ನ್ಯೂಟ್ರಲ್ ಟೂಲ್ ಉಪಯೋಗಿಸಿ ಅಂತರ್ಗೋಲದ ಯಂತ್ರಣೆ

@@NEWS_SUBHEADLINE_BLOCK@@

Lohkarya - Udyam Prakashan    15-Dec-2018   
Total Views |
ಸಿ.ಎನ್.ಸಿ. ಲೇಥ್‌ನಲ್ಲಿ ಅಂತರ್‌ಗೋಲಾಕಾರದ ಟರ್ನಿಂಗ್ ಮಾಡುವುದು, ಇದು ಒಂದು ಸರಳವಾದ ಇಂಟರ್‌ಪೊಲೇಶನ್ ಆಗಿದೆ. ಕೋಆರ್ಡಿನೇಟ್ಸ್‌‌ನ್ನು ತಪ್ಪಿಲ್ಲದೆ ಆಯ್ಕೆ ಮಾಡಿದರೂ ಕೂಡಾ, ಇಂತಹ ಕಾರ್ಯವಸ್ತುವಿನ (ಜಾಬ್‌ ನ) ಗುಣಮಟ್ಟವು ಇನ್ನಿತರ ಅನೇಕ ವಿಷಯಗಳಲ್ಲಿ ಅವಲಂಬಿಸಿರುತ್ತದೆ. ಒಂದು ವೇಳೆ ಅಪೇಕ್ಷಿಸಿರುವ ಗುಣಮಟ್ಟವು ಪರಿಪೂರ್ಣವಾಗಿ (ಬ್ಲ್ಯೂ ಮ್ಯಾಚಿಂಗ್) ಬೇಕಿದ್ದಲ್ಲಿ, ಅದರ ಮೇಲ್ಪದರದ ಫಿನಿಶ್ ಒಂದೇ ತರಹದಲ್ಲಿರಬೇಕು ಮತ್ತು ಮಧ್ಯಭಾಗದಲ್ಲಿ ಯಾವುದೇ ಎತ್ತರ ಮತ್ತು ತಗ್ಗು ಭಾಗವು ಇರಬಾರದು.
(ಬ್ಲ್ಯೂ ಮ್ಯಾ ಚಿಂಗ್ - ಬ್ಲ್ಯೂ ಮ್ಯಾಚಿಂಗ್ ಈ ಯಂತ್ರಣೆಯನ್ನು ಮಾಡಿರುವ ಸಮತಲದಲ್ಲಿರುವ ಉಚ್ಚ ಬಿಂದುವನ್ನು ಪರೀಕ್ಷಿಸಲು ಮಾಡುವುವಂತಹ ಒಂದು ಪರೀಕ್ಷೆಯಾಗಿರುತ್ತದೆ)
 

15_1  H x W: 0  
 
ಅಂತರ್‌ಗೋಲಕ್ಕೆ ಟರ್ನಿಂಗ್ ಮಾಡಲು ಮುಂದಿನ ಕೆಲವಾರು ವಿಷಯಗಳನ್ನು ಗಮನಿಸುವುದು ಆಗತ್ಯವಾಗಿದೆ.
• ಸೆಂಟರ್‌ನ ಎತ್ತರ 0.05 ರಿಂದ 0.1 (ಮಿ.ಮೀ.) ಅಕ್ಷದಿಂದ ಮೇಲೆ ಇರಬೇಕು.
• ಟೂಲ್‌ನ ಪ್ರವೇಶವು ಹೊರಗಿನಿಂದ ದೀರ್ಘ ಅಥವಾ ವಿಸ್ತಾರವಾಗಿ ಬ್ರಾಕೆಟ್‌ನಲ್ಲಿ ಆಗಬೇಕು.
• ಎಕ್ಸಿಟ್‌ ಕೂಡಾ ಬ್ರಾಕೆಟ್‌ನಲ್ಲಿಯೇ ಆಗಬೇಕು. ಎಕ್ಸಿಟ್‌ನ ಬ್ರಾಕೆಟ್‌ನ ತ್ರಿಜ್ಯವು ಟೂಲ್‌ನ ನೋಜ್‌ನ ತ್ರಿಜ್ಯಕ್ಕಿಂತ ಮೂರುಪಟ್ಟು ಇರಬೇಕು.
• ಎಕ್ಸ್‌-ಆಪ್‌ ಸೆಟ್ ತಪ್ಪಿಲ್ಲದೇ ಇರಬೇಕು.
1. ಒಂದು ವೇಳೆ ಅದು ಜಾಸ್ತಿ ಇದ್ದಲ್ಲಿ, ಬ್ಲ್ಯೂ ಸಿಟಿಂಗ್ ಸಮಸ್ಯೆಯು ಉದ್ಭವಿಸುತ್ತದೆ.
 

