ಸಪ್ಟೆಂಬರ್ 2019 ರ ‘ಲೋಹಕಾರ್ಯ’ದ ಸಂಚಿಕೆಯಲ್ಲಿ ಕ್ಯಾಡ್-ಕ್ಯಾಮ್‌ನ ಕುರಿತಾದ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಂಡು ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ರೀತಿಗಿಂತ ಕ್ಯಾಮ್ ಹೇಗೆ ಪ್ರಭಾವಶಾಲಿಯಾಗಿದೆ, ಎಂದುದನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಸಿ.ಎನ್.ಸಿ. ಟರ್ನಿಂಗ್‌ಗೋಸ್ಕರ ಕ್ಯಾಮ್, ಮೂಲಭೂತ ಪ್ರೊಗ್ರಾಮಿಂಗ್‌ನ ಕೆಲಸದ ರೀತಿ, ಟರ್ನಿಂಗ್‌ಗೋಸ್ಕರ ಕ್ಯಾಮ್ ಬಳಕೆಗೆ ಸಂಬಂಧಪಟ್ಟ ಹಲವಾರು ಮಹತ್ವಪೂರ್ಣವಾದ ಅಂಶಗಳು ಮತ್ತು ಕೊನೆಯಲ್ಲಿ ಟರ್ನಿಂಗ್‌ನಲ್ಲಿ ಉನ್ನತಮಟ್ಟದ ಉತ್ಪಾದನೆಯ ಸಾಮರ್ಥ್ಯವನ್ನು ಪಡೆಯಲು ಅನೇಕ ಪ್ರಗತಿ ಹೊಂದಿರುವ ಕ್ಯಾಮ್ ತಂತ್ರಜ್ಞಾನದ ಕುರಿತು ವಿಮರ್ಶೆಯನ್ನು ಮಾಡಿದ್ದೇವೆ.
ಸಿ.ಎನ್.ಸಿ. ಟರ್ನಿಂಗ್‌ಗೋಸ್ಕರ ಕ್ಯಾಮ್, ಬಳಕೆದಾರರಿಗೆ ಬೇಕಾದಂತೆ ಯಂತ್ರಭಾಗಗಳ ನಿಖರವಾದ ಟರ್ನಿಂಗ್ ಮಾಡಲು ಟೂಲ್‌ನ ಒಂದು ಸೆಟ್ ಉಪಲಬ್ಧ ಮಾಡಿಕೊಡುತ್ತದೆ. ರಫಿಂಗ್, ಗ್ರೂವಿಂಗ್, ಥ್ರೆಡಿಂಗ್, ಪಾರ್ಟಿಂಗ್, ಬೋರಿಂಗ್, ಡ್ರಿಲಿಂಗ್ ಮತ್ತು ಫಿನಿಶಿಂಗ್ ಇಂತಹ ಯಾವಾಗಲೂ ಬಳಸುವಂತಹ ಪ್ರೊಗ್ರಾಮಿಂಗ್ ಆಪರೇಶನ್‌ಗಳಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ಅನುಕ್ರಮವಾಗಿ ವಿಝಾರ್ಡ್ ಇಂಟರ್‌ಫೇಸ್‌ನಲ್ಲಿ ಮಾಡಲಾಗುತ್ತದೆ. ಆದರೆ ಫೇಸ್ ಕಂಟೂರ್ ಮತ್ತು ಡ್ರಿಲಿಂಗ್ ಹಾಗೆಯೇ ಕ್ರಾಸ್ ಕಂಟೂರ್ ಮತ್ತು ಡ್ರಿಲಿಂಗ್‌ನಂತಹ ಕೆಲಸಗಳಿಗೋಸ್ಕರ ಅತ್ಯಾಧುನಿಕ ಟೂಲ್ C ಅಕ್ಷ ಮಿಲ್ಲಿಂಗ್ ಪ್ರಚಲಿತ ಹೊಂದಾಣಿಕೆಯೊಂದಿಗೆ ಪ್ರೊಗ್ರಾಮ್ ಮಾಡಲಾಗುತ್ತದೆ. ಟರ್ನಿಂಗ್‌ಗೋಸ್ಕರ ಕ್ಯಾಮ್ ಪ್ರೊಗ್ರಾಮ್‌ನ ಹಂತಗಳು ಮತ್ತು ತಂತ್ರಗಳನ್ನು ತಿಳಿದುಕೊಳ್ಳಲು ಒಂದು ಉದಾಹರಣೆಗೋಸ್ಕರ ನೋಝಲ್ ಈ ಯಂತ್ರಭಾಗದ ಪ್ರೊಗ್ರಾಮಿಂಗ್ ನೋಡೋಣ.
ಚಿತ್ರ ಕ್ರ. 1 ರಲ್ಲಿ ನೋಝಲ್‌ನ 3D ಮಾಡೆಲ್ ಇದೆ. ಅದನ್ನು ತಯಾರಿಸಲು ನಾವು ಸಾಮಾನ್ಯವಾದ ಮತ್ತು ಕಾರ್ಯಸಾಮರ್ಥ್ಯವುಳ್ಳ ರೀತಿಯಿಂದ, ಯಂತ್ರಣೆಯ ವಿವಿಧ ಕೆಲಸಗಳನ್ನು ಒಂದರ ನಂತರ ಇನ್ನೊಂದು ಹೀಗೆ ಮಾಡಲಿದ್ದೇವೆ. ಆದರೂ ಕೂಡಾ ಆ ಯಂತ್ರಭಾಗಗಳಿಗೆ ಟೂಲ್‌ಪಾಥ್ ತಯಾರಿಸುವ ಮುನ್ನ ನಾವು ಮೂಲಭೂತವಾದ ಪೂರ್ವಸಿದ್ಧತೆಯನ್ನು ಮಾಡಬೇಕು. ಈ ಪೂರ್ವಸಿದ್ಧತೆಯಲ್ಲಿ ಮಾಡೆಲ್‌ಗಳನ್ನು ಆಮದು ಮಾಡುವುದು, ಯಂತ್ರಭಾಗಗಳಿಗೆ ಓರಿಯಂಟ್ ಮಾಡುವುದು, ಮಶಿನ್‌ನ ಭಾಷೆಯ ಆಯ್ಕೆಯನ್ನು ಮಾಡುವುದು ಮತ್ತು ಬಳಕೆದಾರರಿಗೆ ಡೈರೆಕ್ಷನ್‌ನ ಸಿಸ್ಟಮ್‌ನೊಂದಿಗೆ ಕಾರ್ಯವಸ್ತುವಿನಲ್ಲಿ ಸ್ಟಾಕ್ ವಿವರಿಸುವುದು ಇಂತಹ ಕೆಲಸಗಳು ಸೇರಿವೆ.
