ಹೆಚ್ಚಿನ ಉದ್ಯಮಗಳಲ್ಲಿ ಸ್ಟೀಲ್‌ನ ಯಂತ್ರಭಾಗಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಹೆಚ್ಚು ಕಠಿಣತೆ ಇರುವ ಸ್ಟೀಲ್‌ನ ಯಂತ್ರಣೆಯಲ್ಲಿ ಅಂದಾಜು 70% ಸಮಯ ಮತ್ತು ಖರ್ಚು ಹೆಚ್ಚುತ್ತದೆ. ಇದರಿಂದಾಗಿ P ಗ್ರೇಡ್‌ನ ಸ್ಟೀಲ್ ಟರ್ನಿಂಗ್ ಮಾಡುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಕಡಿಮೆ ವೇಳೆಯಲ್ಲಿ ಹೆಚ್ಚು ಉತ್ಪಾದನೆ, ಕಡಿಮೆ ರಿಜೆಕ್ಷನ್ ಈ ವಿಧದ ಅಪೇಕ್ಷೆ ಮತ್ತು ಸ್ಪರ್ಧೆಗಳನ್ನು ಎದುರಿಸುತ್ತಿರುವಾಗ ಕಟಿಂಗ್ ರೇಟ್ ಮತ್ತು ಫೀಡ್ ರೇಟ್ ಹೆಚ್ಚಿಸುವುದು ಅಗತ್ಯವಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಟೂಲ್ ಅಥವಾ ಇನ್ಸರ್ಟ್ ತುಂಡಾಗುವುದು, ಇನ್ಸರ್ಟ್‌ಗಳ ಬದಿಗಳಿಗೆ ಕ್ರ್ಯಾಕ್‌ಗಳು ಉಂಟಾಗುವುದು, ಅದರಿಂದ ಚಿಕ್ಕ ತುಂಡುಗಳು ಉಂಟಾಗುವುದು ಇತ್ಯಾದಿ ಅಂಶಗಳಿಂದಾಗಿ ರಿಜೆಕ್ಷನ್ ಹೆಚ್ಚಾಗುತ್ತದೆ, ಅಲ್ಲದೇ ಟೂಲ್‌ಗಳ ಬೆಲೆ ವೃದ್ಧಿಸುತ್ತದೆ ಮತ್ತು ಉತ್ಪಾದನೆಯ ಪ್ರಕ್ರಿಯೆಯೂ ಜಟಿಲವಾಗುತ್ತದೆ. ಸ್ಟೀಲ್‌ನಲ್ಲಿ ಮಿಶ್ರಲೋಹಗಳ ಪ್ರಮಾಣ, ಅದರ ಹಾರ್ಡ್‌ನೆಸ್ ಹೆಚ್ಚಾಗುತ್ತಿದ್ದಂತೆ ಅದರಲ್ಲಿ CVD/PVD ಈ ಟೂಲ್‌ಗಳನ್ನು ಬಳಸುವುದು ತುಂಬಾ ಆವಶ್ಯಕತೆ ಇರುತ್ತದೆ.
