರ್ಫೇಸ್ ಇರುವ ಕಚ್ಚುಗಳನ್ನು ತಯಾರಿಸುವುದು ಇದೇ RTJ ಫ್ಲಂಜ್‌ನಲ್ಲಿರುವ ಕಚ್ಚಿನ ಯಂತ್ರಣೆಗೋಸ್ಕರ ಬಳಸಲಾಗುವ ಟೂಲ್‌ನಲ್ಲಿರುವ ಒಂದು ಮಹತ್ತರವಾದ ಸವಾಲಾಗಿದೆ. ಇದಕ್ಕೋಸ್ಕರ ನಾವು ಸ್ಟ್ಯಾಂಡರ್ಡ್ ಟೂಲಿಂಗ್ ಅಭಿವೃದ್ಧಿ ಮಾಡಿದೆವು. ಇದನ್ನು ಬಳಸಿ ಅಗತ್ಯವಿರುವ ಫಲಿತಾಂಶವನ್ನು ನಿರಂತರವಾಗಿ ಪಡೆಯುವುದು ಹೆಚ್ಚು ಸುಲಭವಾಗುತ್ತದೆ.
ಸೂಕ್ಷ್ಮ ಹೆಲಿಕಲ್ ಕಚ್ಚುಗಳ ಯಂತ್ರಣೆ.
 
ಕೇಸ್ ಸ್ಟಡಿ 
 

4_1  H x W: 0 x 
 
1. ನಮ್ಮ ಗ್ರಾಹಕರೊಬ್ಬರು ದೊಡ್ಡ ಪ್ರೆಶರ್ ವೆಸಲ್ ಮತ್ತು ರಿಯಾಕ್ಟರ್‌ನ ಉತ್ಪಾದಕರಾಗಿದ್ದು ಅದನ್ನು ಮಾರುಕಟ್ಟೆಯಲ್ಲಿರುವ ಸ್ಟ್ಯಾಂಡರ್ಡ್ ಫ್ಲಂಜ್‌ನ ಖರೀದಿಯನ್ನು ಮಾಡುತ್ತಿದ್ದರು ಅಥವಾ ಯಂತ್ರಣೆಯನ್ನು ಮಾಡಿರುವ ಫ್ಲಂಜ್ ವೆಸಲ್‌ಗೆ ವೆಲ್ಡಿಂಗ್ ಮಾಡಿ ಜೋಡಿಸುತ್ತಿದ್ದರು. ಪ್ರತಿಯೊಂದು ವೆಸಲ್ ಅಥವಾ ರಿಯಾಕ್ಟರ್‌ನಲ್ಲಿ ಈ ರೀತಿಯ ತುಂಬಾ ಫ್ಲಂಜ್‌ಗಳಿದ್ದವು. ಆದರೆ ವೆಲ್ಡಿಂಗ್ ಮಾಡಿರುವ ಜಾಗದಲ್ಲಿ ಡಿಸ್ಟಾರ್ಶನ್ ಆಗುತ್ತಿತ್ತು ಮತ್ತು ಸೀಲಿಂಗ್ ಸರ್ಫಸ್ ನಷ್ಟವಾಗುತ್ತಿತ್ತು. ಈ ಕೆಲಸವು ತುಂಬಾ ಮಹತ್ವದ್ದಾಗಿದ್ದರಿಂದ ಗ್ರಾಹಕರೆದುರು ಸಮಸ್ಯೆಗಳು ಕಂಡುಬಂದವು. ಆದರೆ ಸಹಜವಾಗಿ ಎಲ್ಲಿಯೂ ತಿರುಗಿಸಬಹುದಾದ ಮಶಿನ್‌ನಿಂದಾಗಿ DIN/ ASI ಸ್ಟ್ಯಾಂಡರ್ಡ್‌ಗಳಿಗೆ ಅನುಸಾರವಾಗಿ ಫ್ಲಂಜ್‌ನ ಗುಣಮಟ್ಟದ ಪ್ಯಾರಾಮೀಟರ್ಸ್‌ಗಳಿಗೆ ಅನುಸಾರವಾಗಿ ವೆಲ್ಡಿಂಗ್ ಸರಿ ಇಲ್ಲದ ಎಲ್ಲ ಸರ್ಫೇಸ್‌ಗಳಿಗೆ ಮತ್ತೆ ಯಂತ್ರಣೆಯನ್ನು ಮಾಡಿ ಸರಿಯಾಗಿ ಮಾಡುವುದು ಸಾಧ್ಯವಾಯಿತು. ಇದರಿಂದಾಗಿ ಗ್ರಾಹಕರ ಇನ್ವೆಂಟರಿ, ತಪಾಸಣೆ ಮತ್ತು ಕ್ಲಿಯರನ್ಸ್ ಇತ್ಯಾದಿಗಳಿಗೆ ಮಾಡಲಾಗುವ ಖರ್ಚು ಕಡಿಮೆ ಮಾಡುವಲ್ಲಿ ಸಹಾಯವಾಯಿತು. ಇದರ ಹೊರತಾಗಿ ಉತ್ಪಾದನೆಗೆ ಬೇಕಾಗುವ ವೇಳೆಯಲ್ಲಿ ಗಮನಾರ್ಹವಾದ ಸುಧಾರಣೆಯೂ ಆಯಿತು.
 