ಪ್ರಾರಂಭದಲ್ಲಿ ನಾವು ಈ ಮುಂದಿನ ಕೆಲಸಗಳನ್ನು ಮಾಡುತ್ತೇವೆ.
>ಕಂಪ್ಯೂಟರ್‌ನ ಸ್ಕ್ರೀನ್‌ನಲ್ಲಿ ಯಂತ್ರಭಾಗಗಳನ್ನು ತೆರೆಯುವುದು ಮತ್ತು ಅದಕ್ಕೆ ಯೋಗ್ಯವಾಗಿರುವ ಓರಿಯೆಂಟೇಶನ್ ನೀಡುವುದು.
>ಮಶಿನ್‌ನ ಆಯ್ಕೆಯನ್ನು ಮಾಡುವುದು.
>2D ಕ್ಯಾಡ್ ಯಂತ್ರಭಾಗದ ಜ್ಯಾಮಿತಿಯನ್ನು (ಚಿತ್ರ ಕ್ರ. 2) ತಯಾರಿಸುವುದು.
>ಸ್ಟಾಕ್‌ನ ಮಿತಿಯನ್ನು ವಿವರಿಸುವುದು.
ಒಂದು ಸಲ ಕಾರ್ಯವಸ್ತುವನ್ನು ಸೆಟ್ ಮಾಡಿದರೆ, ಟೂಲ್‌ಪಾಥ್ ತಯಾರಿಸಲು ಪ್ರಾರಂಭಿಸಬಹುದು. ಲೇಥ್‌ನಲ್ಲಿ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವಾಗ ಸಾಮಾನ್ಯವಾಗಿ ವಿವಿಧ ಟೂಲ್‌ಪಾಥ್‌ಗಳನ್ನು ಮಾಡಲಾಗುತ್ತವೆ.
ಪ್ರೊಗ್ರಾಮರ್ ಕೆಲವು ನಿಮಿಷಗಳ ಕಾಲಾವಧಿಯಲ್ಲಿ ಮಾಡೇಲ್ ವೀಕ್ಷಿಸಿ ಅದರ ವಿಶ್ಲೇಷಣೆಯನ್ನು ಅವಶ್ಯಕವಾಗಿ ಮಾಡಲೇಬೇಕು. ಹೀಗೆ ವಿಶ್ಲೇಷಣೆಯನ್ನು ಮಾಡಿದ್ದರಿಂದ ಅವನಿಗೆ ಅಥವಾ ಅವಳಿಗೆ ಯಾವ ವಿಧದ ಯಂತ್ರಣೆಯ ಕೆಲಸಗಳ ಅಗತ್ಯವಿದೆ, ಎಂಬುದರ ಕುರಿತು ಅರಿವಾಗುತ್ತದೆ. ಆ ಯಂತ್ರಭಾಗಗಳಿಗೆ ಪ್ರಭಾವಶಾಲಿಯಾಗಿ ಯಂತ್ರಣೆಯನ್ನು ಮಾಡುವಂತಹ ಅತ್ಯುತ್ತಮವಾದ ಉಪಾಯವು ಕಂಡುಬರುತ್ತದೆ. ಮೇಲಿನ ಉದಾಹರಣೆಯಲ್ಲಿ ಓದುಗರಿಗೆ ವಿವಿಧ ಕೆಲಸಗಳನ್ನು ವಿವರಿಸಲು ಮತ್ತು ಅರ್ಥವನ್ನು ತಿಳಿದುಕೊಳ್ಳುವುದು ಸುಲಭವಾಗಬೇಕು ಎಂಬ ಉದ್ದೇಶದಿಂದ ಈ ಕೆಳಗಿನ ಹಂತಗಳನ್ನು ನಿರ್ಧರಿಸಲಾಗಿವೆ. ಅದಕ್ಕೆ ಅನುಸಾರವಾಗಿ ಮುಂದಿನ ಕೆಲಸಗಳನ್ನು ಅನುಕ್ರಮವಾಗಿ ಮಾಡಲಿದ್ದೇವೆ.
ಫೇಸಿಂಗ್
>ಹೊರ ವ್ಯಾಸದ ಟರ್ನಿಂಗ್
>ರಫಿಂಗ್
>ಫಿನಿಶಿಂಗ್
>ಹೊರ ವ್ಯಾಸದ ಗ್ರೂವಿಂಗ್ ಮತ್ತು ಥ್ರೆಡಿಂಗ್
>ಡ್ರಿಲಿಂಗ್
>ಪಾರ್ಟಿಂಗ್ ಮತ್ತು ಬ್ಯಾಕ್ ಫೇಸಿಂಗ್
>ಒಳ ವ್ಯಾಸದ ಬೋರಿಂಗ್
>ರಫಿಂಗ್
>ಫಿನಿಶಿಂಗ್
>ಒಳ ವ್ಯಾಸದ ಥ್ರೆಡಿಂಗ್
>ಒಳ ವ್ಯಾಸದ ತಪಾಸಣೆ
>ಎನ್.ಸಿ. ಕೋಡ್ ಪೋಸ್ಟ್ ಮಾಡುವುದು
ಫೇಸಿಂಗ್
ಫೇಸ್ ಟೂಲ್‌ಪಾಥ್‌ನ ಮುಂದಿನ ಯಂತ್ರಣೆಗೋಸ್ಕರ ಯಂತ್ರಭಾಗಗಳ ಫೇಸ್ ತಯಾರಿಸಲಾಗುತ್ತದೆ. ಒಂದು ಸಲ ಯಂತ್ರಭಾಗಗಳ ಫೇಸ್ ತಯಾರಾದರೆ, ಅದರ ಬಳಕೆಯನ್ನು ಟೂಲ್ ಸೆಟ್ ಮಾಡಲು ಅಥವಾ ಟೂಲ್ ಆಫ್‌ಸೆಟ್ ನಿರ್ಧರಿಸಲು ಮಾಡಬಲ್ಲೆವು. ಇದನ್ನು ಮಾಡಲು ಫೇಸಿಂಗ್ ಆಪರೇಶನ್‌ನ ಆಯ್ಕೆಯನ್ನು ಮಾಡುತ್ತೇವೆ ಮತ್ತು ಆವಶ್ಯಕವಿರುವ ಪ್ಯಾರಾಮೀಟರ್‌ಗಳನ್ನು (ಚಿತ್ರ ಕ್ರ. 3) ಸೆಟ್ ಮಾಡುತ್ತೇವೆ.