2_1  H x W: 0 x 
 
2. ಒಂದು ವೇಳೆ ಕಡಿಮೆ ಇದ್ದಲ್ಲಿ, ಬ್ಲ್ಯೂ ಸೀಟಿಂಗ್ ಸಮಸ್ಯೆಯು ಉದ್ಭವಿಸುತ್ತದೆ ಮತ್ತು ಕೇಂದ್ರದಲ್ಲಿ ಸಮತಲವು ಕಾಣುತ್ತದೆ.
ಟೂಲ್ ನೋಜ್ ರೇಡಿಯಸ್ ಕಾಂಪೆನ್ಸೇಶನ್ (ಟಿಎನ್‌ಆರ್‌ಸಿ) : ಬ್ಲ್ಯೂ ಮ್ಯಾಚಿಂಗ್ ಆಗಲು ಸಾಫ್ಟ್‌‌ವೇರ್‌ನಲ್ಲಿ ಸಮಾಯೋಜನೆಯನ್ನು ಮಾಡುವುದು ಅವಶ್ಯಕವಾಗಿದೆ. (ಟಿಪ್ಪಣಿ- ಯಂತ್ರಣೆಯನ್ನು ಮಾಡಿರುವ ಕಾರ್ಯವಸ್ತುವಿನ ತ್ರಿಜ್ಯವನ್ನು ಮಶಿನಿನಲ್ಲಿ ನೇರವಾಗಿ ಅಳೆಯಲಾಗುವುದಿಲ್ಲ. ಒಂದು ವೇಳೆ ಸೆಟಿಂಗ್‌ನ ಪ್ರಕ್ರಿಯೆಯನ್ನು ಯೋಗ್ಯವಾಗಿ ಮಾಡದಿದ್ದರೆ, ತುಂಬಾ ಕಾರ್ಯವಸ್ತುಗಳು ಸ್ವಿಕಾರವಾಗುವ ಸಾಧ್ಯತೆಯೂ ಇರುವುದಿಲ್ಲಾ ಮತ್ತು ಉತ್ಪಾದನೆಯು ಕಡಿಮೆ ಆಗುವ ಸಾಧ್ಯತೆಯೂ ಇರುತ್ತದೆ.

sdcfv_1  H x W: 
 
ಪ್ರೋಗ್ರಾಮ್
O2121 (ಕಾನ್ ಕೇವ್ ಟರ್ನಿಂಗ್)
(ಏಸ ಡಿಸೈನರ್ಸ್ ಲಿ.)
N1 G0 G21 G40
T0000X0.0Z0.0
T0101
G92S3000
G96S250 M04
M07
(ಸೆಮಿ ಫಿನಿಶ್)
GO x45.0 Z5.0
G1 G41 x 44.849 Z1.25 F1.0
X42.849 F0.2
G3X0 Z-7.75 R30.0 F0.12
G3 x0.695 Z-7 719 R2.0 (ಆರ್ಕ್ ಎಕ್ಸಿಟ್)
G0 G40 Z5.0
(ಫಿನಿಶ್)
G0 x 45.0 Z5.0
G1 G41 x 44.849 Z1.0 F1.0
X42.849 F0.2
G3 x 0 Z-8.0 R30.0 F0.12
G3 x-0.695 Z-7.969 R2.0 (ಆರ್ಕ್ ಎಕ್ಸಿಟ್)
G0 G40 Z10.0 M09
H97S100
M5 T00000X0.0Z0.0
M30
%
@@AUTHORINFO_V1@@