5_1  H x W: 0 x 
 
2. ನಮ್ಮ ಇನ್ನೊಬ್ಬ ಗ್ರಾಹಕರು ಶಿಪಿಂಗ್ ಕ್ರೇನ್‌ಗೋಸ್ಕರ (ಕಂಟೇನರ್ ಸ್ಥಳಾಂತರಿಸಲು ದೊಡ್ಡ ಹಡಗುಗಳಲ್ಲಿ ಅಳವಡಿಸಲಾಗುವಂತಹ ಕ್ರೇನ್) ಬೇಕಾಗುವ ದೊಡ್ಡ ಸ್ಟ್ರಕ್ಚರ್‌ಗಳ ಉತ್ಪಾದಕರಾಗಿದ್ದಾರೆ. ಕ್ರೇನ್‌ಗಳ ಟರೆಟ್‌ನ ಕೆಳಗೆ ಬೇಸ್ ಸ್ಟ್ರಕ್ಚರ್‌ಗಳು ಇರುತ್ತವೆ, ಅಲ್ಲಿ 2 ರಿಂದ 4.5 ಮೀಟರ್ ವ್ಯಾಸದ ಸ್ಲುಯಿಂಗ್ ಬೇರಿಂಗ್ (ಭಾರವಿರುವ ಮತ್ತು ದೊಡ್ಡ ವಸ್ತುಗಳಿಗೋಸ್ಕರ ಬಳಸಲಾಗುವಂತಹ) ಅಳವಡಿಸಬೇಕಾಗಿತ್ತು. ಇದಕ್ಕೋಸ್ಕರ ಫ್ಲಂಜ್‌ನ ಸರ್ಫೇಸ್‌ನಲ್ಲಿ ನಿರ್ದೋಷವಾದ ಸಮತಟ್ಟಾದ ಯಂತ್ರಣೆ ಮತ್ತು ಡ್ರಿಲಿಂಗ್ ಮಾಡುವುದೂ ಆವಶ್ಯಕವಾಗಿರುತ್ತದೆ. ಇದಕ್ಕೆ ಸಂಬಂಸಿರುವ ಗ್ರಾಹಕರು 8 ಮೀಟರ್ ಟೇಬಲ್ ಮತ್ತು 3.5 ಮೀಟರ್ ಎತ್ತರದ ವಿ.ಟಿ.ಎಲ್. ಖರೀದಿಸುವ ವಿಚಾರವನ್ನು ಮಾಡುತ್ತಿದ್ದರು. ಆಗ ನಾವು ಅವರಿಗೆ ನಮ್ಮ ಪೋರ್ಟೆಬಲ್ ಯಂತ್ರಣೆಯ ಕುರಿತಾದ ವಿಚಾರವನ್ನು ತಿಳಿಸಿದೆವು. ಅದರ ಬೆಲೆ ವಿ.ಟಿ.ಎಲ್.ನ ಐದು ಪಟ್ಟು ಇತ್ತು. ಹಾಗೆಯೇ ಅದಕ್ಕೋಸ್ಕರ ಯಾವುದೇ ವಿಶಿಷ್ಟವಾದ ಜಾಗ ಅಥವಾ ಮಶಿನ್ ಅಳವಡಿಸುವ ಖರ್ಚು ಇರಲಿಲ್ಲ. ಇಂದು ಆ ಪೋರ್ಟೆಬಲ್ ರೊಟಾಮಿಲ್ ಮಶಿನ್‌ನಲ್ಲಿ ನಿರ್ದೋಷವಾದ ಯಂತ್ರಣೆಯೊಂದಿಗೆ ದೊಡ್ಡದೊಡ್ಡ ಕೆಲಸಗಳನ್ನು ಮಾಡುತ್ತಿದ್ದಾರೆ. ಅದಕ್ಕೋಸ್ಕರ ಅವರಿಗೆ ಯಾವುದೇ ಹೆಚ್ಚಿನ ಸಮಯದ ಅಗತ್ಯವಿಲ್ಲ.
 
 
 

nikhila_1  H x  
ನಿಖಿಲಾ ಎಚ್.ಎಸ್.
ವ್ಯವಸ್ಥಾಪಕ ನಿರ್ದೇಶಕರು,
ಪ್ರೆಸಿಟೆಕ್ ಪ್ರಿಸಿಜನ್ ಮಶಿನಿಂಗ್ ಪ್ರೈ.ಲಿ. 
0 9448137258
 
 
ನಿಖಿಲಾ ಎಚ್.ಎಸ್. ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು ಮ್ಯಾನೆಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ 25 ವರ್ಷಗಳ ಅನುಭವವಿದೆ.
 
 
@@AUTHORINFO_V1@@