ಈ ಆಪರೇಶನ್ ಫೇಸಿಂಗ್ ಟೂಲ್‌ಪಾಥ್ ತಕ್ಷಣ ತಯಾರಿಸುತ್ತದೆ ಮತ್ತು ಟೂಲ್ ಲೈಬ್ರೆರಿಯಿಂದ ಯೋಗ್ಯ ಟೂಲ್ ಆಯ್ಕೆ ಮಾಡಿ ಬಳಸುತ್ತದೆ. ಬಳಕೆದಾರರು ಇಷ್ಟಪಟ್ಟಲ್ಲಿ ಅದು ಮ್ಯಾನ್ಯುವಲ್ ಪರ್ಯಾಯಗಳ ಆಯ್ಕೆಯನ್ನು ಮಾಡಿ ಸ್ವಯಂಚಾಲಿತ ಪರ್ಯಾಯಗಳನ್ನು ನಿಲ್ಲಿಸುತ್ತದೆ.
ಹೊಸ ವ್ಯಾಸದ ಟರ್ನಿಂಗ್
ಫೇಸಿಂಗ್ ಆಪರೇಶನ್‌ನ ನಂತರ ಹೊರ ವ್ಯಾಸದ (ಓ.ಡಿ.) ಟರ್ನಿಂಗ್ ಪ್ರೊಗ್ರಾಮ್ ಮಾಡಲಾಗಿದೆ. ಇದರಲ್ಲಿ ಅನುಕ್ರಮವಾಗಿ ರಫಿಂಗ್ ಮತ್ತು ಫಿನಿಶಿಂಗ್‌ನ ಕೆಲಸಗಳನ್ನು ಮಾಡಲಾಗುತ್ತದೆ.
ಫಿನಿಶಿಂಗ್ ಪಾಸ್‌ನ ಸಿದ್ಧತೆಯನ್ನು ಮಾಡಲು ದೊಡ್ಡ ಪ್ರಮಾಣದಲ್ಲಿರುವ ಸ್ಟಾಕ್ ಆದಷ್ಟು ಬೇಗನೆ ತೆಗೆದುಹಾಕಲು ರಫಿಂಗ್ ಟೂಲ್‌ಪಾಥ್ ಉಪಯೋಗಿಸುತ್ತಾರೆ. ರಫಿಂಗ್ ಪಾಸ್ ಇದು ಸಾಮಾನ್ಯವಾಗಿ Z ಅಕ್ಷದೊಂದಿಗೆ ಸಮಾನಾಂತರವಾದ ನೇರ ಕಟ್ ಇರುತ್ತದೆ. ರಫಿಂಗ್‌ಗೋಸ್ಕರ ಸ್ಟ್ಯಾಂಡರ್ಡ್ ರಫ್ ಟೂಲ್‌ಪಾಥ್, ‘ಕ್ಯಾಡ್’ ರಫ್ ಟೂಲ್‌ಪಾಥ್ ಎಂಬಂತಹ ಅನೇಕ ಪರ್ಯಾಯಗಳಿವೆ. ಇದರಲ್ಲಿ ಮಶಿನ್‌ನಲ್ಲಿರುವ ಕ್ಯಾಂಡ್ ಸೈಕಲ್ ಎಲ್ಲಕ್ಕಿಂತಲೂ ಕಾರ್ಯಸಾಮರ್ಥ್ಯವುಳ್ಳ ಕೋಡ್ ತಯಾರಿಸಲು ಉಪಯೋಗಿಸಲಾಗುತ್ತದೆ. (ಆದರೂ ಕೂಡಾ ಈ ಸ್ಟ್ಯಾಂಡರ್ಡ್ ರಫ್ ಟೂಲ್‌ಪಾಥ್‌ನಂತಹ ಪರ್ಯಾಯಗಳನ್ನು ನೀಡುವುದಿಲ್ಲ). ಕ್ಯಾಂಡ್ ಪ್ಯಾಟರ್ನ್ ಟೂಲ್‌ಪಾಥ್ ರಿಪೀಟ್ ಮಾಡಲಾಗುತ್ತದೆ. Z ಅಕ್ಷದೊಂದಿಗೆ ಸಮಾನಾಂತರವಾಗಿ ಕತ್ತರಿಸದೇ ಭಾಗಗಳ ಕಂಟೂರ್‌ನ ಗಾತ್ರದಲ್ಲಿ ರಪಿಂಗ್ ಪಾಸ್ ತಯಾರಿಸಲಾಗುತ್ತದೆ.
ಡೈನ್ಯಾಮಿಕ್ ರಫ್ ಟೂಲ್‌ಪಾಥ್ ಹೆಚ್ಚು ಪ್ರಭಾವಶಾಲಿಯಾಗಿ ಮಟೀರಿಯಲ್‌ನ ಸಂಪರ್ಕದಲ್ಲಿರುತ್ತವೆ ಮತ್ತು ಇನ್ಸರ್ಟ್‌ನ ಸರ್ಫೇಸ್‌ನ ಬಳಕೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ. ಇದರಲ್ಲಿ ಕಟಿಂಗ್ ಸ್ಪೀಡ್ ಮತ್ತು ಟೂಲ್‌ನ ಬಾಳಿಕೆ ಹೆಚ್ಚಾಗುತ್ತದೆ. ಮೊದಲ ಸ್ಟಾಕ್‌ನ ಆಕಾರವು ಕೊನೆಯ ಕೆಲಸದಲ್ಲಿರುವ ಭಾಗಗಳ ಆಕಾರದಂತೆ ಇರುತ್ತದೆ. ಉದಾಹರಣೆ, ಸ್ಟಾಕ್‌ಗೋಸ್ಕರ ಕಾಸ್ಟಿಂಗ್ ಉಪಯೋಗಿಸುವಲ್ಲಿ ಕಂಟೂರ್ ರಫ್ ಟೂಲ್‌ಪಾಥ್ ಉಪಯುಕ್ತವಾಗಿರುತ್ತವೆ.