ಇತ್ತೀಚೆಗೆ ಟಂಗಾಲಾಯ್‌ಯಲ್ಲಿ ನಾವು ISO P25 ಗ್ರೂಪ್‌ಗೋಸ್ಕರ ಉಚ್ಚಗುಣಮಟ್ಟದ ಲೇಪನ ಮಾಡಿರುವ (ಕೋಟೆಡ್) ಕಾರ್ಬೈಡ್ 9225 ಇನ್ಸರ್ಟ್ ಅಭಿವೃದ್ಧಿ ಮಾಡಲಾಗಿದೆ. ಅನೇಕ ವಿಧದ ಸ್ಟೀಲ್ ಟರ್ನಿಂಗ್‌ಗೋಸ್ಕರ ಉಪಯುಕ್ತವಾದ ಈ ಇನ್ಸರ್ಟ್‌ಗಳಿಗೆ ಟೂಲ್‌ಗಳ ಬಾಳಿಕೆಯನ್ನು ಹೆಚ್ಚಿಸುವಲ್ಲಿ ಮತ್ತು ನಿರಂತರವಾದ ಪ್ರಕ್ರಿಯೆಗೆ ಬೇಕಾಗಿರುವ ಸ್ಥಿರತೆಯನ್ನು ನೀಡುತ್ತವೆ. ನಮ್ಮ ‘ಪ್ರಿಮಿಯರ್ ಟೆಕ್’ ಎಂಬ ವಿಶೇಷವಾದ ಲೇಪನ ಪ್ರಕ್ರಿಯೆಯಿಂದಾಗಿ (ಸ್ಪೆಶಲ್ ಕೋಟಿಂಗ್ ಪ್ರೊಸೆಸ್) ಈ ಇನ್ಸರ್ಟ್‌ನ ಶಾರ್ಪ್‌ನೆಸ್ ದೃಢವಾಗಿಸಿದೆ. ವಾಹನ ಉದ್ಯಮಗಳು ಮತ್ತು ಇನ್ನಿತರ ವರ್ಕ್‌ಶಾಪ್‌ಗಳಲ್ಲಿ ಅನೇಕ ವಿಧದ ಟರ್ನಿಂಗ್ ಆಪರೇಶನ್ ಮಾಡುವಾಗ ಈ ಇನ್ಸರ್ಟ್‌ನ ಉಪಯೋಗವು ತುಂಬಾ ಒಳ್ಳೆಯದಾಗುತ್ತದೆ.
ಯಂತ್ರಣೆಯ ಉನ್ನತ ಒತ್ತಡ ಮತ್ತು ತುಂಬಾ ಹೆಚ್ಚು ಉಷ್ಣಾಂಶವನ್ನು ಎದುರಿಸಲು ಒಂದು ವಿಶಿಷ್ಟ ಮಿಶ್ರಣಗಳ (ಚಿತ್ರ ಕ್ರ. 1) ಈ ಇನ್ಸರ್ಟ್‌ಗಳನ್ನು ತಯಾರಿಸಲಾಗಿದೆ. ಅದರಲ್ಲಿ ಮೇಲ್ಭಾಗದಲ್ಲಿ ಟೈಟಾನಿಯಮ್‌ನ ಒಂದು ಸ್ತರ ನೀಡಲಾಗಿದೆ. ಅದರ ಮೇಲಿನ ಸ್ತರದಲ್ಲಿ ಅಲ್ಯುಮಿನಿಯಮ್ ಆಕ್ಸೈಡ್‌ನ (ಅಲ್ಯುಮಿನಾ) ಲೇಪನ ಮಾಡಲಾಗಿದೆ. ನಾಲ್ಕನೇ ಸ್ತರವು ಟೈಟಾನಿಯಮ್ ಮತ್ತು ಸಿರ್ಯಾಮಿಕ್ ಮಿಶ್ರಣಗಳದ್ದಾಗಿದ್ದು ಎಲ್ಲ ಇನ್ಸರ್ಟ್‌ಗಳಿಗೆ ಟೈಟಾನಿಯಮ್ ನೈಡ್ರೈಡ್‌ನ ಗೋಲ್ಡನ್ ಕಲರ್‌ನ ಕೋಟಿಂಗ್ ಮಾಡಲಾಗಿದೆ. ಈ ವಿವಿಧ ಸ್ತರಗಳ ಮಹತ್ವವನ್ನು ಈ ಮುಂದೆ ನೀಡಲಾಗಿದೆ.
T9200 ಸಿರೀಜ್‌ನಲ್ಲಿ AL2O3 ನ ಒಂದು ವಿಶೇಷವಾದ ಕೋಟಿಂಗ್ ಮಾಡಲಾಗಿದ್ದು ಅದರ ಹೊರ ಕೋಟಿಂಗ್ ಹಾರ್ಡ್ ಮಾಡಲಾಗಿದೆ. ಈ ರೀತಿಯ ರಚನೆಯಿಂದಾಗಿ ಇನ್ಸರ್ಟ್ ಸವೆಯುವುದಿಲ್ಲ. ‘ಪ್ರಿಮಿಯಮ್ ಟೆಕ್’ ಈ ವಿಶೇಷವಾದ ಕೋಟಿಂಗ್ ಪ್ರಕ್ರಿಯೆಯಿಂದಾಗಿ (ಸ್ಪೆಶನ್ ಕೋಟಿಂಗ್ ಪ್ರೊಸೆಸ್) ಇದರಲ್ಲಿ ಫ್ರ್ಯಾಕ್ಟರ್ ಉಂಟಾಗಿ ತುಂಡುಗಳು ಉಂಟಾಗುವುದಿಲ್ಲ.