ನಮ್ಮ ಎದುರಿಗಿರುವ ವಿಂಡೊದಲ್ಲಿ 2D ಹೊರ ರೇಖೆಯನ್ನು ಆಯ್ಕೆ ಮಾಡಿ ಅದಕ್ಕೆ ರಫಿಂಗ್ ಆಪರೇಶನ್‌ನ ‘ಮಿತಿ’ಯನ್ನು ಸೆಟ್ ಮಾಡಿ ಕೆಲಸವನ್ನು ಪ್ರಾರಂಭಿಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಟೂಲ್‌ಗೋಸ್ಕರ ಪ್ರಾರಂಭದ ಬಿಂದು ಮತ್ತು ಲಿಫ್‌ಟ್ ಬಿಂದುವನ್ನು ತೋರಿಸಲು 2ಈ ಹೊರ ರೇಖೆಯ ಪ್ರಾರಂಭ ಮತ್ತು ಕೊನೆಯ ಬಿಂದುವನ್ನು ವಿವರಿಸಲಾಗುತ್ತದೆ. ಚಿತ್ರ ಕ್ರ. 5 ರಲ್ಲಿ ಈ ಪ್ರಕ್ರಿಯೆಯನ್ನು ತೋರಿಸಲಾಗಿದೆ.
ಒಂದು ಸಲ ವಕ್ರರೇಖೆಯನ್ನು ಆಯ್ಕೆ ಮಾಡಿದಲ್ಲಿ, ‘ಕಂಪ್ಯೂಟ್’ ಬಟನ್‌ನಲ್ಲಿ ಕ್ಲಿಕ್ ಮಾಡಿ ರಫಿಂಗ್ ಟೂಲ್‌ಪಾಥ್ ತಯಾರಿಸಲಾಗುತ್ತದೆ. ಇಲ್ಲಿಯೂ ಲೈಬ್ರರಿಯಲ್ಲಿರುವ ಟೂಲ್‌ಗಳು ಸ್ವಯಂಚಾಲಿತವಾಗಿ ಅಥವಾ ವೈಯಕ್ತಿಕವಾಗಿ ಆಯ್ಕೆ ಮಾಡಲಾಗುತ್ತವೆ. ಸ್ಟಾಕ್‌ನಲ್ಲಿರುವ ಹೆಚ್ಚಿನ ಮಟೀರಿಯಲ್ ತೆಗೆಯಲಾಗುತ್ತದೆ. ಆದ್ದರಿಂದ ಈಗ ಹೊರ ವ್ಯಾಸವನ್ನು ಅದರ ಮಾಪನಗಳಿಗೆ ಅನುಸಾರವಾಗಿ ತಯಾರಿಸಲು ಸಿದ್ಧವಾಗಿರುತ್ತೇವೆ. ಈ ಫಿನಿಶಿಂಗ್ ಆಪರೇಶನ್‌ನ ಮೂಲಕ ಮಾಡಬಹುದು. ಪ್ರೊಗ್ರಾಮರ್ ಟ್ಯಾಬ್‌ನಿಂದ ಫಿನಿಶಿಂಗ್ ಆಪರೇಶನ್ ಆಯ್ಕೆ ಮಾಡುತ್ತೇವೆ ಮತ್ತು ಹೊರ ವ್ಯಾಸದ ಫಿನಿಶ್‌ನ ಯಂತ್ರಣೆಯನ್ನು ಮಾಡಲು ಬೇಕಾಗುವಂತಹ ಪ್ಯಾರಾಮೀಟರ್ಸ್ ಅದರಲ್ಲಿ ಸೇರಿಸುತ್ತೇವೆ.
ಹೊರ ವ್ಯಾಸದ ಗ್ರೂವಿಂಗ್ ಮತ್ತು ಥ್ರೆಡಿಂಗ್
ಹೊರ ವ್ಯಾಸಕ್ಕೆ ರಫಿಂಗ್ ಮತ್ತು ಫಿನಿಶಿಂಗ್ ಮಾಡಿದ್ದರಿಂದ, ನಮಗೆ ಯಂತ್ರಭಾಗಗಳು ಯೋಗ್ಯವಾದ ಗಾತ್ರದಲ್ಲಿ ಆಗಿವೆ ಮತ್ತು ಮುಂದಿನ ಕೆಲಸಕ್ಕೋಸ್ಕರ ಸಿದ್ಧವಾಗಿವೆ, ಆದ್ದರಿಂದ ನಾವು ಹೊರ ವ್ಯಾಸದಲ್ಲಿ ಗ್ರೂವಿಂಗ್ ಮತ್ತು ಥ್ರೆಡಿಂಗ್ ಟೂಲ್‌ಪಾಥ್‌ನ ತಯಾರಿಕೆಯ ಕುರಿತು ವಿಚಾರ ಮಾಡೋಣ.
ನಾವು ವಿಂಡೋದಲ್ಲಿರುವ ಗ್ರೂವ್ ಪರ್ಯಾಯವನ್ನು ಆಯ್ಕೆ ಮಾಡಿ, ನಾವು ಚಿತ್ರ ಕ್ರ. 7 ರಲ್ಲಿ ತೋರಿಸಿದಂತೆ ವ್ಯಾಪ್ತಿಯನ್ನು ಆಯ್ಕೆ ಮಾಡೋಣ ಮತ್ತು ನಮ್ಮ ಫಾರ್ಮ್‌ನಿಂದ ಗ್ರೂವಿಂಗ್ ಪ್ಯಾರಾಮೀಟರ್‌ಗಳ ಆಯ್ಕೆಯನ್ನು ಮಾಡೋಣ.
ಲೇಥ್‌ನಲ್ಲಿ ಯಂತ್ರಣೆಯನ್ನು ಮಾಡಲಾಗುವ ಯಂತ್ರಭಾಗಗಳಲ್ಲಿ ನಿಖರತೆಯ ಆವಶ್ಯಕತೆಯಿಂದಾಗಿ ಥ್ರೆಡಿಂಗ್ ಟೂಲ್‌ಪಾಥ್ ಸಾಮಾನ್ಯವಾಗಿ ಕೊನೆಯ ಟೂಲ್‌ಪಾಥ್ ಆಗಿರುತ್ತದೆ. ಕಚ್ಚುಗಳನ್ನು ಮಾಡಿರುವ ಭಾಗವನ್ನು ಇನ್ನೊಂದು ಭಾಗದಲ್ಲಿ ನಿಖರವಾಗಿ ಅಳವಡಿಸುವುದು ಆವಶ್ಯಕವಾಗಿದೆ. ನಾವು ಯಂತ್ರಭಾಗಗಳನ್ನು ಒಂದಕ್ಕೊಂದರಲ್ಲಿ ಸರಿಯಾಗಿ ಅಳವಡಿಸಲು ಹೊರಗಿನ ಅಥವಾ ಒಳವ್ಯಾಸದಲ್ಲಿ ಥ್ರೆಡ್ ಪ್ರೊಗ್ರಾಮ್ ಮಾಡಬಲ್ಲೆವು. ನಾವು ಟೂಲ್‌ಪಾಥ್ ಪ್ಯಾರಾಮೀಟರ್ ನೇರವಾಗಿ ಸೇರಿಸಬಲ್ಲೆವು ಅಥವಾ ಥ್ರೆಡ್ ಟೂಲ್‌ಪಾಥ್ ತಯಾರಿಸಲು ಜ್ಯಾಮಿತಿಯನ್ನು ಆಯ್ಕೆ ಮಾಡಬಲ್ಲೆವು.
ಉದಾಹರಣೆ, ನಾವು ಥ್ರೆಡ್‌ನ ಮೇಜರ್ ಮತ್ತು ಮೈನರ್ ವ್ಯಾಸದ ಕುರಿತು ಹೊರ ಥ್ರೆಡ್ ವ್ಯಾಪ್ತಿ ಮತ್ತು ಇನ್‌ಪುಟ್ ಡಾಟಾ, ಥ್ರೆಡ್‌ನ ಪ್ರಾರಂಭದ ಮತ್ತು ಕೊನೆಯ ಸ್ಥಿತಿ ಇವೆರಡರ ಆಯ್ಕೆಯನ್ನು ಮಾಡುತ್ತೇವೆ ಮತ್ತು ನಮ್ಮ ಥ್ರೆಡಿಂಗ್ ಪಾರ್ಮ್‌ನಲ್ಲಿ ಇನ್ನಿತರ ಮಹತ್ವದ ಅಂಶಗಳನ್ನೂ ಸೇರಿಸುತ್ತೇವೆ.
ಈ ಹಂತದಲ್ಲಿ ಒಂದು ಚಿಕ್ಕ ಸಿಮ್ಯುಲೇಶನ್‌ಮೂಲಕ ಹೊರ ವ್ಯಾಸದ ಪ್ರೊಫೈಲ್ ಹೊಂದಾಣಿಸಿ ನೋಡುವುದು ಯೋಗ್ಯವಾಗಿದೆ. ಈ ರೀತಿ ಮಾಡಲು ಟೂಲ್‌ಪಾಥ್ ಸಿಮ್ಯುಲೇಶನ್ ವಿಂಡೋ ಇದನ್ನು ಬಳಸಿ ರೆಂಡರರ್‌ನಲ್ಲಿರುವ ಎಲ್ಲ ಟೂಲ್‌ಪಾಥ್‌ಗಳನ್ನು ನಡೆಸಿ ನೋಡಬೇಕಾಗುತ್ತವೆ. ಅದರ ಪರಿಣಾಮವು ಈ ರೀತಿ ಕಂಡುಬರಬಹುದು.
ಡ್ರಿಲಿಂಗ್
ಹೊರ ವ್ಯಾಸಕ್ಕೆ ಎಲ್ಲ ಬದಿಗಳಲ್ಲಿಯೂ ಸಂಪೂರ್ಣವಾಗಿ ಯಂತ್ರಣೆಯನ್ನು ಮಾಡಲಾಗಿದೆ, ಇದನ್ನು ಹೊಂದಾಣಿಸಿ ನೋಡಲಾಗಿದೆ. ಆಗ ನಾವು C ಅಕ್ಷ ಬಳಸಿ ಡ್ರಿಲಿಂಗ್ ಆಪರೇಶನ್ ಮಾಡಬಲ್ಲೆವು. ಮಾಡೆಲ್‌ನಲ್ಲಿರುವ ರಂಧ್ರಗಳನ್ನು ಆಯ್ಕೆ ಮಾಡಿ ಮತ್ತು ಯೋಗ್ಯವಾದ ಡ್ರಿಲಿಂಗ್ ಸೈಕಲ್ ಆಯ್ಕೆ ಮಾಡಿ ಡ್ರಿಲಿಂಗ್ ಮಾಡಬಹುದು. 90 ಅಂಶಗಳ ರೋಟರಿ ಸ್ಪಿನ್ ಬಳಸಿದ್ದರಿಂದ ರಂಧ್ರಗಳ ವಿರುದ್ಧ ದಿಕ್ಕಿನಲ್ಲಿ ಇದೇ ಸೈಕಲ್ ಮತ್ತೆ ಮಾಡಬಹುದು ಮತ್ತು ಈ ರೀತಿಯಲ್ಲಿ ಡ್ರಿಲಿಂಗ್ ಆಪರೇಶನ್ ಪೂರ್ಣವಾಗುತ್ತದೆ.
ಪಾರ್ಟಿಂಗ್ ಮತ್ತು ಬ್ಯಾಕ್ ಫೇಸಿಂಗ್
ಕಟಿಂಗ್ ಆಫ್ ಪ್ಯಾರಾಮೀಟರ್ ಫಾರ್ಮ್‌ನಲ್ಲಿ ಸೇರಿಸಬಹುದು. ಅದರ ನಂತರ ಪಾರ್ಟಿಂಗ್ ಆಪರೇಶನ್ ಮಾಡಲು ಯೋಗ್ಯವಾದ ಪಾರ್ಟಿಂಗ್ ಟೂಲ್ ಆಯ್ಕೆ ಮಾಡಲಾಗುತ್ತದೆ. ಮುಂದಿನ ಆಪರೇಶನ್ ಮಾಡುವ ಮುಂಚೆ ಯಂತ್ರಭಾಗಗಳ ಹಿಂಭಾಗದಲ್ಲಿ ಫೇಸಿಂಗ್ ಮಾಡುವುದು, ಇದೊಂದು ಸೂಕ್ತವಾದ ರೂಢಿಯಾಗಿದೆ.
‘ಸ್ಟಾಕ್ ಫ್ಲಿಪ್’ ಕಮಾಂಡ್‌ನಿಂದಾಗಿ ತಮಗೆ ಲೇಥ್‌ನಲ್ಲಿ ಯಂತ್ರಣೆಯನ್ನು ಮಾಡುವಂತಹ ಯಂತ್ರಭಾಗಗಳ ಹಿಂಭಾಗದಲ್ಲಿ ಅಥವಾ ವಿರುದ್ಧ ದಿಕ್ಕಿನ ಕೆಲಸದ ಪ್ರೊಗ್ರಾಮ್ ತಯಾರಿಸಬಹುದು. ಸ್ಟಾಕ್ ಫ್ಲಿಪ್ ಆಪರೇಶನ್ ಎನ್.ಸಿ. ಕೋಡ್‌ನಲ್ಲಿ ಒಂದು ವಿಶ್ಲೇಷಣೆ ಮತ್ತು ಪ್ರೊಗ್ರಾಮ್ ಸ್ಟಾಪ್ ಇಂತಹ ಔಟ್‌ಪುಟ್‌ಗಳನ್ನು ನೀಡುತ್ತದೆ. ಇದರಿಂದಾಗಿ ಆಪರೇಟರ್ ಸ್ವಂತ ಸ್ಟಾಕ್ ಹೊರಗೆ ತೆಗೆಯುತ್ತಾನೆ ಮತ್ತು ಚಕ್‌ನಲ್ಲಿ ಅದರ ಸ್ಥಾನವನ್ನು ಬದಲಾಯಿಸುತ್ತಾನೆ (ಫ್ಲಿಪ್ ಮಾಡುತ್ತಾನೆ). ಒಂದು ಸಲ ಈ ಯಂತ್ರಭಾಗವನ್ನು ಯೋಗ್ಯಸ್ಥಾನದಲ್ಲಿ ಇಟ್ಟಲ್ಲಿ, ಬ್ಯಾಕ್ ಪಾರ್ಟಿಂಗ್ ಮತ್ತು ಬ್ಯಾಕ್ ಪೇಸಿಂಗ್ ಆರಂಭಿಸಲ್ಪಡುತ್ತದೆ.
ಒಳವ್ಯಾಸದ ಡ್ರಿಲಿಂಗ್
ಇದರಲ್ಲಿರುವ ಎರಡು ರಂಧ್ರಗಳನ್ನು ಸ್ಟ್ಯಾಂಡರ್ಡ್ ಡ್ರಿಲ್ ಬಳಸಿ ತಯಾರಿಸಬಹುದಾಗಿದೆ. ಇದಕ್ಕೋಸ್ಕರ ನಾವು ಡ್ರಿಲಿಂಗ್ ಆಪರೇಶನ್ ಆಯ್ಕೆ ಮಾಡುತ್ತೇವೆ. ಈಗ ವಿಶಿಷ್ಟವಾದ ಆಳವಿರುವ ಪ್ಯಾರಾಮೀಟರ್‌ನ ಅಯ್ಕೆ ಮಾಡಿರಿ ಮತ್ತು ಭಾಗಗಳ ಹಿಂಭಾಗದಲ್ಲಿ ಎರಡು ರಂಧ್ರಗಳನ್ನು ಡ್ರಿಲ್ ಮಾಡಿರಿ. ಡ್ರಾಪ್ ಡೌನ್ ಬಾಕ್‌ಸ್‌ನಿಂದ ಪೇಕ್ ಡ್ರಿಲಿಂಗ್ ಈ ಪರ್ಯಾಯವನ್ನು ನಾವು ಆಯ್ಕೆ ಮಾಡುತ್ತೇವೆ ಮತ್ತು ಅದರ ನಂತರ ಅಂತಿಮ ಪರಿಣಾಮವನ್ನು ಚಿತ್ರ ಕ್ರ. 11 ರಲ್ಲಿ ತೋರಿಸಿದಂತೆ ವೀಕ್ಷಿಸಬಹುದು.
ಒಳ ವ್ಯಾಸದ ಬೋರಿಂಗ್
ಡ್ರಿಲಿಂಗ್ ಮಾಡಿದ ನಂತರ, ನಾವು ಬೋರಿಂಗ್ ಮಾಡೋಣ. ಇಲ್ಲಿ ನಾವು ರಪಿಂಗ್ ಮತ್ತು ಫಿನಿಶಿಂಗ್‌ನೊಂದಿಗೆ ಮೂರನೇ ಒಳ ವ್ಯಾಸದ ಬೋರಿಂಗ್ ಮಾಡುತ್ತೇವೆ. ಸ್ಟ್ಯಾಂಡರ್ಡ್ ಪಿನಿಶ್ ಟೂಲ್‌ಪಾಥ್ ಹೊರತುಪಡಿಸಿ ಒಳಗಿನ ವ್ಯಾಸಗಳಿಗೋಸ್ಕರ ರಫಿಂಗ್ ಮತ್ತು ಫಿನಿಶಿಂಗ್‌ನ ಟೂಲ್‌ಪಾಥ್, ಹೊರ ವ್ಯಾಸಗಳಿಗೋಸ್ಕರ ಟೂಲ್‌ಪಾಥ್‌ನಂತೆಯೇ ಇರುತ್ತವೆ. ಬೋರಿಂಗ್‌ಗೋಸ್ಕರ (ಚೇನಿಂಗ್) ಪ್ರೊಫೈಲ್ ಆಯ್ಕೆ ಮಾಡುವುದರಿಂದ ಈ ಪ್ರಕ್ರಿಯೆಯ ಪ್ರಾರಂಭವಾಗುತ್ತದೆ ಮತ್ತು ಅದರ ನಂತರ ನಮ್ಮ ರಫಿಂಗ್ ಮತ್ತು ಪಿನಿಶಿಂಗ್ ಸ್ಟ್ರೆಟಿಜಿಯ ಉಪಯೋಗವನ್ನು ಮಾಡಿ ಎರಡೂ ಕೆಲಸಗಳಿಗೋಸ್ಕರ ಪ್ಯಾರಾಮೀಟರ್‌ಗಳನ್ನು ಸೇರಿಸಲಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಬೋರಿಂಗ್ ಟೂಲ್‌ನ ಆಯ್ಕೆಯನ್ನು ಪ್ರಿಸೆಟ್ ಪ್ಯಾರಾಮೀಟರ್ ಅಥವಾ ಬಳಕೆದಾರರ ಆಯ್ಕೆಗೆ ಅನುಸಾರವಾಗಿ ಮಾಡಲಾಗುತ್ತದೆ. ಪ್ರೊಫೈಲ್ ಆಯ್ಕೆ ಮಾಡಿದ ನಂತರ, ನಾವು ಈಗ ಫಾರ್ಮ್‌ನಲ್ಲಿ ಯಂತ್ರಣೆಯ ಪ್ಯಾರಾಮೀಟರ್ ಸೇರಿಸುತ್ತೇವೆ ಮತ್ತು ಟೂಲ್‌ನ ಆಯ್ಕೆಯನ್ನು ಮಾಡುತ್ತೇವೆ. ಅದರ ನಂತರ ಈ ಕೆಳಗಿನಂತೆ ಔಟ್‌ಪುಟ್ ಸಿಗುತ್ತದೆ.
ಒಳವ್ಯಾಸದ ಥ್ರೆಡಿಂಗ್
ಈ ಸ್ಥಿತಿಯಲ್ಲಿ ಒಳ ವ್ಯಾಸಕ್ಕೆ ಯೋಗ್ಯ ಗಾತ್ರದ ಫಿನಿಶ್ ಆಗಿರುತ್ತದೆ. ನಾವು ನಮ್ಮ ಮುಂದಿನ ಮತ್ತು ಅಂತಿಮ ಆಪರೇಶನ್‌ಗೋಸ್ಕರ ಅಂದರೆ ಒಳ ಥ್ರೆಡ್ ತಯಾರಿಸಲು ಸಿದ್ಧರಾಗಿದ್ದೇವೆ. ನಾವು ಈ ಹಿಂದಿನ ಕೆಲಸಗಳಂತೆಯೇ ಈ ಕೆಲಸವನ್ನು ಪ್ರಾರಂಭ ಬಿಂದು, ಐ.ಡಿ. ಥ್ರೆಡ್ ಟೂಲ್ ಮತ್ತು ಪಾರ್ಮ್‌ನಲ್ಲಿರುವ ಥ್ರೆಡಿಂಗ್ ಪ್ಯಾರಾಮೀಟರ್‌ನ ಆಯ್ಕೆಯಿಂದ ಮಾಡಬಹುದಾಗಿದೆ.
ಐಡಿಯ ಪರಿಶೀಲನೆ
ಒಳ ಥ್ರೆಡ್‌ನ ಪ್ರೊಗ್ರಾಮಿಂಗ್ ಮಾಡಿದ ನಂತರ ನಾವು ಈಗ ಉದಾಹರಣೆಯಲ್ಲಿ ತಿಳಿಸಿರುವ ಯಂತ್ರಭಾಗಗಳ ಎಲ್ಲ ಕೆಲಸಗಳನ್ನು ಪೂರ್ತಿ ಮಾಡಿದ್ದೇವೆ. ಯಂತ್ರಭಾಗಗಳ ಟೂಲ್‌ಪಾಥ್ ಪ್ರೊಗ್ರಾಮಿಂಗ್‌ನಲ್ಲಿ ಯಾವುದೇ ಕೆಲಸವು ಉಳಿದಿಲ್ಲ, ಎಂಬುದನ್ನು ದೃಢೀಕರಿಸಲು ಈಗ ನಾವು ಎಲ್ಲ ಟೂಲ್‌ಪಾಥ್‌ನ ಸಿಮ್ಯುಲೇಶನ್ ಮಾಡಿ ನಮ್ಮ ಯೋಜನೆಯನ್ನು ಪರಿಶೀಲಿಸುವುದು ಅತ್ಯಾವಶ್ಯಕವಾಗಿದೆ. ನಾವು ಯಂತ್ರಣೆಯ ಮಾಡಿರುವ ಯಂತ್ರಭಾಗಗಳ ಇನ್‌ಪುಟ್ ಮಾಡಿರುವ 3D ಮಾಡೆಲ್‌ನೊಂದಿಗೆ ಹೋಲಿಸಲು ವಿಜ್ಯುವಲ್ ವಿಶ್ಲೇಷಣೆಯ ಟೂಲ್ ಉಪಯೋಗಿಸಿ ಪರಿಶೀಲನೆ ಮಾಡಲಾಗುತ್ತದೆ. ಅದರ ಪರಿಣಾಮವು ಈ ರೀತಿಯಲ್ಲಿ ಕಂಡುಬರುತ್ತದೆ. ಪ್ರತಿಯೊಂದು ಟೂಲ್‌ಪಾಥ್‌ನ ಸಿಮ್ಯುಲೇಶನ್ ಸಾಮಾನ್ಯವಾಗಿ ವಿಭಿನ್ನ ಬಣ್ಣಗಳ ಕೋಡ್‌ಗಳಲ್ಲಿ ತೋರಿಸಲಾಗುತ್ತದೆ. ಯಾವುದೇ ಬಡಿತ ಅಥವಾ ಗೌಜ್ ತನ್ನಷ್ಟಕ್ಕೆ ಬೇರೆಬೇರೆಯಾಗಿ ತೋರಿಸಲಾಗುತ್ತದೆ. ಇದರಿಂದಾಗಿ ಪ್ರೊಗ್ರಾಮರ್ ಇದಕ್ಕೆ ಕಾರಣವಾಗಿರುವ ತಪ್ಪಾದ ಪ್ಯಾರಾಮೀಟರ್‌ಗಳನ್ನು ಸುಧಾರಿಸಬಲ್ಲನು.
ಎನ್.ಸಿ. ಕೋಡ್ ಪೋಸ್ಟಿಂಗ್
ಈಗ ನಾವು ನಮ್ಮ ಯೋಜನೆಯ ಕೊನೆಯ ಹಂತಕ್ಕೆ ತಲುಪಿದ್ದೇವೆ. ನಾವು ಯಾವ ಪ್ರೊಗ್ರಾಮ್ ಮಾಡಿದ್ದೇವೋ, ಅದರ ಔಟ್‌ಪುಟ್ ಒಂದು ವಿಶಿಷ್ಟವಾದ ಸಿ.ಎನ್.ಸಿ. ಲೇಥ್‌ನ ಮೂಲಕ ಸ್ವೀಕಾರಾರ್ಹವಾದ ಭಾಷೆಯಲ್ಲಿ ಇರುವುದೂ ಅತ್ಯಾವಶ್ಯಕವಾಗಿದೆ. ಇದಕ್ಕೋಸ್ಕರ ಪೋಸ್ಟ್ ಪ್ರೊಸೆಸರ್ ಇಂಟರ್‌ಫೇಸ್‌ನ ಉಪಯೋಗವನ್ನು ಮಾಡಲಾಗುತ್ತದೆ. ನಾವು ನಮ್ಮ ಪೋಸ್‌ಟ್ ಪ್ರೊಸೆಸರ್ ಪಾರ್ಮ್‌ನಲ್ಲಿ ವಿಶಿಷ್ಟವಾದ ಮಶಿನ್ ಮತ್ತು ಕಂಟ್ರೋಲರ್ ಆಯ್ಕೆ ಮಾಡುತ್ತೇವೆ. ನಂತರ ಅದರಲ್ಲಿ ಪ್ರಕ್ರಿಯೆ ಮಾಡಿ ಆ ಸಿ.ಎನ್.ಸಿ. ಲೇಥ್‌ನಲ್ಲಿರುವ ವಿಶಿಷ್ಟವಾದ ಕಂಟ್ರೋಲರ್‌ಗೆ ಅನುಕೂಲವಾದಂತಹ G ಮತ್ತು M ಕೋಡ್‌ಗಳ ಫಾರ್ಮ್‌ನಲ್ಲಿ ಔಟ್‌ಪುಟ್ ಸಿಗುವಂತಹ ಟೂಲ್‌ಪಾಥ್‌ಗಳನ್ನು ಆಯ್ಕೆ ಮಾಡುತ್ತೇವೆ. ಇದನ್ನು ಮಾಡಲು ನಾವು ಔಟ್‌ಪುಟ್ ಬಟನ್‌ನ ಆಯ್ಕೆಯನ್ನು ಮಾಡುತ್ತೇವೆ.
ಸಿ.ಎನ್.ಸಿ. ಟರ್ನಿಂಗ್‌ಗೋಸ್ಕರ ಕ್ಯಾಮ್‌ನ
ಬಳಕೆಯ ಮಹತ್ವದ ಲಾಭಗಳು
>ಬಳಸಲು ಸುಲಭ, ಅತ್ಯಾಧುನಿಕ ಪ್ರೊಗ್ರಾಮಿಂಗ್ ಟೂಲ್‌ನ ಒಂದು ಸೆಟ್
>ಯಾವುದೇ ಕಾರ್ಯವಸ್ತುವನ್ನು ಕತ್ತರಿಸಲು C/Y ಅಕ್ಷದಲ್ಲಿರುವ ಯಂತ್ರಣೆಯೊಂದಿಗೆ ಸುಲಭವಾದ ರಫಿಂಗ್, ಫಿನಿಶಿಂಗ್, ಥ್ರೆಡ್, ಗ್ರೂವ್ (ಕಚ್ಚುಗಳು), ಬೋರ್ ಮತ್ತು ಡ್ರಿಲ್ ರುಟೀನ್ ಒಟ್ಟು ಮಾಡಲಾಗುತ್ತವೆ. ವಿಶ್ವಾಸಾರ್ಹವಾದ ಟೂಲ್‌ಪಾಥ್‌ನ ಪರಿಶೀಲನೆಯಿಂದಾಗಿ ಯಂತ್ರಭಾಗಗಳನ್ನು ಮೊದಲನೇ ಪ್ರಯತ್ನದಲ್ಲಿಯೇ ಯೋಗ್ಯರೀತಿಯಲ್ಲಿ ತಯಾರಿಸುವ ಕುರಿತು ನಿರ್ಧರಿಸಲಾಗುತ್ತದೆ.
>ವೇಗವಾಗಿರುವ ಟೂಲ್‌ಪಾಥ್‌ಗಳ ಸಹಾಯದಿಂದ ನಾವು ಹಲವಾರು ಕ್ಲಿಕ್‌ಗಳಲ್ಲಿ ಪ್ರೊಗ್ರಾಮ್ ಮಾಡಬಲ್ಲೆವು.
>ಪ್ರಭಾವಶಾಲಿಯಾದ ಹೊರ ಮತ್ತು ಒಳವ್ಯಾಸದ ರಫಿಂಗ್
>ಪೇಕ್ ಮೋಶನ್ ಮತ್ತು ಫುಲ್ ರೆಡಿಯಸ್ ಪ್ಲಂಜ್ ಟರ್ನಿಂಗ್ ಸೇರಿಸಲ್ಪಟ್ಟಿರುವ ಮಲ್ಟಿಪಲ್ ಡೆಪ್‌ಥ್ ಕಟ್‌ನೊಂದಿಗೆ ಗ್ರೂವಿಂಗ್
>ಸಂಪೂರ್ಣ ಮತ್ತು ಸುಲಭವಾದ ಥ್ರೆಡಿಂಗ್
>ಯಂತ್ರಣೆಗೆ ಕಠಿಣವಾದ ಮಟೀರಿಯಲ್‌ನಲ್ಲಿ ನಿಯಂತ್ರಿಸುವಂತಹ ಚಿಪ್ ಬ್ರೆಕಿಂಗ್
>ಟೂಲ್‌ಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ವಯಂಚಾಲಿತ ಗೌಜ್ ತಪಾಸಣೆ
>ಚಕ್, ಕಾರ್ಯವಸ್ತು, ಸ್ಟೆಡಿ ರೆಸ್‌ಟ್ ಮತ್ತು ಟೇಲ್‌ಸ್ಟಾಕ್ ಇವುಗಳನ್ನು ಪತ್ತೆ ಮಾಡುವಿಕೆ (ಡಿಟೆಕ್ಷನ್)
>ವಾಯರ್‌ಫ್ರೇಮ್, ಸರ್ಫೇಸ್ ಮತ್ತು ಸ್ವಾಲಿಡ್ ಮಾಡೆಲ್ ಇವುಗಳ ಸಹಜವಾದ ಯಂತ್ರಣೆ
>ಯಾವುದೇ ಗಾತ್ರದ ಭಾಗದಲ್ಲಿ ಟರ್ನಿಂಗ್ ಪ್ರೊಫೈಲ್ ತಯಾರಿಸುವುದು
>ಆಯ್ಕೆ ಮಾಡಿರುವ ಲೇಥ್‌ನಲ್ಲಿ ವಿಸ್ತಾರವಾದ ಯಂತ್ರಭಾಗಗಳ ಸೆಟಪ್, ಯಂತ್ರಭಾಗಗಳ ಹಸ್ತಾಂತರ ಮತ್ತು ಪ್ರೊಗ್ರಾಮಿಂಗ್‌ನ ಪರ್ಯಾಯ.
ವಿನೀತ್ ಸೇಠ್
ವ್ಯವಸ್ಥಾಪಕ ನಿರ್ದೇಶಕರು,
ಮಾಸ್ಟರ್‌ಕ್ಯಾಮ್ ಇಂಡಿಯಾ ಪ್ರೈ.ಲಿ.
7378552000
ವಿನೀತ್ ಸೇಠ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಬಿಝಿನೆಸ್ ಎಡ್‌ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ‘ಮಾಸ್ಟರ್‌ಕ್ಯಾಮ್ ಇಂಡಿಯಾ ಪ್ರೈ. ಲಿ.’ ಈ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಉತ್ಪಾದನೆಗೆ ಸಂಬಂಧಪಟ್ಟ ಸಾಪ್ಟ್‌ವೇರ್ ಕ್ಷೇತ್ರದಲ್ಲಿ 21 ವರ್ಷಗಳ ಅನುಭವ ಅವರಿಗಿದೆ.