ಗ್ರಾಫ್ ಕ್ರ.1 ರಲ್ಲಿ ತೋರಿಸಿದಂತೆ ನಿರಂತರ ಮತ್ತು ಅಡ್ಡಿಗಳುಳ್ಳ ಟರ್ನಿಂಗ್ ಆಪರೇಶನ್ ಮಾಡುವಾಗ ಮತ್ತು ವಿವಿಧ ವೇಗಗಳಲ್ಲಿ ಯಂತ್ರಣೆಯನ್ನು (ಕಟಿಂಗ್) ಮಾಡುವಾಗ T9225 ಇನ್ಸರ್ಟ್‌ಗಳು ಉಪಯುಕ್ತವಾಗುತ್ತವೆ.
T9225 ಇನ್ಸರ್ಟ್‌ನ ಮೂರು ಪ್ರಮುಖವಾದ ಲಾಭಗಳಿವೆ.
1. ಇನ್ಸರ್ಟ್‌ನ ಕನಿಷ್ಠ ಕ್ರೇಟರ್ ಸವೆತ: ಕೋಟೆಡ್ ಕಾರ್ಬೈಡ್ ಇನ್ಸರ್ಟ್ ತಯಾರಿಸುವಾಗ ಅದರಲ್ಲಿ ಟೈಟಾನಿಯಮ್, ಅಲ್ಯುಮಿನಿಯಮ್ ಆಕ್ಸೈಡ್ (ಅಲ್ಯುಮಿನಾ), ಟೈಟಾನಿಯಮ್ ಮತ್ತು ಸಿರ್ಯಾಮಿಕ್ ಮಿಶ್ರಣ ಇತ್ಯಾದಿ ಕೋಟಿಂಗ್‌ಗಳು ಇರುತ್ತವೆ. ನಮ್ಮಲ್ಲಿರುವ ಇನ್ನಿತರ ಎಲ್ಲ ಇನ್ಸರ್ಟ್‌ಗಳಿಗಿಂತ T9225 ಇನ್ಸರ್ಟ್‌ನಲ್ಲಿ ಎಲ್ಲಕ್ಕಿಂತಲೂ ಹೆಚ್ಚು ದಪ್ಪದ (1.7 ಪಟ್ಟು ಹೆಚ್ಚು) ಮತ್ತು ಹೆಚ್ಚು ಹೊಮೊಜಿನಿಯಸ್) ಅಲ್ಯುಮಿನಾ ಕೋಟಿಂಗ್ ಇರುವುದರಿಂದ ಈ ಹೊರಗಿನ ಕೋಟಿಂಗ್‌ನಲ್ಲಿ ಕ್ರಿಸ್ಟಲ್ ಓರಿಯೆಂಟೇಶನ್ ಯುನಿಡೈರೆಕ್ಷನಲ್ ಇರುತ್ತದೆ ಮತ್ತು ಅದರಿಂದಾಗಿ ಇನ್ಸರ್ಟ್ ಕ್ರೆಟರ್‌ನ ಸವೆತವೂ ಕಡಿಮೆಯಾಗುತ್ತದೆ.
2. ಇನ್ಸರ್ಟ್‌ನ ಫ್ಲಂಕ್‌ನ ಕನಿಷ್ಠ ಸವೆತ:
ಇನ್ಸರ್ಟ್‌ನಲ್ಲಿರುವ ಹೊರ ಟೈಟಾನಿಯಮ್ ಕೋಟಿಂಗ್‌ನ ಕೆಳಗೆ ಟೈಟಾನಿಯಮ್- ಸಿರ್ಯಾಮಿಕ್ ಮಿಶ್ರಣದ ಸ್ತರವು ಇರುತ್ತದೆ. ಇಂದಿನ ದಿನಗಳಲ್ಲಿ ಉಪಯೋಗಿಸಲಾಗುವ CVD ಇನ್ಸರ್ಟ್‌ಗಿಂದ ಈ ಇನ್ಸರ್ಟ್‌ನಲ್ಲಿ ಈ ಸ್ತರದ ಮಟ್ಟವು 1.5 ಪಟ್ಟು ಹೆಚ್ಚು ಕಠಿಣವಾಗಿದೆ ಮತ್ತು ಎರಡರಷ್ಟು ದಪ್ಪವೂ ಇರುತ್ತದೆ. ಇದರಿಂದಾಗಿ ಇನ್ಸರ್ಟ್‌ನ ಫ್ಲಂಕ್‌ನ ಸವೆತವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಇದರೊಂದಿಗೆ ಸಾಮಾನ್ಯವಾಗಿ ಇನ್ಸರ್ಟ್‌ನ ಕಟಿಂಗ್ ಎಡ್‌ಜ್‌ನ ಸವೆತವು ಅದರ ಬೂದು ಬಣ್ಣದಿಂದಾಗಿ ಬೇಗನೇ ಗಮನಕ್ಕೆ ಬರುವುದಿಲ್ಲ. ಈ ಸವೆತವೂ ತಕ್ಷಣ ಗಮನಕ್ಕೆ ಬರಲು ಇನ್ಸರ್ಟ್‌ನಲ್ಲಿ ಟೈಟ್ಯಾನಿಯಮ್ ನೈಟ್ರೈಡ್‌ನ ಹಳದಿ ಬಣ್ಣದ ಕೋಟಿಂಗ್ ನೀಡಲಾಗಿದೆ. ಮುಂದಿನ ಯಂತ್ರಭಾಗಗಳ ಹಾಳಾಗಬಾರದು ಮಾಡಿರುವ ಉಪಾಯಗಳಿಂದಾಗಿ ಆಪರೇಟರ್‌ಗೆ ಕೆಲಸ ಮಾಡುವುದು ತುಂಬಾ ಸುಲಭವಾಗುತ್ತದೆ.
3. ಪ್ರೀಮಿಯಮ್ ಟೆಕ್ ಟ್ರೀಟ್‌ಮೆಂಟ್‌ನಿಂದಾಗಿ ಎಲ್ಲಕ್ಕಿಂತಲೂ ಜಾಸ್ತಿ ಫ್ರ್ಯಾಕ್ಚರ್ ರೆಸಿಸ್ಟನ್ಸ್: ಲೋಹಗಳ ಕಟಿಂಗ್ ಮಾಡುವಾಗ ಸ್ಪೀಡ್ ಮತ್ತು ಫೀಡ್ ಇವುಗಳಿಂದ ಇನ್ಸರ್ಟ್‌ಗೆ ಜೋರಾದ ಬಡಿತಗಳುಂಟಾಗುತ್ತವೆ. ಇದರಿಂದಾಗಿ ಇನ್ಸರ್ಟ್‌ನ ಕಠಿಣವಾದ ಕೋಟಿಂಗ್‌ನಲ್ಲಿ ಸೂಕ್ಷ್ಮವಾದ ಸೀಳುಗಳು ಇನ್ಸರ್ಟ್‌ನ ಒಳ ಸ್ತರದಲ್ಲಿ ನುಗ್ಗುತ್ತವೆ ಮತ್ತು ಅದರ ನಂತರ ತಕ್ಷಣವೇ ಇನ್ಸರ್ಟ್‌ನ ತುಂಡುಗಳಾಗುತ್ತವೆ. ಇದಕ್ಕೆ ‘ಫ್ರ್ಯಾಕ್ಚರ್’ ಎಂದು ಹೇಳಲಾಗುತ್ತದೆ. ‘ಪ್ರೀಮಿಯಮ್ ಟೆಕ್’ ಟ್ರೀಟ್‌ಮೆಂಟ್‌ನಿಂದಾಗಿ ಟೂಲ್‌ನ ಸಂಪರ್ಕಕ್ಕೆ ಬರುವಂತಹ ಕಾರ್ಯವಸ್ತುವಿನ ಭಾಗವು ಹೆಚ್ಚು ನುಣುಪಾಗುವುದರಿಂದ ಇನ್ಸರ್ಟ್‌ನಲ್ಲಿ ಸೀಳುಗಳುಂಟಾಗುವ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಈ ಇನ್ಸರ್ಟ್ ಅಭಿವೃದ್ಧಿ ಮಾಡುವಾಗ ನಾವು ವಿವಿಧ ಪರೀಕ್ಷಣೆಗಳನ್ನು ನಡೆಸಿದೆವು. ಉದ್ಯಮ ಕ್ಷೇತ್ರದಲ್ಲಿರುವ ಇನ್ನಿತರ ಇನ್ಸರ್ಟ್‌ಗಳನ್ನು ನಮ್ಮ ಕಂಪನಿಯ ಇನ್ಸರ್ಟ್‌ಗಳು ಮತ್ತು ನಾವು ಸಂಶೋಧಿಸಿರುವ T9225 ಇನ್ಸರ್ಟ್ ಬಳಸಿ ಸ್ಟೀಲ್ ಯಂತ್ರಭಾಗಗಳ ಯಂತ್ರಣೆಯನ್ನು ಮಾಡಿ ಅದರಿಂದ ಹಲವಾರು ತೀರ್ಮಾನಗಳನ್ನು ಮಾಡಿದೆವು. ಇದರಲ್ಲಿ T9225 ಇನ್ಸರ್ಟ್‌ಗೆ ಹೆಚ್ಚು ಬಾಳಿಕೆ ಇದೆ, ಎಂಬುದೂ ಗಮನಕ್ಕೆ ಬಂತು. ಇದರ ಕುರಿತಾದ ಮಾದರಿ ತಪಾಸಣೆಯನ್ನು ಮಾಡಿರುವ ವಿವರಗಳನ್ನು ಈ ಮುಂದೆ ನೀಡಲಾಗಿದೆ.
ಕೇಸ್ ಸ್ಟಡಿ
ಭಾಗ : ಪೈಪ್
ಕೆಲಸದ ಮಟೀರಿಲ್ : SM490 (ST52-3)
ಅಪ್ಲಿಕೇಶನ್ : ಹೊರಭಾಗದ ಯಂತ್ರಣೆ
ಮಶಿನ್ : ಎನ್.ಸಿ.ಲೇಥ್
>ಟೂಲ್‌ನ ಆಯುಷ್ಯದಲ್ಲಿ 1.3 ಪಟ್ಟು ಹೆಚ್ಚಳವಾಯಿತು.
>ಯಂತ್ರಣೆಯ ಸಮಯದಲ್ಲಿ 30% ಸುಧಾರಣೆಯಾಯಿತು.
>ಇನ್ಸರ್ಟ್ ಮತ್ತು ಪ್ಯಾರಾಮೀಟರ್ (ಕೋಷ್ಟಕ ಕ್ರ. 1) ಬದಲಾಯಿಸಿದ ನಂತರ ಟೂಲ್‌ನ ಆಯುಷ್ಯವು ಸುಧಾರಿಸಿತು ಮತ್ತು ಉತ್ಪಾದಕತೆಯೂ (ಕೋಷ್ಟಕ ಕ್ರ. 2) ಎರಡರಲ್ಲಿಯೂ ಹೆಚ್ಚಳವಾಯಿತು.
ಜಯ ಶಾಹ
ವ್ಯವಸ್ಥಾಪಕ ನಿರ್ದೇಶಕರು,
ಟಂಗಾಲಯ್ ಇಂಡಿಯಾ ಪ್ರೈ. ಲಿ.
9960102221
ಜಯ ಶಾಹ ಇವರು ಟಂಗಲಾಯ್ ಇಂಡಿಯಾ ಪ್ರೈ. ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ.